ಎಂಎಸ್ ಧೋನಿಗಾಗಿ ಹೃದಯ ಸ್ಪರ್ಶಿ ವೀಡಿಯೊ ಬಿಡುಗಡೆ ಮಾಡಿದ ಬಿಸಿಸಿಐ

ನವದೆಹಲಿ: ಮಿಂಚಿನ ವೇಗದ ಸ್ಟಂಪಿಂಗ್, ದೊಡ್ಡ ಸಿಕ್ಸರ್, ಬೆಸ್ಟ್ ಫಿನಿಷಿಂಗ್, ಪಂದ್ಯ ಗೆಲ್ಲಲು ಮೈದಾನದಲ್ಲಿ ಅದ್ಭುತ ಯೋಜನೆಗಳನ್ನು ರೂಪಿಸುತ್ತಿದ್ದ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆಗಷ್ಟ್ 15ರ ಶನಿವಾರ ಧೋನಿ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.
ಐಪಿಎಲ್ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಧೋನಿ ನಿರ್ಧಾರ ಆಘಾತ ನೀಡಿದೆ. ಧೋನಿ ಬೆನ್ನಲ್ಲೇ ಅವರ ಆತ್ಮೀಯ ಸ್ನೇಹಿತ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದು ಕ್ರಿಕೆಟ್ ಪ್ರಿಯರಿಗೆ ಸಂಕಟ ತಂದಿದೆ.
ಭಾರತ ತಂಡಕ್ಕೆ ಎರಡು ವಿಶ್ವಕಪ್‌ಗಳು, ಒಂದು ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟಿರುವ 'ಕ್ಯಾಪ್ಟನ್ ಕೂಲ್'ಗೆ ಕ್ರಿಕೆಟ್ ದಂತಕತೆಗಳು, ಅಭಿಮಾನಿಗಳು ಧನ್ಯವಾದ ಸಲ್ಲಿಸುತ್ತಿದ್ದಾರೆ. ಟೀಮ್ ಇಂಡಿಯಾದ ಸದಸ್ಯರೆಲ್ಲರೂ ಸೇರಿ ಧೋನಿಗೊಂದು ವಿಶೇಷ ವೀಡಿಯೊ ತಯಾರಿಸಿದ್ದಾರೆ.
ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವೀಡಿಯೊ ಲಿಂಕ್ ಶೇರ್ ಮಾಡಿರುವ ಬಿಸಿಸಿಐ, 'ತನ್ನ ಖ್ಯಾತವೆತ್ತ ವೃತ್ತಿ ಜೀವನಕ್ಕೆ ಕೊನೆ ಹಾಡಿದ ಎಂಎಸ್ ಧೋನಿಗೆ, ಭಾರತ ತಂಡದ ಸದಸ್ಯರು ಅದ್ಭುತ ಕ್ಷಣಗಳನ್ನು ನೆನಪಿಸಿಕೊಂಡು ತನ್ನ ನಾಯಕನಿಗೆ ತುಂಬು ಹೃದಯದ ಗೌರವ ಸಲ್ಲಿಸಿದ್ದಾರೆ,' ಎಂದು ಬರೆದುಕೊಂಡಿದೆ (ಮೇಲಿನ ಟ್ವಿಟರ್‌ನಲ್ಲಿ ವೀಡಿಯೊ ಲಿಂಕ್ ಇದೆ; ಖಂಡಿತಾ ನೋಡಿ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications