For Quick Alerts
ALLOW NOTIFICATIONS  
For Daily Alerts
 

WTC: ಭಾರತದ ಫೈನಲ್‌ ಹಾದಿ ಕಠಿಣ; ಈ ಎರಡು ಸರಣಿ ಗೆಲ್ಲಲೇ ಬೇಕು!

ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ ಸೋಲಿಸಿದೆ. ಕಾನ್ಪುರದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ಭಾರತ 7 ವಿಕೆಟ್‌ಗಳ ಜಯ ಸಾಧಿಸಿದೆ. ಟೆಸ್ಟ್ ಸರಣಿಯಲ್ಲಿ 2-0 ಅಂತರದ ಗೆಲುವಿನೊಂದಿಗೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ (ಡಬ್ಲ್ಯೂಟಿಸಿ) ಅಂಕಪಟ್ಟಿಯಲ್ಲಿ ಆಗ್ರಸ್ಥಾನವನ್ನು ಬಲಪಡಿಸಿಕೊಂಡಿದೆ.

ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಭಾರತ ಆಗ್ರ ಸ್ಥಾನದಲ್ಲಿದ್ದರೂ, ಫೈನಲ್ ತಲುಪುವ ಹಾದಿ ಸುಲಭವಾಗಿಲ್ಲ. ಡಬ್ಲ್ಯೂಟಿಸಿ ಫೈನಲ್ ತಲುಬೇಕಾದರೆ ಭಾರತ ತಂಡ ಎರಡು ಮಹತ್ವದ ಸರಣಿಗಳನ್ನು ಕೈ ವಶ ಮಾಡಿಕೊಳ್ಳಬೇಕಾಗಿದೆ. ಬಾಂಗ್ಲಾದೇಶದ ನಂತರ, ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಪುನಃ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಈ ಸರಣಿಯಲ್ಲಿ ಭಾರತ ತಂಡ ಎರಡೂ ಪಂದ್ಯಗಳನ್ನು ಗೆಲ್ಲುವುದು ಬಹಳ ಮುಖ್ಯವಾಗಿದೆ.

Team India path to reach WTC finals Full details

ಡಬ್ಲ್ಯೂಟಿಸಿ ಪಾಯಿಂಟ್ ಟೇಬಲ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಇಂಡಿಯಾ ಇದುವರೆಗೆ ಒಟ್ಟು 11 ಪಂದ್ಯಗಳನ್ನು ಆಡಿದೆ. ಇದರಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡ 8 ಪಂದ್ಯಗಳನ್ನು ಗೆದ್ದರೆ, 2ರಲ್ಲಿ ಸೋತಿದೆ. ಒಂದು ಪಂದ್ಯ ಡ್ರಾ ನಲ್ಲಿ ಅಂತ್ಯ ಕಂಡಿದೆ. ಅಂಕಪಟ್ಟಿಯಲ್ಲಿ ಪ್ರಸ್ತುತ 74.24 ಅಂಕಗಳೊಂದಿಗೆ ಟೀಮ್ ಇಂಡಿಯಾ ನಂಬರ್-1 ಸ್ಥಾನದಲ್ಲಿದೆ.

ಇದೀಗ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 3 ಹಾಗೂ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ 5 ಪಂದ್ಯಗಳ ಸರಣಿಯು ಟೀಮ್ ಇಂಡಿಯಾಗೆ ಕಠಿಣ ಸವಾಲಾಗಲಿದೆ. ಈ ಸರಣಿಯಲ್ಲಿ ಆಸ್ಟ್ರೇಲಿಯಾ ಪ್ರಾಬಲ್ಯ ಸಾಧಿಸಿದರೆ, ಭಾರತದ ಫೈನಲ್ ಹಾದಿಗೆ ಶ್ರೀಲಂಕಾ ತಂಡ ಅಡ್ಡಿಯಾಗಬಹುದು.

ಶ್ರೀಲಂಕಾ ಅಮೋಘ ಪ್ರದರ್ಶನ

ಇತ್ತೀಚೆಗಷ್ಟೇ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಶ್ರೀಲಂಕಾ ಟೆಸ್ಟ್ ಸರಣಿಯನ್ನು ಗೆದ್ದಿದೆ. ಈ ಗೆಲುವಿನ ಮೂಲಕ ಶ್ರೀಲಂಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯನ್ನು ಬುಡಮೇಲು ಮಾಡಿದೆ. ಲಂಕಾ ಇದುವರೆಗೆ 9 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದೀಗ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯ ಟೆಸ್ಟ್ ಸರಣಿಯನ್ನು ಆಡಲಿದೆ. ಹರಿಣಗಳ ಪಡೆ ಎದುರು ಶ್ರೀಲಂಕಾ ಒಂದು ಪಂದ್ಯವನ್ನಾದರೂ ಗೆದ್ದರೆ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರ ಮಾಡಿಕೊಳ್ಳಲಿದೆ.

ಭಾರತ ಫೈನಲ್ ತಲುಪುವ ಹಾದಿ

ಕಳೆದ ಬಾರಿ ಟೀಮ್ ಇಂಡಿಯಾ 58 ಅಂಕಗಳೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಈ ಬಾರಿ ಭಾರತ ತಂಡ ಹೆಚ್ಚು ಅಂಕಗಳಿಂದ ಮುಂದಿದ್ದರೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಗೆಲ್ಲಲೇಬೇಕಿದೆ. ಅಲ್ಲದೆ, ನ್ಯೂಜಿಲೆಂಡ್ ತಂಡವನ್ನು 3-0 ಅಂತರದಿಂದ ಸೋಲಿಸಿದರೆ ರೋಹಿತ್ ಶರ್ಮಾ ಪಡೆ ಫೈನಲ್‌ಗೆ ಸುಲಭವಾಗಿ ತಲುಪಲಿದೆ.

Story first published: Wednesday, October 2, 2024, 7:01 [IST]
Other articles published on Oct 2, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+