Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟರ್ ಮನೀಶ್ ಪಾಂಡೆ ಜೊತೆಗೆ ನಟಿ ಆಶ್ರಿತಾ ಶೆಟ್ಟಿ ಮದುವೆ

Team India player Manish Pandey set to tie the knot with Actress Ashrita Shetty

ಬೆಂಗಳೂರು, ಅಕ್ಟೋಬರ್ 10: ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ, ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಹಾಗೂ ನಟಿ ಆಶ್ರಿತಾ ಶೆಟ್ಟಿ ಇಬ್ಬರ ಮದುವೆ ನಿಕ್ಕಿಯಾಗಿದೆ. ಮುಂಬೈನಲ್ಲಿ ಇಬ್ಬರ ಮದುವೆ ನಡೆಸಲು ಎರಡು ಕಡೆ ಹಿರಿಯರು ನಿಶ್ಚಯಿಸಿದ್ದಾರೆ. ಡಿಸೆಂಬರ್ 02ರಂದು ವಿವಾಹ ಮಹೋತ್ಸವ ನಿಗದಿಯಾಗಿದೆ.

ಸದ್ಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿರುವ ಮನೀಶ್ ಪಾಂಡೆ ಅವರು 6 ಪಂದ್ಯಗಳಿಂದ 400 ಪ್ಲಸ್ ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. 30 ವರ್ಷ ವಯಸ್ಸಿನ ಮನೀಶ್ ಹಾಗೂ ಆಶ್ರಿತಾ ಅನೇಕ ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಮದುವೆ ಬಗ್ಗೆ ಇಬ್ಬರೂ ಯಾರಿಗೂ ತಿಳಿಸಿರಲಿಲ್ಲ.

26ವರ್ಷ ವಯಸ್ಸಿನ ಆಶ್ರಿತಾ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಸಿದ್ದಾರ್ಥ್ ಜೊತೆಯಲ್ಲಿ ಉದಯಂ ಎನ್ ಎಚ್ 4, ಒರು ಕನ್ನಿಯುಂ ಮೂನು ಕಳವಾನಿಕಳುಂ ಜನಪ್ರಿಯ ಚಿತ್ರವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಎಂಬ ಸಾಧನೆ ಮಾಡಿರುವ ಮನೀಶ್ ಪಾಂಡೆ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟರು. ಅಲ್ಲಿಂದ ಇಲ್ಲಿ ತನಕ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಆಡಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಕರ್ನಾಟಕದ ಪರ ವಿನಯ್ ಕುಮಾರ್ ಅನುಪಸ್ಥಿತಿಯಲ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.

Story first published: Thursday, October 10, 2019, 16:16 [IST]
Other articles published on Oct 10, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+