Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾಗೆ ತಲೆನೋವು ತರುತ್ತಿರುವ ಹಂಗಾಮಿ ನಾಯಕ ಕೆ.ಎಲ್.ರಾಹುಲ್

ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಆರಂಭವಾಗಲಿದೆ. ಎಲ್ಲಾ ತಂಡಗಳು ತಮಗೆ ಸಿಕ್ಕ ಪಂದ್ಯಗಳಲ್ಲೇ ಭರ್ಜರಿ ತಾಲೀಮು ನಡೆಸಿವೆ. ಟೀಮ್ ಇಂಡಿಯಾ ಸಹ ಈ ನಿಟ್ಟಿನಲ್ಲಿ ಹಲವು‌ ಬಾಕ್ಸ್ ಗಳನ್ನು ಟಿಕ್ ಮಾಡುತ್ತಲೇ ಬಂದಿದೆ. ಆದರೆ ಆ ಒಂದು ಸ್ಪಾಟ್ ನಿಜಕ್ಕೂ ಟೀಮ್ ಮ್ಯಾನೇಜ್ಮೆಂಟ್ ಚಿಂತೆ ಹೆಚ್ಚಿಸಿದೆ.

ಹೌದು.. ಶುಕ್ರವಾರ ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಹಂಗಾಮಿ ನಾಯಕ ಹಾಗೂ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ವಿಕೆಟ್ ಹಿಂದೆ ವೈಫಲ್ಯ ಅನುಭವಿಸಿದ್ದಾರೆ. ವಿಕೆಟ್ ಕೀಪಿಂಗ್ ಸಮಯದಲ್ಲಿ ಕೆ.ಎಲ್. ರಾಹುಲ್ ಅವರ ಕಳಪೆ ಪ್ರದರ್ಶನ ಮ್ಯಾನೇಜ್ಮೆಂಟ್ ಚಿಂತೆ ಹೆಚ್ಚಿಸಿದೆ.

Team India Interim Captain KL Rahul Not Performed Upto The Mark Behind The Wicket


ವಿಶ್ವಕಪ್‌ನಂತಹ ದೊಡ್ಡ ಪಂದ್ಯಾವಳಿಯಲ್ಲಿ ವಿಕೆಟ್‌ಕೀಪರ್ ಆಗಿ ಅವರನ್ನು ಆಯ್ಕೆ ಮಾಡಲು ಆಯ್ಕೆಗಾರರು ಹೇಗೆ ಯೋಚಿಸಿದ್ದಾರೆ ಎಂಬ ಪ್ರಶ್ನೆಗಳು ಈಗ ಎದ್ದಿವೆ. ಅವರ ಪ್ರದರ್ಶನ ಸ್ಥಿರವಾಗಿ ಇಲ್ಲದೇ ಇರುವುದು ಚಿಂತೆ ಹೆಚ್ಚಿಸಿದೆ.

ಈ ರೀತಿ ಕಳಪೆ ವಿಕೆಟ್ ಕೀಪಿಂಗ್ ಬಳಿಕ, ವಿಶ್ವಕಪ್ 2023 ರಂತಹ ದೊಡ್ಡ ಪಂದ್ಯಾವಳಿಯಲ್ಲಿ ಕೆ.ಎಲ್. ರಾಹುಲ್ ಅವರನ್ನು ವಿಕೆಟ್ ಕೀಪರ್ ಆಗಿ ಕಣಕ್ಕಿಳಿಸಿದರೆ ತಂಡಕ್ಕೆ ಕಷ್ಟ ಎನ್ನಲಾಗುತ್ತಿದೆ. 2023ರ ವಿಶ್ವಕಪ್‌ನಲ್ಲಿ ಕೆ.ಎಲ್. ರಾಹುಲ್ ವಿಕೆಟ್‌ಕೀಪರ್ ಆಗಿ ಆಡಿದರೆ, ಅವರು ಟೀಮ್ ಇಂಡಿಯಾಗೆ ಸಂಕಷ್ಟ ದುಪ್ಪಟ್ಟಗಲಿದೆ. ಶುಕ್ರವಾರ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರ ಕಳಪೆ ವಿಕೆಟ್ ಕೀಪಿಂಗ್ ಜಗತ್ತಿಗೆ ಬಹಿರಂಗವಾಗಿದೆ.

ಮೊಹಾಲಿ ಏಕದಿನ ಪಂದ್ಯದಲ್ಲಿ, ರಾಹುಲ್ ಆಸ್ಟ್ರೇಲಿಯಾ ಇನ್ನಿಂಗ್ಸ್ ನ 23 ನೇ ಓವರ್‌ನ ಮೊದಲ ಎಸೆತದಲ್ಲಿ ಮಾರ್ನಸ್ ಲಂಬುಶೇನ್ ಅವರನ್ನು ರನೌಟ್ ಮಾಡುವ ಅವಕಾಶವನ್ನು ಕಳೆದುಕೊಂಡರು. ಮಾರ್ನಸ್ ಲಂಬುಶೇನ್ ಅವರನ್ನು ರನ್ ಔಟ್ ಮಾಡಲು, ಸೂರ್ಯಕುಮಾರ್ ಯಾದವ್ ಅವರು ಕೆಎಲ್ ರಾಹುಲ್ ಕಡೆಗೆ ಚೆಂಡನ್ನು ಎಸೆದರು.

ಆದರೆ ಕೆ.ಎಲ್. ರಾಹುಲ್ ಚೆಂಡನ್ನು ಹಿಡಿಯುವಲ್ಲಿ ವಿಫಲರಾದರು. ಆಸ್ಟ್ರೇಲಿಯದ ಇನ್ನಿಂಗ್ಸ್‌ನ 23ನೇ ಓವರ್‌ನಲ್ಲಿ ಆರ್. ಅಶ್ವಿನ್ ಅವರ ನಾಲ್ಕನೇ ಎಸೆತದಲ್ಲಿ ಮಾರ್ನಸ್ ಲಂಬುಶೇನ್ ಕ್ಯಾಚ್ ಅನ್ನು ಕೆ.ಎಲ್. ರಾಹುಲ್ ಕೈಬಿಟ್ಟರು. ಅಶ್ವಿನ್ ಎಸೆತದಲ್ಲಿ ಲಂಬುಶೇನ್ ರಿವರ್ಸ್ ಸ್ವೀಪ್ ಹೊಡೆಯಲು ಮುಂದಾಗಿದ್ದರು. ಕೆ.ಎಲ್. ರಾಹುಲ್ ಈ ಕ್ಯಾಚ್ ಅನ್ನು ಕೈ ಬಿಟ್ಟರು.

ಮೊದಲ ಪಂದ್ಯದಲ್ಕಿ ನೀಡಿದ ಪ್ರದರ್ಶನವನ್ನೇ ವಿಶ್ವಕಪ್ ನಲ್ಲಿ ನೀಡಲು ಆಗುವುದಿಲ್ಲ. ಮೆಗಾ ಟೂರ್ನಿಯಲ್ಲಿ ಹಾಫ್ ಚಾನ್ಸ್ ಗಳನ್ನಹ ಸಹ ಕನ್ವರ್ಟ್ ಮಾಡಬೇಕಾಗುತ್ತದೆ‌. ಈ ನಿಟ್ಟಿನಲ್ಲಿ ಮ್ಯಾನೇಜ್ಮೆಂಟ್ ತೀರ್ಮಾನ ತೆಗೆದುಕೊಳ್ಳ ಬೇಕಿದೆ.

Story first published: Sunday, September 24, 2023, 10:12 [IST]
Other articles published on Sep 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+