Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ತಂಡಕ್ಕೆ ಹೊಸ ಟಿ20 ಕ್ಯಾಪ್ಟನ್‌ ಹೆಸರು ಫೈನಲ್‌!

ಜುಲೈ 16 ಮಂಗಳವಾರ, ಟೀಮ್‌ ಇಂಡಿಯಾದ ನೂತನ ಟಿ20 ನಾಯಕನ ಹೆಸರು ಬಹುತೇಕ ನಿರ್ಧಾರವಾಗಿದೆ. ರೋಹಿತ್ ಶರ್ಮಾ ನಿವೃತ್ತಿಯ ನಂತರ ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಎಂಬುದು ಪ್ರಶ್ನೆಯಾಗಿತ್ತು.

ಇದೀಗ ಈ ಪ್ರಶ್ನೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮೂಲವೊಂದು ಉತ್ತರ ನೀಡಿದೆ. ಜುಲೈ 27 ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತದ ನೂತನ ನಾಯಕ ಕಾಣಿಸಿಕೊಳ್ಳಲಿದ್ದಾರೆ.

Team India new T20 captain is named Final

ಹಾರ್ದಿಕ್ ಪಾಂಡ್ಯ ಮುಂಬರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್‌ ಇಂಡಿಯಾದ ನಾಯಕರಾಗಲಿದ್ದಾರೆ ಎಂದು ಬಿಸಿಸಿಐನ ಹಿರಿಯ ಮೂಲವೊಂದು ಪಿಟಿಐಗೆ ತಿಳಿಸಿದೆ . ಹಾರ್ದಿಕ್ ಪಾಂಡ್ಯ ಭಾರತ ಟಿ20 ತಂಡದ ಉಪನಾಯಕರಾಗಿದ್ದರು.

ಇದೀಗ ಹಾರ್ದಿಕ್‌ ಪಾಂಡ್ಯ ಸಂಪೂರ್ಣ ಫಿಟ್ ಆಗಿದ್ದಾರೆ. ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೂ ಲಭ್ಯವಿದ್ದು, ಹಾರ್ದಿಕ್‌ ನಾಯಕನಾಗಿ ಟೀಮ್‌ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

ಏಕದಿನ ಸರಣಿಗೆ ವಿಶ್ರಾಂತಿ

ಶ್ರೀಲಂಕಾದ ಟಿ20 ಸರಣಿಯ ನಂತರ ನಡೆಯಲಿರುವ ಏಕದಿನ ಸರಣಿಗೆ ಪಾಂಡ್ಯ ಲಭ್ಯವಿರುವುದಿಲ್ಲ. ವೈಯಕ್ತಿಕ ಕಾರಣಗಳಿಂದ ಪಾಂಡ್ಯ 3 ಪಂದ್ಯಗಳ ಏಕದಿನ ಸರಣಿಯನ್ನು ಆಡುವುದಿಲ್ಲ.

ಏಕದಿನ ಸರಣಿಗೆ ಸಂಬಂಧಿಸಿದಂತೆ, ಪಾಂಡ್ಯ ವೈಯಕ್ತಿಕ ಕಾರಣಗಳಿಂದ ವಿರಾಮ ಕೇಳಿದ್ದಾರೆ ಮತ್ತು ನಿಯಮಿತ ನಾಯಕ ರೋಹಿತ್ ಶರ್ಮಾ ಅವರಿಗೆ ಈ ಬಗ್ಗೆ ತಿಳಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಟೀಮ್‌ ಇಂಡಿಯಾ ಉಪನಾಯಕ ಯಾರು?

ವೈಟ್ ಬಾಲ್ ಸರಣಗಾಗಿ ಟೀಮ್‌ ಇಂಡಿಯಾ ಶ್ರೀಲಂಕಾ ಪ್ರವಾಸ ಮಾಡಲಿದೆ. ಈ ಸರಣಿಯಲ್ಲಿ ಟೀಮ್‌ ಇಂಡಿಯಾದ ಉಪನಾಯಕನ ಹೆಸರನ್ನು ಇನ್ನೂ ನಿರ್ಧರಿಸಿಲ್ಲ.

ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿ ಜುಲೈ 27 ರಿಂದ 30 ರವರೆಗೆ ಪಲ್ಲೆಕೆಲೆಯಲ್ಲಿ ನಡೆಯಲಿದೆ. ಇದಾದ ಬಳಿಕ ಆಗಸ್ಟ್ 2 ರಿಂದ 7 ರವರೆಗೆ ಕೊಲಂಬೊದಲ್ಲಿ ಏಕದಿನ ಸರಣಿ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ, ಮುಂಬರುವ ಶ್ರೀಲಂಕಾ ಟಿ20 ಸರಣಿಗೆ ಭಾರತದ ಉಪನಾಯಕ ಶುಭಮನ್ ಗಿಲ್ ಅಥವಾ ಸೂರ್ಯಕುಮಾರ್ ಯಾದವ್ ಎಂದು ಹೇಳಲಾಗುತ್ತಿದೆ.

Story first published: Tuesday, July 16, 2024, 20:08 [IST]
Other articles published on Jul 16, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+