ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಗೆ ಈಗ ನೆನಪಾಗುತ್ತಿದ್ದಾರೆ ಅನುಭವಿ ಆಟಗಾರರು
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ಬಹು ನಿರೀಕ್ಷಿತ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ತಂಡ ಸೋಲು ಕಂಡಿದೆ. ಈ ಮೂಲಕ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಬೆನ್ ಸ್ಟೋಕ್ಸ್ ಪಡೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಈ ಸೋಲು ನಿಜಕ್ಕೂ ಟೆಸ್ಟ್ ಸ್ಪೆಷಲಿಸ್ಟ್ ಖ್ಯಾತಿಯ ಕೊಚ ರಾಹುಲ್ ದ್ರಾವಿಡ್ ಮುಂದಾಳತ್ವದ ಟೀಮ್ ಇಂಡಿಯಾಕ್ಕೆ ನುಂಗಲಾಗದ ಬಿಸಿ ತುಪ್ಪವಾಗಿದೆ. ಸ್ಪಿನ್ ಟ್ರ್ಯಾಕ್ ಹಾಗೂ ತವರಿನ ಲಾಭ ಪಡೆಯುವಲ್ಲಿ ವಿಫಲವಾದ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸಿದೆ. ಆತಿಥೇಯ ತಂಡದ ಸೋಲಿಗೆ ಅನುಭವಿಗಳ ಅನುಪಸ್ಥಿತಿ ಎದ್ದು ಕಾಣುತ್ತಿದೆ. ತಂಡದಲ್ಲಿ ಟೆಸ್ಟ್ ಸ್ಪೇಷಲಿಸ್ಟ್ ಆಟಗಾರರು ಇಲ್ಲದೇ ಇರುವುದು ತಂಡಕ್ಕೆ ಹಿನ್ನಡೆಯಾಗಿದೆ. ಭವಿಷ್ಯದ ಟೆಸ್ಟ್ ತಂಡವನ್ನ ಕಟ್ಟುವ ನಿಟ್ಟಿನಲ್ಲಿ ದೃಷ್ಟಿ ನೆಟ್ಟಿದ್ದ ಟೀಮ್ ಮ್ಯಾನೇಜ್ಮೆಂಟ್ ಗೆ ಹಿನ್ನಡೆ ಆಗಿದೆ.

ತಾಳ್ಮೆ ಇಲ್ಲ
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಹ ಯುವಕರಿಗೆ ಅವಕಾಶಗಳು ತವರಿನಲ್ಲಿ ಹೆಚ್ಚು ನೀಡಬೇಕು ಇದರಿಂದ ಅವರ ಮನೋಬಲ ಹೆಚ್ಚುತ್ತದೆ ಎಂದು ಹೇಳಿದ್ದರು. ಆದರೆ ಇಂತಹ ತಂಡವನ್ನು ಕಟ್ಟಿಕೊಂಡು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆಡುವ ನಿರ್ಧಾರದ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ. ತವರಿನಲ್ಲಿ ತಮ್ಮ ಕಂಡಿಷನ್ ಗೆ ಫೇವರ್ ಆಗಿರುವ ಪಿಚ್ಗಳಲ್ಲಿ ಬ್ಯಾಟರ್ ಗಳು ಬಿಗ್ ಇನ್ನಿಂಗ್ಸ್ ಕಟ್ಟಲಿಲ್ಲ. ಅಲ್ಲದೆ ಮೈದಾನದಲ್ಲಿ ನೆಲಕ್ಕೂರಿ ನಿಂತು ಬ್ಯಾಟ್ ಮಾಡಿ ತಂಡಕ್ಕೆ ಆಸರೆಯಾಗುವ ಲಕ್ಷಣಗಳು ಕಾಣುತ್ತಲೇ ಇಲ್ಲ. ಅಟ್ಯಾಕಿಂಗ್ ಕ್ರಿಕೆಟ್ ಆಡುವ ಮನೋಭಾವ ಹೊಂದಿರುವ ಬ್ಯಾಟರ್ ತಾಳ್ಮೆಯ ಮಂತ್ರವನ್ನೆ ನೆನಪು ಹಾರಿದ್ದಾರೆ. ಗುರು ರಾಹುಲ್ ದ್ರಾವಿಡ್ ತಮ್ಮ ಗರಡಿಯಲ್ಲಿರುವ ಆಟಗಾರರಿಗೆ ಮೊದಲು ತಾಳ್ಮೆಯ ಪಾಠವನ್ನು ಮಾಡಬೇಕಿದೆ.
ಬದಲಿ ಆಟಗಾರನ ಆಯ್ಕೆಯಲ್ಲಿ ಎಡವಟ್ಟು
ಇನ್ನು ಇಂಗ್ಲೆಂಡ್ ವಿರುದ್ಧದ ಆರಂಭಿಕ ಎರಡು ಟೆಸ್ಟ್ ಪಂದ್ಯಗಳಿಂದ ತಮ್ಮ ಹೆಸರನ್ನು ವಿರಾಟ್ ಕೊಹ್ಲಿ ಹಿಂಪಡೆದಿದ್ದರು. ವಿರಾಟ್ ಕೊಹ್ಲಿ ರಿಪ್ಲೇಸ್ಮೆಂಟ್ ಆಯ್ಕೆಯಲ್ಲಿ ಆಯ್ಕೆದಾರರು ವಿಫಲರಾಗಿದ್ದಾರೆ. ಫಾರ್ಮ್ ಇಲ್ಲದರಿಂದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅವರನ್ನು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆದ ಬಳಿಕ ತಂಡದಿಂದ ಕೈ ಬಿಟ್ಟಿದೆ. ಆದರೆ ಪೂಜರ ಇದಕ್ಕೂ ಧೃತಿ ಗೆಡದೆ ಮೈದಾನದಲ್ಲಿ ಸತತ ಬೆವರು ಹರಿಸುತ್ತಿದ್ದಾರೆ. ಅಲ್ಲದೇ ದೇಶೀಯ ಟೂರ್ನಿಯಲ್ಲಿ ಪೂಜಾರ ತಮ್ಮ ಅದ್ಭುತ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಪೂಜಾರ ಅವರ ಫಾರ್ಮ್ ನೋಡಿದರೆ ರಣಜಿಯಲ್ಲಿ ತಾವು ಪ್ರತಿನಿಧಿಸುವ ಸೌರಾಷ್ಟ್ರ ತಂಡವನ್ನು ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೆ ಏರಿಸುವ ಅಭಿಯಾನ ಶುರು ಮಾಡಿದಂತೆ ಕಾಣುತ್ತದೆ. ಪ್ರಸಕ್ತ ಟೂರ್ನಿಯಲ್ಲಿ ಪೂಜಾರ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ತವರಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನ ವೇಳೆ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ನಲ್ಲಿ ಪೂಜರ ಹೆಸರು ಕೇಳಿ ಬಂದೇ ಬಂದಿರುತ್ತದೆ. ಪೂಜಾರ ಏಕಾಂಗಿಯಾಗಿ ಅದೆಷ್ಟೋ ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಟೀಮ್ ಇಂಡಿಯಾದಲ್ಲಿ ಇಗಿರುವ ಬ್ಯಾಟ್ಸ್‌ಮನ್ ಗಳಲ್ಲಿ ಅದೆಷ್ಟೋ ಯುವ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲವಾಗುತ್ತಿದ್ದರು ಸತತ ಅವಕಾಶ ನೀಡುತ್ತಿದ್ದಾರೆ. ಹಾಗೆ ಪೂಜಾರಗೆ ಇನ್ನೊಮ್ಮೆ ಅವಕಾಶ ನೀಡುವ ಅವಶ್ಯಕತೆ ಇದೆ.

ಪೂಜಾರ ಬಂದರೆ ಟೀಮ್ ಇಂಡಿಯಾ ಗೆದ್ದೆ ಬಿಡುತ್ತದೆ ಎಂದಲ್ಲ. ಚೇತೇಶ್ವರ್ ಮೂರನೇ ಕ್ರಮಾಂಕದಲ್ಲು ಬ್ಯಾಟ್ ಮಾಡಿ ಮಿಡ್ಲ್ ಬ್ಯಾಟ್ಸ್ ಮನ್ ಗಳನ್ನ ಸಹ ಆಡಿಸಿಕೊಂಡು ಬಿಡ್ತಾರೆ. ಬರೀ ಪೂಜಾರ ಅಷ್ಟೇ ಅಲ್ಲ ಅಜಿಂಕ್ಯಾ ರಹಾನೆ ಹಾಗೂ ವಿರಾಟ್ ಕೊಹ್ಲಿ ಅವರು ಸಹ ಟೆಸ್ಟ್ ನಲ್ಲಿ ಇದೇ ರೀತಿ ಆಟವಾಡುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications