For Quick Alerts
ALLOW NOTIFICATIONS  
For Daily Alerts
 

92 ವರ್ಷಗಳ ಇತಿಹಾಸದಲ್ಲಿ ಎರಡನೇ ಬಾರಿಗೆ ಈ ದಾಖಲೆ ಬರೆದ ಟೀಮ್ ಇಂಡಿಯಾ

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಸುಲಭವಾಗಿ ಗೆದ್ದುಕೊಂಡಿದೆ. ಎರಡನೇ ಟೆಸ್ಟ್‌ನಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ರೋಹಿತ್ ಪಡೆ ಅರ್ಹ ಗೆಲುವು ಸಾಧಿಸಿದೆ. ಈ ಮೂಲಕ ಕೇಪ್‌ ಟೌನ್‌ ಅಂಗಳದಲ್ಲಿ ಟೆಸ್ಟ್‌ ಗೆದ್ದ ಮೊದಲ ಏಷ್ಯನ್ ತಂಡದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರೋಹಿತ್ ಟೀಮ್ ಈ ಮೂಲಕ ಮೊದಲ ಟೆಸ್ಟ್‌ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಟೆಸ್ಟ್‌ ಕ್ರಿಕೆಟ್ ಇತಿಹಾಸದಲ್ಲಿ ಅತಿ ಚಿಕ್ಕ ಪಂದ್ಯ ಎಂಬ ದಾಖಲೆ ಎರಡನೇ ಟೆಸ್ಟ್‌ ಪಂದ್ಯಕ್ಕೆ ಸಲ್ಲುತ್ತದೆ. ಟೀಮ್ ಇಂಡಿಯಾದ ಸ್ಟಾರ್‌ ವೇಗದ ಬೌಲರ್‌ಗಳಾದ ಜಸ್ಪ್ರಿತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್‌ ಕರಾರುವಕ್ ದಾಳಿ ಸಂಘಟಿಸಿ ಜಯದಲ್ಲಿ ಮಿಂಚಿದ್ದಾರೆ.

Team India made a Historic record, this happened only for the second time in 92 years

ಇದು ಎರಡನೇ ಬಾರಿಗೆ ಟೀಂ ಇಂಡಿಯಾದ ಯಾವುದೇ ಬ್ಯಾಟ್ಸ್‌ಮನ್ ಅರ್ಧಶತಕ ಗಳಿಸದೇ ತಂಡ ಜಯಗಳಿಸಿತ್ತು. ವಿರಾಟ್ ಕೊಹ್ಲಿ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ (46) ಗಳಿಸಿದರು. ಆದರೆ, ಯಶಸ್ವಿ ಜೈಸ್ವಾಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ್ದರು. ಅವರು 27 ರನ್‌ಗಳ ಇನಿಂಗ್ಸ್‌ ಆಡಿದರು. ಇದಕ್ಕೂ ಮೊದಲು ಯಾವುದೇ ಬ್ಯಾಟ್ಸ್‌ಮನ್ ಅರ್ಧಶತಕ ಗಳಿಸದ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದಿತ್ತು.

92 ವರ್ಷಗಳ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ, ಟೀಮ್ ಇಂಡಿಯಾದ ಯಾವುದೇ ಆಟಗಾರನು ಅರ್ಧಶತಕ ಬಾರಿಸದೇ ಇದ್ದರೂ, ಟೀಮ್ ಇಂಡಿಯಾ ಪಂದ್ಯವನ್ನು ಗೆದ್ದಿರುವುದು ಇದು ಕೇವಲ ಎರಡು ಬಾರಿ ಸಂಭವಿಸಿದೆ. ಈ ಹಿಂದೆ 2015 ರಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸಕ್ಕೆ ಬಂದಾಗ ಇದು ಮೊದಲ ಬಾರಿಗೆ ಸಂಭವಿಸಿತು. ನಾಗ್ಪುರದಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿತ್ತು. ಭಾರತ ಮೊದಲ ಇನಿಂಗ್ಸ್‌ನಲ್ಲಿ 215 ರನ್ ಗಳಿಸಿತ್ತು. ಇದರಲ್ಲಿ ಯಾವುದೇ ಬ್ಯಾಟ್ಸ್‌ಮನ್‌ಗಳ ಅರ್ಧಶತಕ ಬಾರಿಸಿರಲಿಲ್ಲ. ಮುರಳಿ ವಿಜಯ್ ಬ್ಯಾಟ್‌ನಿಂದ ಗರಿಷ್ಠ ರನ್‌ಗಳು ಬಂದವು. ಅವರು 40 ರನ್ ಗಳಿಸಿದ್ದರು.

Team India made a Historic record, this happened only for the second time in 92 years

ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು. ಶಿಖರ್ ಧವನ್ ಗರಿಷ್ಠ 39 ರನ್ ಗಳಿಸಿದ್ದರು. ಇದನ್ನು ಬಿಟ್ಟರೆ ಯಾವೊಬ್ಬ ಆಟಗಾರ ಕೂಡ 30 ರನ್ ಗಡಿ ದಾಟಿರಲಿಲ್ಲ. ಆದರೆ, ಕಳಪೆ ಬ್ಯಾಟಿಂಗ್ ಹೊರತಾಗಿಯೂ ಭಾರತ ಈ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಒಟ್ಟು 12 ವಿಕೆಟ್ ಪಡೆದರು. ರವೀಂದ್ರ ಜಡೇಜಾ ಮತ್ತು ಅಮಿತ್ ಮಿಶ್ರಾ ತಲಾ 4 ವಿಕೆಟ್ ಪಡೆದರು. ಈ ಪಂದ್ಯವನ್ನು ಭಾರತ 124 ರನ್‌ಗಳಿಂದ ಗೆದ್ದಿತ್ತು.

Story first published: Friday, January 5, 2024, 10:03 [IST]
Other articles published on Jan 5, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+