Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG: ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತ ತಂಡ ಪ್ರಕಟವಾಗುವ ಮುನ್ನವೇ ಪೆಟ್ಟು: ಕಾರಣ ಏನು?

ಐಪಿಎಲ್‌ ಮುಗಿದ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಬೆಳೆಸಲಿದೆ. ಈ ವೇಳೆ ಇಂಗ್ಲೆಂಡ್‌ ವಿರುದ್ಧ ಭಾರತ ಐದು ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದೆ. ಈ ವೇಳೆ ಟೀಮ್‌ ಇಂಡಿಯಾದ ನಾಯಕ ಯಾರಾಗ್ತಾರೆ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ವೇಳೆ ತಂಡದಲ್ಲಿ ಯಾವೆಲ್ಲಾ ಆಟಗಾರರಿಗೆ ಸ್ಥಾನ ಲಭಿಸುತ್ತದೆ ಎಂಬ ಲೆಕ್ಕಾಚಾರ ಆರಂಭವಾಗಿವೆ. ಈ ಮಧ್ಯೆ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಬೇಸರದ ಸಂಗತಿಯೊಂದು ಹೊರ ಬರುತ್ತಿದೆ.

ಇಂಗ್ಲೆಂಡ್ ಪ್ರವಾಸಕ್ಕೆ ಶನಿವಾರ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ವೇಳೆ ಬಿಸಿಸಿಐ ಮುಂದೆ ಸಾಲು ಸಾಲು ಸವಾಲುಗಳು ಎದ್ದು ನಿಂತಿವೆ. ಈಗ ಬರುತ್ತಿರುವ ಸುದ್ದಿ ನಿಜಕ್ಕೂ ಬಿಸಿಸಿಐ ಆಯ್ಕೆ ಸಮಿತಿಯ ಚಿಂತೆಯನ್ನು ದುಪಟ್ಟು ಮಾಡಿದೆ. ಈ ಸರಣಿಯಲ್ಲಿ ವೇಗದ ಬೌಲರ್‌ಗಳು ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ. ಈ ವೇಳೆ ಟೀಮ್ ಇಂಡಿಯಾದ ವೇಗದ ಬೌಲರ್‌ಗಳ ಫಿಟ್ನೆಸ್‌ ಬಗ್ಗೆ ದೊಡ್ಡ ಸುದ್ದಿಯೊಂದು ಹೊರ ಬಂದಿದೆ.

Team India in Trouble Shami Out Bumrah May Miss Tests in England Due to Fitness Concerns

ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್‌ಗಳು ಈ ಸರಣಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದ್ದಾರೆ. ಇತ್ತೀಚಿಗೆ ಗಾಯದಿಂದ ಚೇತರಿಸಿಕೊಂಡಿರುವ ಮೊಹಮ್ಮದ್‌ ಶಮಿ ಭಾರತದ ಪರ ಸೀಮಿತ ಓವರ್‌ಗಳ ಪಂದ್ಯಗಳನ್ನು ಆಡಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ ಚಾಂಪಿಯನ್ಸ್‌ ಟ್ರೋಫಿಯ ತಂಡದ ಭಾಗವಾಗಿದ್ದರು. ಅಲ್ಲದೆ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರ ಆಡಿದ್ದರು. ಇವರ ಬೌಲಿಂಗ್‌ ನೋಡಿದ ಅಭಿಮಾನಿಗಳು ಕೊಂಚ ರಿಲೀಫ್‌ ಆಗಿದ್ದರು. ಆದರೆ ಈಗ ಬರುತ್ತಿರುವ ಸುದ್ದಿಯ ಪ್ರಕಾರ ಶಮಿ ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಇವರು ಇಂಗ್ಲೆಂಡ್ ಫ್ಲೈಟ್‌ ಏರುತ್ತಿಲ್ಲ ಎಂದು ತಿಳಿದು ಬಂದಿದೆ.

ಹೊರ ಬರುತ್ತಿರುವ ಸುದ್ದಿ ಏನು?

ಇನ್ನು ಟೀಮ್ ಇಂಡಿಯಾದ ನಾಯಕತ್ವದ ರೇಸ್‌ನಲ್ಲಿ ಕೇಳಿ ಬಂದಿರುವ ಹೆಸರು ಜಸ್ಪ್ರಿತ್ ಬುಮ್ರಾ ಸಹ ಇಂಗ್ಲೆಂಡ್ ಪ್ರವಾಸದಲ್ಲಿ ಐದೂ ಪಂದ್ಯಗಳು ಆಡುತ್ತಿಲ್ಲ ಎಂಬ ಬಗ್ಗೆ ವರದಿಗಳು ಹೊರ ಬಂದಿಲ್ಲ. ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಜಸ್ಪ್ರೀತ್ ಬುಮ್ರಾ ಅವರ ದೇಹವು 3 ಟೆಸ್ಟ್ ಪಂದ್ಯಗಳಿಗಿಂತ ಹೆಚ್ಚು ಪಂದ್ಯ ಆಡಲು ಸಾಧ್ಯವಿಲ್ಲ ಎಂದು ಅವರು ಈಗಾಗಲೇ ಬಿಸಿಸಿಐಗೆ ತಿಳಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಮೊಹಮ್ಮದ್ ಶಮಿ ದೀರ್ಘಕಾಲದವರೆಗೆ ಬೌಲಿಂಗ್ ಮಾಡಲು ಸಾಧ್ಯ ಇಲ್ಲ ವರದಿ ಮಾಡಿದೆ.

Team India in Trouble Shami Out Bumrah May Miss Tests in England Due to Fitness Concerns

ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಆಡುತ್ತಿರುವ ಮೊಹಮ್ಮದ್‌ ಶಮಿ ಆಡಿದ 9 ಪಂದ್ಯಗಳಲ್ಲಿ 6 ವಿಕೆಟ್‌ ಪಡೆದರು. ಈ ವೇಳೆ ಇವರು 11ರ ಎಕನಾಮಿಯಲ್ಲಿ ರನ್ ನೀಡಿದ್ದಾರೆ. ಇವರು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದ ಭಾಗವಾಗುತ್ತಾರೆ ಎಂದೇ ಎಲ್ಲರೂ ಭಾವಿಸಿದ್ರು. ಆದರೆ ಈ ಆಸೆ ನುಚ್ಚುನೂರಾಗಿದೆ. ಶಮಿ ಕೊನೆಯ ಬಾರಿಗೆ ಭಾರತದ ಪರ ಜೂನ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.

Story first published: Friday, May 23, 2025, 16:09 [IST]
Other articles published on May 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+