Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs WI: ಅಭ್ಯಾಸ ಪಂದ್ಯ ಮುಗಿಸಿ ಬಾರ್ಬಡೋಸ್‌ನತ್ತ ರೋಹಿತ್ ಪಡೆಯ ಪ್ರಯಾಣ

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟಸ್ಟ್ ಸರಣಿಯ ಆರಂಭಕ್ಕೆ ಐದು ದಿನಗಳು ಬಾಕಿಯಿದೆ. ಈಗಾಗಲೇ ಕೆರೆಬಿಯನ್ ನಾಡಿಗೆ ಪ್ರಯಾಣಿಸಿರುವ ಟೀಮ್ ಇಂಡಿಯಾ ಬಾರ್ಬಡೋಸ್‌ನಲ್ಲಿ ಐದು ದಿನಗಳ ಶಿಬಿರದಲ್ಲಿ ಭಾಗಿಯಾಗಿದ್ದು, ಇಲ್ಲಿಯೇ ಟೀಮ್ ಇಂಡಿಯಾದ ಆಟಗಾರರು ಎರಡು ದಿನಗಳ ಅಭ್ಯಾಸ ಪಂದ್ಯವನ್ನು ಆಡಿತ್ತು. ಇದೀ ಅಭ್ಯಾಸ ಪಂದ್ಯವನ್ನು ಮುಗಿಸಿರುವ ರೋಹಿತ್ ಶರ್ಮಾ ಪಡೆ ಮೊದಲ ಪಂದ್ಯ ನಡೆಯಲಿರುವ ಡೊಮೆನಿಕಾ ದ್ವೀಪಕ್ಕೆ ಹಾರಿದೆ.

ಟೀಮ್ ಇಂಡಿಯಾ ಐಪಿಎಲ್ ಟೂರ್ನಿ ಮುಗಿಸಿದ ಬಳಿಕ ಕಳೆದ ತಿಂಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆಡಿತ್ತು. ಆಸ್ಟ್ರೇಲಿಯಾ ವಿರುದ್ಧ ಈ ಪಂದ್ಯದಲ್ಲಿ ಸೋತು ಭಾರತ ಎರಡನೇ ಬಾರಿಗೆ ರನ್ನರ್‌ಅಪ್ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಅವಕಾಶ ಕಳೆದುಕೊಂಡ ಭಾರತ ಈ ಪಂದ್ಯದ ಬಳಿಕ ಸುದೀರ್ಘ ಒಂದು ತಿಂಗಳ ವಿಶ್ರಾಂತಿ ಅವಧಿಯನ್ನು ಹೊಂದಿತ್ತು. ಇದೀಗ ನೂತನ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಭಿಯಾನ ಆರಂಭಿಸಲು ಸಜ್ಜಾಗಿದೆ.

Team India leave for Dominica after 5 days practice camp at Barbados

ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಜೈಸ್ವಾಲ್

ಇನ್ನು ಬಾರ್ಬಡೋಸ್‌ನಲ್ಲಿ ಎರಡು ದಿನಗಳ ಅಭ್ಯಾಸ ಶಿಬಿರದಲ್ಲಿ ಟೀಮ್ ಇಂಡಿಯಾದ ಯುವ ಆಟಗಾರರಿಗೆ ಉತ್ತಮ ಅವಕಾಶ ದೊರೆತಿದೆ. ಇನ್ನು ಈ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದುಕೊಂಡಿರುವ ಯಶಸ್ವಿ ಜೈಸ್ವಾಲ್ ತಮಗೆ ದೊರೆತ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ ಜೈಸ್ವಾಲ್ 76 ಎಸೆತಗಳಲ್ಲಿ 54 ರನ್ ಬಾರಿಸಿದ್ದಾರೆ.

ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಎರಡು ದಿನಗಳ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾಗೆ ಸಾಥ್ ನೀಡಿದ್ದು ಯಶಸ್ವಿ ಜೈಸ್ವಾಲ್. ಈ ಜೋಡಿ ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಇಬ್ಬರು ಆಟಗಾರರು ಕೂಡ ತಲಾ ಅರ್ಧ ಶತಕ ಸಿಡಿಸಿದ್ದಾರೆ. ಈ ಜೋಡಿಯೇ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಯುವ ಆಟಗಾರ ಯಶಸ್ವಿ ಜೈಸ್ವಾಲ್ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಸತತವಾಗಿ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ರಣಜಿ, ಇರಾನಿ ಟ್ರೋಫಿ ದುಲೀಪ್ ಟ್ರೋಫಿಯಲ್ಲಿ ಜೈಸ್ವಾಲ್ ನೀಡಿರುವ ಪ್ರದರ್ಶನ ಎಲ್ಲರ ಗಮನಸೆಳೆದಿದೆ. ಜೊತೆಗೆ ಐಪಿಎಲ್‌ನಲ್ಲಿಯೂ ಅಮೋಘ ಆಟವಾಡುವ ಮೂಲಕ ಎಲ್ಲಾ ಮಾದರಿಗೂ ಸೂಕ್ತವಾಗುವ ಆಟಗಾರ ಎಂಬುದನ್ನು ಸಾರಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದು ಆಡುವ ಬಳಗದಲ್ಲಿ ಅವಕಾಶ ಪಡೆಯಲು ಕಾತರರಾಗಿದ್ದಾರೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು ಮೊದಲ ಪಂದ್ಯ ಜುಲೈ 12ರಂದು ಡೊಮೆನಿಕಾದಲ್ಲಿ ಆಯೋಜನೆಯಾಗಲಿದೆ. ಎರಡನೇ ಪಂದ್ಯ ಜುಲೈ 20ರಿಂದ ಆರಂಭವಾಗಲಿದ್ದು ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಈ ಪಂದ್ಯ ನಡೆಯಲಿದೆ.

Story first published: Friday, July 7, 2023, 22:03 [IST]
Other articles published on Jul 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+