Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾಕ್ಕೆ ಟೀಮ್ ಇಂಡಿಯಾ ಪ್ರವಾಸ: ಸಂಪೂರ್ಣ ವೇಳಾಪಟ್ಟಿ

Team India in Australia 2020-21: Full Schedule

ಸಿಡ್ನಿ, ಮೇ 28: ಈ ವರ್ಷ ಟೀಮ್ ಇಂಡಿಯಾವು ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡಾಗ ಪಾಲ್ಗೊಳ್ಳಲಿರುವ ಸರಣಿಗೆ ಸಂಬಂಧಿಸಿ ಕ್ರಿಕೆಟ್ ಆಸ್ಟ್ರೇಲಿಯಾವು ವೇಳಾಪಟ್ಟಿ ಪ್ರಕಟಿಸಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕಾದಾಡಲಿವೆ. ಕಳೆದ ವರ್ಷ ಕೊಹ್ಲಿ ಪಡೆ ಈ ಟ್ರೋಫಿ ಜಯಿಸಿ ಇತಿಹಾಸ ನಿರ್ಮಿಸಿತ್ತು. ಈ ಬಾರಿ ಇತ್ತಂಡಗಳ ಕದನ ಇನ್ನೂ ಕುತೂಹಲಕಾರಿ ಎನಿಸಿದೆ. ಯಾಕೆಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎರಡೂ ತಂಡಗಳು ಇನ್ನಷ್ಟು ಬಲಿಷ್ಠವಾಗಿವೆ.

ಆಸ್ಟ್ರೇಲಿಯಾ ಪ್ರವಾಸ ಸರಣಿಯ ಪಂದ್ಯಗಳು, ಬ್ರಿಸ್ಬೇನ್‌ನ ಗಬ್ಬಾದಲ್ಲಿನ ಮೊದಲ ಟೆಸ್ಟ್ ಪಂದ್ಯದೊಂದಿಗೆ ಆರಂಭಗೊಳ್ಳಲಿದೆ. 2018-19ರ ಸೀಸನ್‌ನಲ್ಲಿ ಯಶಸ್ವಿ ಪ್ರವಾಸ ಮುಗಿಸಿದ್ದ ಭಾರತ ಗಬ್ಬಾ ಸ್ಟೇಡಿಯಂನಲ್ಲಿ ಪಂದ್ಯ ಆಡಿರಲಿಲ್ಲ.

ಆಸ್ಟ್ರೇಲಿಯಾಕ್ಕೆ ವಿರಾಟ್ ಕೊಹ್ಲಿ ಪಡೆ ಪ್ರವಾಸ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಒಂದು ಪಿಂಕ್‌ ಬಾಲ್‌ ಟೆಸ್ಟ್

ಒಂದು ಪಿಂಕ್‌ ಬಾಲ್‌ ಟೆಸ್ಟ್

ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳುವ ಕೊಹ್ಲಿ ಪಡೆ ಅಡಿಲೇಡ್‌ನ ಓವಲ್‌ನಲ್ಲಿ ಡೇ ನೈಟ್ ಟೆಸ್ಟ್‌ನಲ್ಲಿ ಆಡಲಿದೆ. ಡಿಸೆಂಬರ್‌ನಲ್ಲಿ ಈ ಪಿಂಕ್‌ ಬಾಲ್‌ ಟೆಸ್ಟ್‌ ನಡೆಯಲಿದೆ. ಭಾರತ ತಂಡ ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಚೊಚ್ಚಲ ಬಾರಿಗೆ ಡೇ-ನೈಟ್ ಟೆಸ್ಟ್‌ನಲ್ಲಿ ಆಡಿತ್ತು. ಅದಾಗಿ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಡೇ ನೈಟ್‌ ಟೆಸ್ಟ್ ಪಂದ್ಯವೇ ಭಾರತದ ಪಾಲಿಗೆ ಮೊದಲ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯವಾಗಲಿದೆ.

ಜಿದ್ದಾಜಿದ್ದಿ ಎನಿಸಲಿದೆ ಸರಣಿ

ಜಿದ್ದಾಜಿದ್ದಿ ಎನಿಸಲಿದೆ ಸರಣಿ

2019ರಲ್ಲಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ ನಾಲ್ಕು ಪಂದ್ಯಗಳ ಟೆಸ್ಟ್‌ನಲ್ಲಿ 2-1ರ ಜಯದೊಂದಿಗೆ ಸರಣಿಯನ್ನೂ ಗೆದ್ದು ಇತಿಹಾಸ ನಿರ್ಮಿಸಿತ್ತು. ಆದರೆ ಆಗ ಆಸೀಸ್ ತಂಡದಲ್ಲಿ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಇರಲಿಲ್ಲ. ಇಬ್ಬರೂ ಬಲಿಷ್ಠ ಆಟಗಾರರು ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೀಡಾಗಿದ್ದರು. ಈ ಬಾರಿ ಇಬ್ಬರೂ ಮತ್ತೆ ತಂಡ ಸೇರಿಕೊಂಡಿರುವುದರಿಂದ ಕಾಂಗರೂ ಪಡೆ ಇನ್ನಷ್ಟು ಬಲಿಷ್ಠಗೊಂಡಿದೆ.

ಅಫ್ಘಾನಿಸ್ತಾನಕ್ಕೂ ಒಂದು ಟೆಸ್ಟ್

ಅಫ್ಘಾನಿಸ್ತಾನಕ್ಕೂ ಒಂದು ಟೆಸ್ಟ್

ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಹೋಗುವ ಮುನ್ನ ಅಫ್ಘಾನಿಸ್ತಾನ ತಂಡ ಆಸ್ಟ್ರೇಲಿಯಾದಲ್ಲಿ ಒಂದು ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ.
ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ, ನವೆಂಬರ್ 21-25 @ ಪರ್ತ್ ಸ್ಟೇಡಿಯಂ.

ಭಾರತ vs ಆಸ್ಟ್ರೇಲಿಯಾ

ಭಾರತ vs ಆಸ್ಟ್ರೇಲಿಯಾ

1ನೇ ಟೆಸ್ಟ್, ಡಿಸೆಂಬರ್ 3-7 @ ಗಬ್ಬಾ ಸ್ಟೇಡಿಯಂ.
2ನೇ ಟೆಸ್ಟ್, (ಡೇ-ನೈಟ್), ಡಿಸೆಂಬರ್ 11-15 @ ಅಡಿಲೇಡ್ ಓವಲ್.
3ನೇ ಟೆಸ್ಟ್, ಡಿಸೆಂಬರ್ 26-30 @ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ.
4ನೇ ಟೆಸ್ಟ್, ಜನವರಿ 3-7 @ ಸಿಡ್ನಿ ಕ್ರಿಕೆಟ್ ಸ್ಟೀಡಿಯಂ.

Story first published: Thursday, May 28, 2020, 16:22 [IST]
Other articles published on May 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+