ಟೀಮ್ ಇಂಡಿಯಾ ಹೊಸ ಕೋಚ್‌ಗೆ 2021ರ ವರ್ಲ್ಡ್ ಟಿ20 ವರೆಗೆ ಗದ್ದುಗೆ

ನವದೆಹಲಿ, ಆಗಸ್ಟ್ 16: ಭಾರತದ ಕ್ರಿಕೆಟ್ ಸಲಹಾ ಸಮಿತಿಯಲ್ಲಿರುವ ಮಾಜಿ ನಾಯಕ ಕಪಿಲ್ ದೇವ್, ಮಾಜಿ ಆರಂಭಿಕ ಬ್ಯಾಟ್ಸ್ಮನ್ ಅಂಶುಮಾನ್ ಗಾಯಕ್ವಾಡ್ ಮತ್ತು ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅವರ ತಂಡ ಶುಕ್ರವಾರ (ಆಗಸ್ಟ್ 16) ಟೀಮ್ ಇಂಡಿಯಾದ ನೂತನ ಕೋಚ್ ಹೆಸರನ್ನು ಪ್ರಕಟಿಸಲಿದೆ.
ಶುಕ್ರವಾರ ಸುಮಾರು 7 pm ಹೊತ್ತಿಗೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಯಾರೆಂಬುದನ್ನು ಬಿಸಿಸಿಐ ಘೋಷಿಸಲಿದೆ. ನೂತನ ಕೋಚ್ 2021ರ ವರ್ಲ್ಡ್ ಟಿ20 ವರೆಗೆ ತಂಡವನ್ನು ಮುನ್ನಡೆಸಲಿದ್ದಾರೆ. ಸದ್ಯ ರವಿ ಶಾಸ್ತ್ರಿ ಅವರೇ ಮುಖ್ಯ ಕೋಚ್ ಜವಾಬ್ದಾರಿಯಲ್ಲಿ ಮುಂದುವರೆಯಲಿದ್ದಾರೆ ಎನ್ನಲಾಗುತ್ತಿದೆಯಾದರೂ ಅಂತಿಮವಾಗಿ ಬೇರೆ ಹೆಸರು ಕಾಣಿಸಿಕೊಂಡರೂ ಅದರಲ್ಲಿ ಅಚ್ಚರಿಯಿಲ್ಲ.
'ನೂತನ ಕೋಚ್ 2021ರ ವರ್ಲ್ಡ್ ಟಿ20 ವರಗೆ ಮುಂದುವರೆಯಲಿದ್ದಾರೆ. ಅನಂತರ, ಇತ್ತೀಚಿನ ವರ್ಷಗಳಲ್ಲಿನ ಪ್ರವೃತ್ತಿಯಂತೆ ಮರು ಆಯ್ಕೆ ಅಥವಾ ಹೊಸ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬೆಂಬಲ ಸಿಬ್ಬಂದಿಯೂ 2021ರ ವಿಶ್ವ ಟಿ20 ವರೆಗೆ ಜವಾಬ್ದಾರಿ ಹೊರಲಿದ್ದಾರೆ,' ಎಂದು ಬಿಸಿಸಿಐ ಕಾರ್ಯಕಾರಿ ಐಎಎನ್‌ಎಸ್‌ಗೆ ತಿಳಿಸಿದೆ.
ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ಶಾಸ್ತ್ರಿ ಹೊರತಾಗಿ, ಶ್ರೀಲಂಕಾ ಮಾಜಿ ಕೋಚ್ ಟಾಮ್ ಮೂಡಿ, ನ್ಯೂಜಿಲೆಂಡ್ ಮಾಜಿ ಕೋಚ್ ಮೈಕ್ ಹೆಸನ್, 2007ರ ವಿಶ್ವ ಟಿ20 ವಿಜೇತ ಭಾರತ ತಂಡದ ಮ್ಯಾನೇಜರ್ ಆಗಿದ್ದ ಲಾಲ್‌ಚಂದ್ ರಜಪೂತ್, ಮುಂಬೈ ಇಂಡಿಯನ್ಸ್ ಮಾಜಿ ಹೆಡ್ ಕೋಚ್ ರಾಬಿನ್ ಸಿಂಗ್ ಮತ್ತು ವೆಸ್ಟ್ ಇಂಡೀಸ್-ಅಫ್ಘಾನಿಸ್ತಾನ ಮಾಜಿ ಕೋಚ್ ಫಿಲ್ ಸಿಮನ್ಸ್ ಶಾರ್ಟ್ ಲಿಸ್ಟ್‌ನಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications