Team India: 2027ರ ವಿಶ್ವಕಪ್‌ಗೂ ಮುನ್ನ ಭಾರತ ಎಷ್ಟು ಏಕದಿನ ಪಂದ್ಯಗಳನ್ನು ಆಡಲಿದೆ?
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಪ್ರಾಬಲ್ಯ ಸಾಧಿಸಿದೆ.ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಂತಹ ಸ್ಟಾರ್ ಆಟಗಾರರು ಟೀಮ್ ಇಂಡಿಯಾ ಪರ 2027ರ ಏಕದಿನ ವಿಶ್ವಕಪ್ ಆಡುವ ಕನಸು ಕಾಣುತ್ತಿದ್ದಾರೆ. ಈಗ ಭಾರತದ ಮುಂದಿನ ಗುರಿ 2026ರ ಟಿ20 ವಿಶ್ವಕಪ್ ಮತ್ತು 2027ರ ಏಕದಿನ ವಿಶ್ವಕಪ್. 2023ರ ವಿಶ್ವಕಪ್‌ನ ಫೈನಲ್‌ನಲ್ಲಿ ಸೋತ ನಂತರ, ಭಾರತ ಈಗ 2027ರ ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿದೆ.
ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಒಂದೇ ಒಂದು ಏಕದಿನ ಪಂದ್ಯವನ್ನು ಸೋತಿಲ್ಲ ಮತ್ತು 2027 ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಸೋಲುವ ಮೊದಲು ಸತತ 10 ಪಂದ್ಯಗಳನ್ನು ಗೆದ್ದಿತ್ತು. 2027 ರ ವಿಶ್ವಕಪ್‌ಗೂ ಮೊದಲು ಭಾರತ 27 ಏಕದಿನ ಪಂದ್ಯಗಳನ್ನು ಆಡಲಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನಿಲ್ಸ್ (ಐಸಿಸಿ) ಫ್ಯೂಚರ್ ಟೂರ್ ಪ್ರೋಗ್ರಾಂ (ಎಫ್‌ಟಿಪಿ) ಪ್ರಕಾರ, ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆಯಲ್ಲಿ ನಡೆಯಲಿರುವ 2027ರ ವಿಶ್ವಕಪ್‌ಗೂ ಮುನ್ನ ಭಾರತ 27 ಏಕದಿನ ಪಂದ್ಯಗಳನ್ನು ಆಡಲಿದೆ. ಭಾರತ 2025ರಲ್ಲಿ 9 ಏಕದಿನ ಪಂದ್ಯಗಳನ್ನು ಆಡಲಿದ್ದು, ಅದರಲ್ಲಿ 3 ಏಕದಿನ ಪಂದ್ಯಗಳು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯಲಿವೆ. ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಪಂದ್ಯಗಳು ನಡೆಯಲಿವೆ. ನವೆಂಬರ್-ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ಏಕದಿನ ಪಂದ್ಯಗಳನ್ನು ಆಡುವ ಮೂಲಕ ಟೀಮ್ ಇಂಡಿಯಾ 2025ರ ವರ್ಷವನ್ನು ಕೊನೆಗೊಳಿಸಲಿದೆ.
ಟೀಮ್ ಇಂಡಿಯಾ 2026ರಲ್ಲಿ ಒಟ್ಟು 15 ಏಕದಿನ ಪಂದ್ಯಗಳನ್ನು ಆಡಲಿದ್ದು, ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿ ಮೂಲಕ ಆರಂಭವಾಗಲಿದೆ. 2026ರ ಟಿ20 ವಿಶ್ವಕಪ್ ಟೂರ್ನಿ ಮುಗಿದ ನಂತರ, ಭಾರತ ತಂಡವು ಜೂನ್ ನಿಂದ ಡಿಸೆಂಬರ್ 2026 ರವರೆಗೆ ಅಫ್ಘಾನಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ವಿರುದ್ಧ 3 ಏಕದಿನ ಪಂದ್ಯಗಳ ಸರಣಿಗಳನ್ನು ಆಡಲಿದೆ. 2027 ರಲ್ಲಿ ಏಕದಿನ ವಿಶ್ವಕಪ್ ಪ್ರಾರಂಭವಾಗುವ ಮೊದಲು ಭಾರತವು ಜನವರಿ 2027 ರಲ್ಲಿ ಶ್ರೀಲಂಕಾ ವಿರುದ್ಧ ತನ್ನ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ.
2027 ರ ಏಕದಿನ ವಿಶ್ವಕಪ್‌ಗೆ ತಂಡವನ್ನು ನಿರ್ಧರಿಸಲು ಈ 3 ವರ್ಷಗಳು ಟೀಮ್ ಇಂಡಿಯಾಕ್ಕೆ ನಿರ್ಣಾಯಕವಾಗಲಿವೆ. ಇದಲ್ಲದೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ಕಾಯ್ದುಕೊಂಡು ಕೊನೆಯ ವಿಶ್ವಕಪ್ ಎತ್ತಿ ಹಿಡಿಯುತ್ತಾರೋ? ಇಲ್ಲವೋ? ಎಂಬುದು ಕುತೂಹಲಕಾರಿಯಾಗಿದೆ.
2027ರ ವಿಶ್ವಕಪ್‌ಗೂ ಮುನ್ನ ಭಾರತದ ಏಕದಿನ ವೇಳಾಪಟ್ಟಿ
- ಆಗಸ್ಟ್ 2025: ಭಾರತ vs ಬಾಂಗ್ಲಾದೇಶ - 3 ಏಕದಿನ ಪಂದ್ಯಗಳು (ಪ್ರವಾಸ)
- ಅಕ್ಟೋಬರ್ 2025: ಭಾರತ vs ಆಸ್ಟ್ರೇಲಿಯಾ - 3 ಏಕದಿನ ಪಂದ್ಯಗಳು (ಪ್ರವಾಸ)
- ನವೆಂಬರ್ 2025: ಭಾರತ vs ದಕ್ಷಿಣ ಆಫ್ರಿಕಾ - 3 ಏಕದಿನ (ತವರು)
- ಜನವರಿ 2026: ಭಾರತ vs ನ್ಯೂಜಿಲೆಂಡ್ - 3 ಏಕದಿನ ಪಂದ್ಯಗಳು (ತವರು)
- ಜೂನ್ 2026: ಭಾರತ vs ಅಫ್ಘಾನಿಸ್ತಾನ - 3 ಏಕದಿನ (ತವರು)
- ಜುಲೈ 2026: ಭಾರತ vs ಇಂಗ್ಲೆಂಡ್ - 3 ಏಕದಿನ ಪಂದ್ಯಗಳು (ಪ್ರವಾಸ)
- ಸೆಪ್ಟೆಂಬರ್ 2026: ಭಾರತ vs ವೆಸ್ಟ್ ಇಂಡೀಸ್ - 3 ಏಕದಿನ (ತವರು)
- ನವೆಂಬರ್ 2026: ಭಾರತ vs ನ್ಯೂಜಿಲೆಂಡ್ - 3 ಏಕದಿನ ಪಂದ್ಯಗಳು (ಪ್ರವಾಸ)
- ಡಿಸೆಂಬರ್ 2026: ಭಾರತ vs ಶ್ರೀಲಂಕಾ - 3 ಏಕದಿನ (ತವರು)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications