For Quick Alerts
ALLOW NOTIFICATIONS  
For Daily Alerts
 

ಜಸ್ಪ್ರಿತ್ ಬುಮ್ರಾ ಐತಿಹಾಸಿಕ ಸಾಧನೆ: ರೂಟ್‌ಗೆ 12ನೇ ಬಾರಿ, ಪೋಪ್‌ಗೆ 5ನೇ ಬಾರಿ ಖೆಡ್ಡಾ ತೋಡಿದ ವೇಗಿ

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದ ಎರಡನೇ ದಿನ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸ್ಪಿನ್ನರ್‌ಗಳಿಗೆ ಸಹಾಯಕವೆಂದು ಪರಿಗಣಿಸಲಾದ ಪಿಚ್‌ನಲ್ಲಿ, ಇಂಗ್ಲೆಂಡ್ ಬ್ಯಟ್ಸ್‌ಮನ್‌ಗಳಿಗೆ ಸಿಂಹ್ ಸ್ವಪ್ನರಾದರು.

ಜಸ್ಪ್ರೀತ್ ಬುಮ್ರಾ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದರು. ಅವರು ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ ಮತ್ತು ಟಾಮ್ ವಿಲಿಯಂ ಹಾರ್ಟ್ಲಿಯನ್ನು ಬಲಿಪಶುಗಳನ್ನಾಗಿ ಮಾಡಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದದ್ದು ಇದು 10 ನೇ ಬಾರಿ.

Team india Jasprit Bumrah Scripts History, Becomes Fastest Indian Pacer to Claim 150 Test Wickets

ಈ ಅದ್ಭುತ ಬೌಲಿಂಗ್‌ನಿಂದ ಜಸ್ಪ್ರೀತ್ ಬುಮ್ರಾ 3, 4, 5 ಮತ್ತು 6 ನೇ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು. 1983 ರ ನಂತರ ಭಾರತದಲ್ಲಿ ವೇಗದ ಬೌಲರ್ 3, ನಂಬರ್ 4, ನಂಬರ್ 5 ಮತ್ತು ನಂಬರ್ 6 ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆದದ್ದು ಇದೇ ಮೊದಲು. ಇದಕ್ಕೂ ಮೊದಲು ಕಪಿಲ್ ದೇವ್ 1983ರಲ್ಲಿ ಅಹಮದಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂತಹ ಸಾಧನೆ ಮಾಡಿದ್ದರು.

ಜಸ್ಪ್ರೀತ್ ಬುಮ್ರಾ ಟೆಸ್ಟ್‌ನಲ್ಲಿ ತಮ್ಮ 150 ವಿಕೆಟ್‌ಗಳನ್ನು ಪೂರೈಸಿದರು. ಜಸ್ಪ್ರೀತ್ ಬುಮ್ರಾ 150 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 6781 ಎಸೆತಗಳಲ್ಲಿ ಈ ಸಾಧನೆ ಮಾಡಿದರು. ಇದಕ್ಕೂ ಮುನ್ನ ಉಮೇಶ್ ಯಾದವ್ 7661 ಎಸೆತಗಳಲ್ಲಿ 150 ವಿಕೆಟ್ ಪಡೆದಿದ್ದರು.

ಅತಿ ಕಡಿಮೆ ಎಸೆತಗಳಲ್ಲಿ 150 ಟೆಸ್ಟ್‌ ವಿಕೆಟ್‌ ಪಡೆದ ಭಾರತೀಯ

6781 ಎಸೆತಗಳು- ಜಸ್ಪ್ರೀತ್ ಬುಮ್ರಾ
7661 ಎಸೆತ- ಉಮೇಶ್ ಯಾದವ್
7755 ಎಸೆತಗಳು- ಮೊಹಮ್ಮದ್ ಶಮಿ
8378 ಎಸೆತಗಳು- ಕಪಿಲ್ ದೇವ್
8380 ಎಸೆತಗಳು- ಆರ್ ಅಶ್ವಿನ್

Team india Jasprit Bumrah Scripts History, Becomes Fastest Indian Pacer to Claim 150 Test Wickets

ಸ್ಟೋಕ್ಸ್‌ಗೆ ಸ್ಟ್ರೋಕ್‌ ನೀಡಿದ ಬುಮ್ರಾ

ಇಂಗ್ಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ಮಾಡಿದ್ದರು. ಅವರು ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಬುಮ್ರಾ ಅವರ ಕಟ್ಟರ್ ಬಾಲ್ ಅನ್ನು ಗುರುತಿಸುವಲ್ಲಿ ಎಡವಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್‌ಗೆ ಬೌಲ್ಡ್ ಆದರು. ಈ ಚೆಂಡನ್ನು ನೋಡಿದ ಬೆನ್ ಸ್ಟೋಕ್ಸ್ ಸಂಪೂರ್ಣವಾಗಿ ದಿಗ್ಭ್ರಮೆಗೊಂಡರು. ಔಟಾದ ನಂತರ ಅವರು ತಮ್ಮ ಬ್ಯಾಟ್ ಅನ್ನು ಕೈಬಿಟ್ಟರು. ವಿಕೆಟ್ ಪಡೆದ ನಂತರ, ಜಸ್ಪ್ರೀತ್ ಬುಮ್ರಾ ಮುಖದಲ್ಲಿ ನಗು ಕಾಣಿಸಿಕೊಂಡಿತು.

ಜೋ ರೂಟ್‌ಗೆ ಕಾಟ

ಪಂದ್ಯದ ಎರಡನೇ ದಿನದ ಊಟದ ತನಕ, ಜಸ್ಪ್ರೀತ್ ಬುಮ್ರಾ 8 ಓವರ್ ಬೌಲ್ ಮಾಡಿ 27 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಈ ಸಮಯದಲ್ಲಿ, ಜಸ್ಪ್ರೀತ್ ಬುಮ್ರಾ ಜೋ ರೂಟ್ ಮತ್ತು ಓಲಿ ಪೋಪ್ ಅವರನ್ನು ಔಟ್ ಮಾಡಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಜೋ ರೂಟ್ ಅವರ ವಿಕೆಟ್‌ನ್ನು ಜಸ್ಪ್ರೀತ್ ಬುಮ್ರಾ ಎಂಟನೇ ಬಾರಿ ಪಡೆದರು. ಅದೇ ಸಮಯದಲ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ, ಜಸ್ಪ್ರೀತ್ ಬುಮ್ರಾ 12 ನೇ ಬಾರಿಗೆ ಜೋ ರೂಟ್ ಅವರನ್ನು ಬಲಿಪಶು ಪಡೆದರು.

ಒಲಿ ಪೋಪ್‌ ಹಾಗೂ ಬುಮ್ರಾ

ಜಸ್ಪ್ರೀತ್ ಬುಮ್ರಾ ಮೊದಲ ಟೆಸ್ಟ್ ಪಂದ್ಯದ ಹೀರೋ ಆಲಿ ಪೋಪ್ ಅವರನ್ನು ಔಟ್ ಮಾಡಿದರು. ಮೊದಲ ಟೆಸ್ಟ್‌ನಲ್ಲಿ ಒಲಿ ಪೋಪ್ ದ್ವಿಶತಕ ಬಾರಿಸಿದ್ದರು. ಆದರೆ ಈ ಬಾರಿ ಜಸ್ಪ್ರೀತ್ ಬುಮ್ರಾ ಅವರ ಯಾರ್ಕರ್ ಎಸೆತದ ಮುಂದೆ ವಿಕೆಟ್ ಕಾಯ್ದುಕೊಳ್ಳುವಲ್ಲಿ ಸಫಲರಾಗಲಿಲ್ಲ. ಟೆಸ್ಟ್ ಪಂದ್ಯದ 10 ಇನ್ನಿಂಗ್ಸ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಒಲಿ ಪೋಪ್ ಅವರನ್ನು ಔಟ್ ಮಾಡಿದ್ದು ಇದು 5 ನೇ ಬಾರಿಯಾಗಿದೆ.

Story first published: Saturday, February 3, 2024, 17:31 [IST]
Other articles published on Feb 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+