ಇಂಗ್ಲೆಂಡನ್ನು 5-0ಯಿಂದ ಸೋಲಿಸುವ ಸಾಮರ್ಥ್ಯ ಭಾರತಕ್ಕಿದೆ: ಪನೇಸರ್

ಲಂಡನ್: ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಆತಿಥೇಯ ಇಂಗ್ಲೆಂಡ್ ತಂಡವನ್ನು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 5-0ಯಿಂದ ಸೋಲಿಸುವ ಸಾಮರ್ಥ್ಯ ಹೊಂದಿದೆ ಎಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಹೇಳಿದ್ದಾರೆ. ಈ ಮೂಲಕ ಭಾರತಕ್ಕೆ 14 ವರ್ಷಗಳ ಬಳಿಕ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಅವಕಾಶವಿದೆ ಎಂದು ಪನೇಸರ್ ಅಭಿಪ್ರಾಯಿಸಿದ್ದಾರೆ.
ಜುಲೈ 2ಕ್ಕೆ ಇಂಗ್ಲೆಂಡ್‌ಗೆ ತೆರಳಲಿರುವ ಭಾರತ ಕ್ರಿಕೆಟ್ ತಂಡ ಅಲ್ಲಿ ಜೂನ್ 18ರಿಂದ 22ರ ವರೆಗೆ ನ್ಯೂಜಿಲೆಂಡ್ ವಿರುದ್ಧ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲಿದೆ. ಬಳಿಕ ಆತಿಥೇಯರ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಟೆಸ್ಟ್ ಸರಣಿ ಆಗಸ್ಟ್ 4ರಿಂದ ಆರಂಭಗೊಳ್ಳಲಿದೆ.
'ನನಗನ್ನಿಸುತ್ತದೆ ಭಾರತ ತಂಡ ಒಳ್ಳೆಯ ಸಮಯದಲ್ಲಿ ಇಂಗ್ಲೆಂಡ್‌ಗೆ ಹೋಗುತ್ತಿದೆ. ಆಗಸ್ಟ್‌ನಲ್ಲಿ ಬೆಚ್ಚಗಿನ ವಾತಾವರಣ ಇಂಗ್ಲೆಂಡ್‌ನಲ್ಲಿರಲಿದೆ. ಅವರು ಇನ್ನೂ ಎರಡು ಸ್ಪಿನ್ನರ್‌ಗಳೊಂದಿಗೆ ಇಂಗ್ಲೆಂಡ್ ಪರಿಸ್ಥಿತಿಯಲ್ಲಿ ಆಡಬಹುದು. ಸದ್ಯದ ಭಾರತ ತಂಡಕ್ಕೆ ಸರಣಿಯಲ್ಲಿ ಆಂಗ್ಲರನ್ನು 5-0ಯಿಂದ ಸೋಲಿಸುವ ಸಾಮರ್ಥ್ಯವಿದೆ,' ಎಂದು ಪನೇಸರ್ ಹೇಳಿದ್ದಾರೆ.
'ಅಲಾಸ್ಟೇರ್ ಕುಕ್ ಬಳಿಕ ಇಂಗ್ಲೆಂಡ್ ಟಾಪ್ ಆರ್ಡರ್ ಭರವಸೆ ಹುಟ್ಟಿಸುವ ರೀತಿಯಲ್ಲಿಲ್ಲ. ಒಂದು ವೇಳೆ ಭಾರತ ಇಂಗ್ಲೆಂಡನ್ನು ಕ್ಲೀನ್‌ಸ್ವೀಪ್ ಮಾಡಿದರೆ ಅದು ವಿದೇಶದಲ್ಲಿ ಭಾರತ ದಾಖಲಿಸಿದ ಅತೀ ದೊಡ್ಡ ಸರಣಿ ಗೆಲುವುಗಳ ಪಟ್ಟಿಗೆ ಸೇರಿಕೊಳ್ಳಲಿದೆ ಎಂದು,' ಮಾಂಟಿ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications