ಶ್ರೀಲಂಕಾ ಸರಣಿ ನಂತರ ಟೀಂ ಇಂಡಿಯಾಕ್ಕೆ 23 ಪಂದ್ಯಗಳು ಕಾದಿವೆ
ಬೆಂಗಳೂರು, ಆಗಸ್ಟ್ 01: ಶ್ರೀಲಂಕಾ ಸರಣಿ ನಂತರ ಟೀಂ ಇಂಡಿಯಾ ತನ್ನ ತವರು ನೆಲದಲ್ಲಿ ಸರಿ ಸುಮಾರು 23 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. ಸೆಪ್ಟಂಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ಈ ಪಂದ್ಯಗಳು ನಡೆಯಲಿವೆ.
ಆಸ್ಟ್ರೇಲಿಯಾ ವಿರುದ್ಧ ಐದು ಏಕದಿನ ಹಾಗೂ ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯ ಹಾಗೂ ಮೂರು ಟಿ20ಐ ಪಂದ್ಯಗನ್ನಾಡಲಿದೆ. ಅಕ್ಟೋಬರ್ ನಿಂದ ನವೆಂಬರ್ ಅವಧಿಯಲ್ಲಿ ಈ ಸರಣಿ ನಡೆಯಲಿದೆ. ನಂತರ ಡಿಸೆಂಬರ್ ನಲ್ಲಿ ಶ್ರೀಲಂಕಾ ವಿರುದ್ಧ ಮೂರು ಟೆಸ್ಟ್, ಮೂರು ಏಕದಿನ ಹಾಗೂ ಮೂರು ಟಿ20ಐ ಪಂದ್ಯಗಳು ನಿಗದಿಯಾಗಿವೆ. ತವರು ನೆಲದಲ್ಲಿ ಸರಣಿ ಮುಕ್ತಾಯವಾದ ಬಳಿಕ ವಿರಾಟ್ ಕೊಹ್ಲಿ ಪಡೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದೆ.
ಹೊಸ ಸ್ಟೇಡಿಯಂಗಳು: ಕೇರಳದ ತಿರುವನಂತಪುರಂ ಹಾಗೂ ಅಸ್ಸಾಂನ ಬರ್ಸಾಪರದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಅನುಮತಿ ನೀಡಲು ಬಿಸಿಸಿಐ ಮುಂದಾಗಿದೆ. ಎಲ್ಲವೂ ಮಂಗಳವಾರ(ಆಗಸ್ಟ್ 01) ದಂದು ನಡೆಯಲಿರುವ ಸಭೆಯಲ್ಲಿ ನಿರ್ಧಾರವಾಗಲಿದೆ.
Story first published: Wednesday, January 3, 2018, 10:05 [IST]
Other articles published on Jan 3, 2018
Read in English: India to play 23 international games
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications