Team India Jersey: ಟೀಮ್ ಇಂಡಿಯಾ ಜೆರ್ಸಿ ಪ್ರಾಯೋಜಕತ್ವದ ಬೆಲೆ ದುಬಾರಿ: ಇಲ್ಲಿದೆ ಮಾಹಿತಿ
ಟೀಮ್ ಇಂಡಿಯಾದ ಜೆರ್ಸಿ ಮೇಲೆ ತಮ್ಮ ಕಂಪನಿಯ ಹೆಸರನ್ನು ನಮೂದಿಸಲು ಆಸಕ್ತರ ಜೇಬಿಗೆ ಕತ್ತರಿ ಬೀಳಲಿದೆ. ಆನ್ ಲೈನ್ ಗೇಮಿಂಗ್ ನಿಷೇಧಿಸಿರುವ ಭಾರತ ಸರ್ಕಾರದ ನಿರ್ಧಾರದಿಂದ ಟೀಮ್ ಇಂಡಿಯಾ ಜೆರ್ಸಿ ಪ್ರಾಯೋಜಕರಾದ ಡ್ರೀಮ್ ಇಲೆವೆನ್ ಹಿಂದೆ ಸರಿದಿದೆ. ಇದರಿಂದ ಟೀಮ್ ಇಂಡಿಯಾದ ಜೆರ್ಸಿಯಲ್ಲಿ ಇನ್ನು ಯಾರ ಹೆಸರು ನಮೂದಿಸಲಿದೆ ಎಂಬುದು ತಿಳಿಯುವುದು ಕುತೂಹಲ ಕೆರಳಿಸಿದೆ.
ಇನ್ನು ಮುಂದೆ ಟೀಮ್ ಇಂಡಿಯಾ ಜೆರ್ಸಿಯಲ್ಲಿ ತನ್ನ ಕಂಪನಿಯ ಹೆಸರನ್ನು ಹಾಕಿಸಲು ಇಚ್ಛಿಸುವರು ಇನ್ನು ಕೊಂಚ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ. ಕ್ರಿಕ್ ಬಜ್ ವರದಿಯ ಪ್ರಕಾರ ಟೀಮ್ ಇಂಡಿಯಾ ಭಾಗವಹಿಸುವ ದ್ವಿಪಕ್ಷೀಯ ಸರಣಿಯ ಪ್ರತಿ ಪಂದ್ಯಕ್ಕೆ 3.17 ಕೋಟಿ ರೂ. ನಿಗದಿ ಪಡಿಸಲಾಗಿತ್ತು. ಆದರೆ ಈಗ ಈ ದರ 3.5 ಕೋಟಿಗೆ ಏರಿಕೆ ಆಗಿದೆ. ಇನ್ನು ಬಹು-ರಾಷ್ಟ್ರಗಳ ಪಂದ್ಯಗಳಿಗೆ ಪ್ರತಿ ಪಂದ್ಯಕ್ಕೆ ಈ ಹಿಂದೆ 1.12 ಕೋಟಿ ರೂ. ನಿಗದಿಪಡಿಸಲಾಗಿತ್ತು. ಆದರೆ ಈಗ ಇದರ ದರ 1.5 ಕೋಟಿ ರೂ.ಗೆ ಏರಿಕೆ ಆಗಿದೆ.

ಟೀಮ್ ಇಂಡಿಯಾದ ಜೆರ್ಸಿ ಪ್ರಾಯೋಜಕರಾದ ಡ್ರೀಮ್ ಇಲೆವೆನ್ ಒಪ್ಪಂದದಿಂದ ಹಿಂದೆ ಸರಿದಿದ್ದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸರ್ಕಾರ ನೂತನವಾಗಿ ಜಾರಿಗೆ ತಂಡದ ನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ 2025 ರ ಬಳಿಕ ಡ್ರೀಮ್ 11 ಪ್ರಾಯೋಜಕತ್ವವನ್ನು ಕಳೆದುಕೊಂಡಿದೆ. ಈಗಿನ ಹೊಸ ದರಗಳು ಹಿಂದಿನ ದರಕ್ಕೆ ಹೋಲಿಸದರೆ ಕೊಂಚ ದುಬಾರಿ ಆಗಿರಲಿವೆ. ಈ ಬದಲಾವಣೆಯಿಂದ ಬಿಸಿಸಿಐ ತನ್ನ ಬೊಕ್ಕಸಕ್ಕೆ 400 ಕೋಟಿ ರೂ.ಗಳಿಗಿಂತ ಹೆಚ್ಚು ಗಳಿಸುವ ನಿರೀಕ್ಷೆಯಿದೆ.
ಬಿಡ್‌ಗೆ ಸೆ.16 ಕೊನೆಯ ದಿನ
ಸೆಪ್ಟಂಬರ್ 9 ರಂದು ನಡೆಯಲಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಯಾವುದೇ ಪ್ರಾಯೋಜಕತ್ವ ಇಲ್ಲದೇ ಕಣಕ್ಕೆ ಇಳಿಯಲಿದೆ. ಅಂದಹಾಗೆ ಬಿಸಿಸಿಐ ಪ್ರಾಯೋಜಕತ್ವಕ್ಕೆ ಕರೆದ ಬಿಡ್ ಸಲ್ಲಿಸಲು ಇದೇ 16 ಕೊನೆಯ ದಿನವಾಗಿದೆ. ಈ ಬಿಡ್‌ನಲ್ಲಿ ಭಾಗವಹಿಸುವ ಕಂಪನಿ ಆನ್‌ಲೈನ್ ಹಣದ ಗೇಮಿಂಗ್, ಬೆಟ್ಟಿಂಗ್ ಅಥವಾ ಜೂಜಾಟದೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿರಬಾರದು ಎಂದು ಬಿಸಿಸಿಐ ಈಗಾಗಲೇ ಸೂಚಿಸಿದೆ. ಡ್ರೀಮ್ 11 ಕಂಪನಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿದ್ದರಿಂದ ಮುಂದಿನ ಸರಣಿಗಳಲ್ಲಿ ಟೀಮ್ ಇಂಡಿಯಾವನ್ನು ಪ್ರಯೋಜಿಸುವುದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.
ಸೆಪ್ಟಂಬರ್ 9 ರಿಂದ ಯುಎಇನಲ್ಲಿ ಭಾರತದ ಆತಿಥ್ಯದಲ್ಲಿ ಟಿ20 ಏಷ್ಯಾ ಕಪ್ ಆಯೋಜಿಸಲಾಗುತ್ತಿದೆ. ಈ ವೇಳೆ ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ಇನ್ನು 2 ಗುಂಪುಗಳನ್ನು 8 ತಂಡಗಳನ್ನು ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ತಲಾ 4 ತಂಡಗಳು ಇರಲಿವೆ. ಭಾರತ ಈ ಟೂರ್ನಿಯಲ್ಲಿ ಸೆ.10 ರಂದು ತನ್ನ ಅಭಿಯಾನ ಆರಂಭಿಸಲಿದೆ. 2 ಗುಂಪುಗಳಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು, ಸೂಪರ್ 4 ಗೆ ಅರ್ಹತೆ ಪಡೆಯಲಿವೆ. ಟೂರ್ನಿಯ ಫೈನಲ್ ಪಂದ್ಯ ಸೆಪ್ಟಂಬರ್ 29 ರಂದು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications