T20 World Cup: ತಂಡದ ಮುಂದಿದೆ ದೊಡ್ಡ ಸವಾಲು: ರಾಹುಲ್ ದ್ರಾವಿಡ್
ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಎಲ್ಲ ದೇಶಗಳು ಬಲಿಷ್ಠ ತಂಡಗಳನ್ನು ಕಟ್ಟುವ ನಿಟ್ಟಿನಲ್ಲಿ ಚಿತ್ತ ಹರಿಸಿವೆ. ಈ ದಿಸೇಯಲ್ಲಿ ಟೀಮ್ ಇಂಡಿಯಾ ಮಗ್ನವಾಗಿದೆ. ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೂಡ ವಿಶ್ವಕಪ್ ಗೂ ತಂಡದಲ್ಲಿರುವ ದೊಡ್ಡ ಸಮಸ್ಯೆಯನ್ನ ವಿವರಿಸಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿಯನ್ನು ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಈ ಗೆಲುವಿನ ನಂತರ ಟೀಮ್ ಇಂಡಿಯಾ ಟಿ20 ಅಂಗಳದಲ್ಲಿ ಇನ್ನು ವಿಶ್ವಕಪ್‌ನಲ್ಲೇ ಅಖಾಡಕ್ಕೆ ಇಳಿಯಲಿದೆ. ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಎದುರಿಸಬಹುದಾದ ಸಮಸ್ಯೆಗಳ ಬಗ್ಗೆ ಕೋಚ್ ಮಾತನಾಡಿದ್ದಾರೆ. ಈ ವಿಷಯಗಳನ್ನು ಪರಿಹರಿಸಲು ಬಹಳ ಕಡಿಮೆ ಸಮಯ ಉಳಿದಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ದ್ರಾವಿಡ್ ಹೇಳಿದರು.

ಜೂನ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಕೊನೆಯ ಟಿ20 ಸರಣಿಯನ್ನು ಆಡಿತು. ಈ ಸರಣಿಯಲ್ಲಿ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಶಿವಂ ದುಬೆ, ಜಿತೇಶ್ ಶರ್ಮಾ, ಅಕ್ಸರ್ ಪಟೇಲ್ ಮತ್ತು ರವಿ ಬಿಷ್ಣೋಯ್ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡದ ನಿರ್ವಹಣೆಯ ಸಮಸ್ಯೆಯನ್ನು ಹೆಚ್ಚಿಸಿದ್ದಾರೆ.
ಈ ಕುರಿತು ಮಾತನಾಡಿದ ರಾಹುಲ್ ದ್ರಾವಿಡ್, ವಿಶ್ವಕಪ್ ಬಳಿಕ ಹಲವು ಕಾರಣಗಳಿಂದ ಬೇರೆ ಬೇರೆ ಆಟಗಾರರಿಗೆ ಅವಕಾಶ ನೀಡುತ್ತಿದ್ದೇವೆ. ನಮ್ಮಲ್ಲಿ ಹಲವು ಆಯ್ಕೆಗಳಿರುವುದು ಒಳ್ಳೆಯದು ಎಂದಿದ್ದಾರೆ.

ರಾಹುಲ್ ದ್ರಾವಿಡ್, "ಕೆಲವು ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ನಾವು ಅದರ ಬಗ್ಗೆ ಯೋಚಿಸುತ್ತಿದ್ದೇವೆ. ಒಂದೇ ಸಮಸ್ಯೆಯೆಂದರೆ ಈಗ ನಮಗೆ ಬಹಳ ಕಡಿಮೆ ಸಮಯ ಉಳಿದಿದೆ. ನಾವು ಹೆಚ್ಚು ಕ್ರಿಕೆಟ್ ಆಡಲು ಹೋಗುವುದಿಲ್ಲ. ನಮ್ಮ ತಂಡ ಐಪಿಎಲ್ ನಲ್ಲಿ ಆಡಲಿದೆ. ನಾವು ಐಪಿಎಲ್ ಅನ್ನು ಮೇಲೆ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಐಪಿಎಲ್‌ನಲ್ಲಿ ನಮ್ಮ ಆಟಗಾರರು ಹೇಗೆ ಆಡುತ್ತಾರೆ ಮತ್ತು ತಂಡದಲ್ಲಿ ಸ್ಥಾನಗಳು ಹೇಗೆ ತುಂಬುತ್ತವೆ ಎಂಬುದನ್ನು ನಾವು ನೋಡುತ್ತಿದ್ದೇವೆ ಎಂದಿದ್ದಾರೆ.
ವಿಕೆಟ್ ಕೀಪರ್ ಯಾರು?
ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಶಿವಂ ದುಬೆ 124 ರನ್ ಗಳಿಸಿ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ದುಬೆ ಅವರನ್ನು ಕೇವಲ ಆಲ್ ರೌಂಡರ್ ಆಗಿ ನೋಡಲಾಗುತ್ತಿದೆ ಎಂದು ದ್ರಾವಿಡ್ ಒಪ್ಪಿಕೊಂಡಿದ್ದಾರೆ. ದ್ರಾವಿಡ್, "ದುಬೆ ಹಲವು ವರ್ಷಗಳ ನಂತರ ಪುನರಾಗಮನ ಮಾಡಿದ್ದಾರೆ. ಈಗ ಮೊದಲಿಗಿಂತ ಉತ್ತಮ ಆಟಗಾರನಾಗಿ ಹೊರಹೊಮ್ಮಿದ್ದಾರೆ ಎಂದಿದ್ದಾರೆ.

ವಿಕೆಟ್ ಕೀಪರ್ ಆಗಿಯೂ ಟೀಮ್ ಇಂಡಿಯಾಗೆ ಜಿತೇಶ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಅವರ ರೂಪದಲ್ಲಿ ಹಲವು ಆಯ್ಕೆಗಳಿವೆ. ಪಂತ್ ಆಡುವುದು ಅವರ ಫಿಟ್ನೆಸ್ ಮೇಲೆ ಅವಲಂಬಿತವಾಗಿರುತ್ತದೆ. ವಿಶ್ವಕಪ್‌ಗೂ ಮುನ್ನ ವಿಕೆಟ್‌ಕೀಪರ್‌ನ ರಹಸ್ಯವೂ ಬಗೆಹರಿಯಲಿದೆ ಎಂದು ರಾಹುಲ್ ದ್ರಾವಿಡ್ ಒಪ್ಪಿಕೊಂಡಿದ್ದಾರೆ.
ಸದ್ಯ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ರಿಷಭ್ ಪಂತ್ ಜಿಮ್‌ನಲ್ಲಿ ವರ್ಕ್‌ಔಟ್ ನಡೆಸಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಪಂತ್, ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೆ ಈ ಬಗ್ಗೆ ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ತಾಣಗಳ ಮೂಲಕ ಅಪ್‌ಡೇಟ್ ನಿಡುತ್ತಲೆ ಇದ್ದರು. ಈಗ ಪಂತ್ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ಇತ್ತಿಚೀಗೆ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಪಂತ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾಗೂ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯನ್ನು ತಪ್ಪಿಸಿಕೊಂಡಿದ್ದರು. ಹೀಗಾಗಿ ಪಂತ್ ಐಪಿಎಲ್‌ನಲ್ಲಿ ಆಡುತ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications