Team India: ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬಗೆ ಹರಿಯಬೇಕಾದ 5 ಸವಾಲುಗಳು
ಇನ್ನೇನು ಕೆಲವೇ ದಿನಗಳಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲಿದೆ. ಈ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ಈ ಟೂರ್ನಿಯಲ್ಲಿ ಭಾರತ ಸಹ ಕಪ್ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕೆ ಇಳಿಯಲಿದೆ. ಈ ಸರಣಿಗೂ ಮುನ್ನ ಟೀಮ್ ಇಂಡಿಯಾ ಆಟಗಾರರು, ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಆಡಲಿದ್ದಾರೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ತನ್ನ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸಿಲಿದೆ. ಅದರಲ್ಲಿ ಮುಖ್ಯವಾಗಿ ಈ ಐದು ಪ್ರಶ್ನೆಗಳು ಟೀಮ್ ಇಂಡಿಯಾವನ್ನು ಕಾಡಲಿವೆ.
ಫೆಬ್ರವರಿ 6 ರಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಮೂರು ಪಂದ್ಯಗಳನ್ನು ಆಡಲಾಗುತ್ತದೆ. ಮೊದಲ ಪಂದ್ಯಕ್ಕೆ ನಾಗ್ಪುರ ಆತಿಥ್ಯ ವಹಿಸಲಿದೆ. ಈ ವೇಳೆ ಟೀಮ್ ಇಂಡಿಯಾ ಆಟಗಾರರ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ. ಈ ವೇಳೆ ಕಾಣಿಸಿಕೊಳ್ಳುವ ಪ್ರಮುಖ ಐದು ಸವಾಲುಗಳ ಕುರಿತಾದ ವರದಿ ಇಲ್ಲಿದೆ.

ಲಯಕ್ಕೆ ಮರಳುವರೇ ಸ್ಟಾರ್ಸ್
ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಈ ಸ್ಟಾರ್ ಆಟಗಾರರು ಲಯಕ್ಕೆ ಮರಳುವ ಅನಿವಾರ್ಯತೆ ಇದೆ. ಅಂದಾಗ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಆಸೆಗೆ ಪುಷ್ಠಿ ಸಿಗಬಹುದಾಗಿದೆ.
2024ರಲ್ಲಿ ಉಭಯ ಆಟಗಾರರ ಸಾಧನೆ
ವಿರಾಟ್ ಕೊಹ್ಲಿ, 24 ಪಂದ್ಯ, 678 ರನ್, 1 ಶತಕ, 2 ಅರ್ಧಶತಕ
ರೋಹಿತ್ ಶರ್ಮಾ, 28 ಪಂದ್ಯ, 1154 ರನ್, 3 ಶತಕ, 7 ಅರ್ಧಶತಕ

ಫಿಟ್ ಆಗುವರಾ ಪೇಸರ್ಸ್
ಇನ್ನು ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್‌ಗಳ ಗಾಯದ ಸಮಸ್ಯೆ ತಂಡವನ್ನು ಬಹುವಾಗಿ ಕಾಡಿದೆ. ಕಳೆದ 14 ತಿಂಗಳಿನಿಂದ ಮೈದಾನದಿಂದ ದೂರ ಉಳಿದಿದ್ದ ಮೊಹಮ್ಮದ್ ಶಮಿ ಕಂ ಬ್ಯಾಕ್ ಮಾಡಿದ್ದಾರೆ. ಆದರೆ ಏಕದಿನ ಸರಣಿಯಲ್ಲಿ ಇವರು 10 ಓವರ್ ಬೌಲಿಂಗ್ ಮಾಡಬಲ್ಲರಾ ಎಂಬ ಪ್ರಶ್ನೆಗಳು ಎದ್ದಿವೆ. ಈ ಪ್ರಶ್ನೆಗೆ ನಾಗ್ಪುರದಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾ ಪ್ರವಾಸ ಕೊನೆಯ ಟೆಸ್ಟ್‌ನಲ್ಲಿ ಗಾಯಕ್ಕೆ ತುತ್ತಾಗಿರುವ ಜಸ್ಪ್ರಿತ್ ಬುಮ್ರಾ, ಅವರ ಬಗ್ಗೆ ಇನ್ನು ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ. ಆದರೆ ಮಾಹಿತಿಯ ಪ್ರಕಾರ ಇವರು ಮೊದಲ ಎರಡು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಇವರು ಗಾಯದಿಂದ ಚೇತರಿಸಿಕೊಂಡ ಬಳಿಕ ಅದೇ ಲಯದಲ್ಲಿ ಬೌಲಿಂಗ್ ಮಾಡಬಲ್ಲರಾ ಎಂಬ ಪ್ರಶ್ನೆಗಳು ಸಹ ಎದ್ದಿವೆ.

ವಿಕೆಟ್ ಕೀಪರ್ ಯಾರು?
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಯಾರು ಎಂಬ ಪ್ರಶ್ನೆ ನಿಶ್ಚಿತವಾಗಿ ಟೀಮ್ ಮ್ಯಾನೇಜ್ಮೆಂಟ್‌ನ್ನು ಕಾಡಲಿದೆ. ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಅವರ ನಡುವೆ ಒಂದು ಸ್ಥಾನಕ್ಕಾಗಿ ಫೈಟ್ ನಡೆಯುತ್ತಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ರಾಹುಲ್, ರಿಷಭ್ ಪಂತ್ ಅವರಿಗಿಂತ ಬಲಿಷ್ಠರಾಗಿದ್ದಾರೆ. ಆದರೆ ಪ್ರಸಕ್ತ ಅಂಕಿ ಅಂಶಗಳು ಪಂತ್ ಬೆನ್ನಿಗೆ ನಿಲ್ಲುವಂತಿವೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ವಿಕೆಟ್ ಕೀಪರ್ ಫೈನಲ್ ಮಾಡುವುದು ಸಹ ದೊಡ್ಡ ಸವಾಲಾಗಿದೆ.
ಯುವ ಪ್ಲೇಯರ್‌ಗೆ ಸಿಗುತ್ತಾ ಅವಕಾಶ?
ಟೀಮ್ ಇಂಡಿಯಾದ ಪರ ಈಗಾಗಲೇ ಟಿ20 ಕ್ರಿಕೆಟ್ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಹವಾ ಕ್ರಿಯೇಟ್ ಮಾಡಿರುವ ಯಶಸ್ವಿ ಜೈಸ್ವಾಲ್ ಏಕದಿನ ಕ್ರಿಕೆಟ್‌ನಲ್ಲಿ ಪದಾರ್ಪಣೆ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಇವರು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೈದಾನಕ್ಕೆ ಪ್ರವೇಶಿಸಬಹುದಾ ಎಂಬ ಪ್ರಶ್ನೆಗಳು ಎದ್ದಿವೆ. ಅಂತೆಯೇ ವರುಣ್ ಚಕ್ರವರ್ತಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುತ್ತದಾ ಎಂಬುದು ಕುತೂಹಲ ಕಾರಿ ಅಂಶವಾಗಿದೆ.

ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಏನು?
ಟೀಮ್ ಇಂಡಿಯಾದ ಟಾಪ್ ಆರ್ಡರ್ ಸ್ಲಾಟ್‌ಗಳು ಫುಲ್ ಆಗಿವೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಶಮಿ ಕಣಕ್ಕೆ ಇಳಿಯುವುದು ಫಿಕ್ಸ್ ಎನ್ನಾಗುತ್ತಿದೆ. ಶ್ರೇಯಸ್ ಅಯ್ಯರ್, ಕುಲದೀಪ್ ಆಡುವುದು ಪಕ್ಕಾ ಎನ್ನಲಾಗುತ್ತಿದೆ. ಇನ್ನು ಬುಮ್ರಾ ಫಿಟ್ ಆದಲ್ಲಿ ಇವರಿಗೂ ಸ್ಥಾನ. ಇನ್ನು ಎರಡು ಸ್ಥಾನಗಳು ಖಾಲಿ ಇದ್ದು, ಈ ಸ್ಥಾನಕ್ಕಾಗಿ ಒಬ್ಬ ವೇಗದ ಬೌಲರ್, ಮೂವರು ಆಲ್‌ರೌಂಡರ್‌ಗಳು ಸ್ಪರ್ಧಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications