2024ರ ಐಸಿಸಿ ಟಿ20 ವಿಶ್ವಕಪ್ ವಿಜಯೋತ್ಸವದ ನಂತರ, ಬಾರ್ಬಡೋಸ್‌ನಿಂದ ಹಿಂದಿರುಗಿದ ಭಾರತೀಯ ಕ್ರಿಕೆಟ್ ತಂಡವನ್ನು ಐತಿಹಾಸಿಕ ಇಡೀ ರಾಷ್ಟ್ರವು ಅತ್ಯುತ್ಸಾಹದಿಂದ ಸ್ವಾಗತಿಸಿತು.
ಗುರುವಾರ, ಜುಲೈ 4ರಂದು ಬೆಳಿಗ್ಗೆಯಿಂದ ರಾತ್ರಿಯವರೆಗೂ ರಾಷ್ಟ್ರದಾದ್ಯಂತ ಹಬ್ಬದಂತೆ ಸಂಭ್ರಮ ಮನೆಮಾಡಿತ್ತು. ಟಿ20 ವಿಶ್ವಕಪ್ ಗೆದ್ದ ನಂತರ, ಬೆರಿಲ್ ಚಂಡಮಾರುತದಿಂದ ತಪ್ಪಿಸಿಕೊಂಡು ಏರ್ ಇಂಡಿಯಾ ವಿಶೇಷ ವಿಮಾನದ ಮೂಲಕ ಟೀಮ್ ಇಂಡಿಯಾ ತವರಿಗೆ ಆಗಮಸಿತು.

ನಂತರ ಭಾರತ ತಂಡಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ನಿವಾಸದಲ್ಲಿ ಮಾತುಕತೆ ಮತ್ತು ವಿಶೇಷ ಉಪಹಾರ ಕೂಟವನ್ನು ಆಯೋಜಿಸಿದ್ದರು. ಆ ಬಳಿಕ ಮುಂಬೈನಲ್ಲಿ ತೆರೆದ ಬಸ್ ವಿಜಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡಿತು.
ಭಾರತ ತಂಡದ ಐತಿಹಾಸಿಕ ವಿಜಯೋತ್ಸವವನ್ನು ಆಚರಿಸಲು ಸೇರಿದ್ದ ವಾಂಖೆಡೆಯಲ್ಲಿ ಸೇರಿದ್ದ 33,000 ಅಭಿಮಾನಿಗಳ ಸಮ್ಮುಖದಲ್ಲಿ ವಿಶ್ವ ಚಾಂಪಿಯನ್ ಆಟಗಾರರನ್ನು ಬಿಸಿಸಿಐ ಸನ್ಮಾನಿಸಿತು ಮತ್ತು 125 ಕೋಟಿ ರೂಪಾಯಿಗಳ ಹೆಚ್ಚುವರು ಬಹುಮಾನ ಮೊತ್ತವನ್ನು ಹಸ್ತಾಂತರಿಸಿತು.

ಅಭಿನಂದನಾ ಕಾರ್ಯಕ್ರಮ ಮುಗಿದ ಬಳಿಕ ಭಾರತ ತಂಡದ ಆಟಗಾರರು ವಿಶ್ವಕಪ್ ಟ್ರೋಫಿಯೊಂದಿಗೆ ಮೈದಾನ ಸುತ್ತು ಹಾಕಲು ಪ್ರಾರಂಭಿಸಿದರು. ಈ ವೇಳೆ ರೋಹಿತ್ ಶರ್ಮಾ ನಾಯಕತ್ವದ ಇಡೀ ತಂಡವು ಎಆರ್ ರೆಹಮಾನ್ ಅವರ ದೇಶಭಕ್ತಿ ಗೀತೆ 'ವಂದೇ ಮಾತರಂ' ಹಾಡುವ ಮೂಲಕ ಅಭಿಮಾನಿಗಳಿಗೆ ವಿಜಯದ ಹರ್ಷೋದ್ಗಾರ ಮಾಡಿದರು.
ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟ್ ತಾರೆಗಳನ್ನು ತುಂಬಾ ಹತ್ತಿರದಿಂದ ನೋಡುವ, ವಿಶ್ವಕಪ್ ಟ್ರೋಫಿ ಮತ್ತು ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಪ್ರದರ್ಶಿಸುವ ಉತ್ಸಾಹವನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ, ಈ ಕ್ಷಣವು ಸಾಮಾಜಿಕ ಮಾಧ್ಯಮದಲ್ಲಿ ಬಹು ಬೇಗನೆ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ತಂಡದ ಉಳಿದ ಆಟಗಾರರು ಡಿಜೆಯಲ್ಲಿ ಮೊಳಗುತ್ತಿದ್ದ 'ವಂದೇ ಮಾತರಂ' ಹಾಡನ್ನು ಭಾವೋದ್ರಿಕ್ತವಾಗಿ ಹಾಡುವುದನ್ನು ಕಾಣಬಹುದು.
ಇದನ್ನು ನೋಡುವ ಭಾರತೀಯರಿಗೆ 'ಗೂಸ್‌ಬಂಪ್ಸ್' ನೀಡುವುದು ಗ್ಯಾರಂಟಿಯಾದ ವಿಡಿಯೋ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಇದುವರೆಗೆ ಮೂರು ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಉತ್ಸಾಹದಲ್ಲಿ ಅಭಿಮಾನಿಯೊಬ್ಬ ಸ್ಟ್ಯಾಂಡ್‌ನಿಂದ ಹಾರ್ದಿಕ್ ಪಾಂಡ್ಯ ಕಡೆಗೆ ಶರ್ಟ್ ಎಸೆದಾಗ ಉಳಿದ ಆಟಗಾರರ ಉಲ್ಲಾಸದ ಕ್ಷಣವನ್ನು ವಿಡಿಯೋ ಒಳಗೊಂಡಿದೆ.
ಮುಂಬೈನ ಮರೀನ್ ಡ್ರೈವ್‌ನಲ್ಲಿ ಭಾರತ ಕ್ರಿಕೆಟ್ ತಂಡದ ವಿಜಯೋತ್ಸವದ ಮೆರವಣಿಗೆಯನ್ನು ವೀಕ್ಷಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿರುವುದು ಗಮನಾರ್ಹವಾಗಿದೆ.
11 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆದ್ದ ತಮ್ಮ ನೆಚ್ಚಿನ ಕ್ರಿಕೆಟ್ ತಾರೆಯರನ್ನು ಹತ್ತಿರದಿಂದ ನೋಡಲು ನಗರದ ಎಲ್ಲೆಡೆಯಿಂದ ಜನರು ಮರೀನ್ ಡ್ರೈವ್‌ಗೆ ಆಗಮಿಸಿದರು. ಭಾರತ ತಂಡದ ಬಸ್‌ನಲ್ಲಿ ವಿಶ್ವಕಪ್ ಟ್ರೋಫಿಯೊಂದಿಗೆ ಒಂದೊಂದಾಗಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸುವಂತೆ ಇಡೀ ತಂಡವು ಭಾವಪರವಶವಾಗಿ ಕಾಣುತ್ತಿತ್ತು.
ಹೃದಯಸ್ಪರ್ಶಿ ಕ್ಷಣದಲ್ಲಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಕಳೆದ 11 ವರ್ಷಗಳಲ್ಲಿ ಪ್ರಮುಖ ಪ್ರಶಸ್ತಿಯನ್ನು ಗೆಲ್ಲಲು ವಿಫಲವಾದಾಗ ಭಾರತೀಯ ತಂಡದೊಂದಿಗೆ ಉತ್ತಮ ಮತ್ತು ಕಳಪೆ ಫಾರ್ಮ್‌ನಲ್ಲಿ ಬೆಂಬಲಿಸಿದ ಅಭಿಮಾನಿಗಳಿಗೆ ಟ್ರೋಫಿ ತೋರಿಸಿ ಉತ್ಸಾಹ ಹೆಚ್ಚಿಸಿದರು.
ಮುಂದಿನ ಕೆಲವು ದಿನಗಳಲ್ಲಿ ಭಾರತ ತಂಡದ ಸಂಭ್ರಮಾಚರಣೆಗಳು ನಿಲ್ಲುವ ಸಾಧ್ಯತೆಯಿಲ್ಲ. ಏಕೆಂದರೆ ಆಟಗಾರರು ತಮ್ಮ ನಗರಗಳಿಗೆ ಹಿಂತಿರುಗುತ್ತಾರೆ, ಅಲ್ಲಿ ಅವರು ಮತ್ತೊಮ್ಮೆ ಗೌರವಿಸಲ್ಪಡುತ್ತಾರೆ.