ಶ್ರೇಯಸ್ ಅಯ್ಯರ್ ಬೆನ್ನು ಬಿಡದೇ ಕಾಡುತ್ತಿರುವ 'ಆ ಬಾಲ್'
ವಿಶ್ವಕಪ್ ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ ನಿರಾಸೆ ಅನುಭವಿಸಿದ್ದಾರೆ. ಶ್ರೇಯಸ್ ಅಯ್ಯರ್ ತಮ್ಮ ಆಟವನ್ನು ಸುಧಾರಿಸುವಲ್ಲಿ ನಿರಂತರವಾಗಿ ವಿಫಲರಾಗುತ್ತಿದ್ದಾರೆ.
ಬಹಳ ದಿನಗಳಿಂದ ಅಯ್ಯರ್ ಅವರಿಗೆ ಕಾಡುತ್ತಿದ್ದ ಶಾರ್ಟ್ ಬಾಲ್ ಸಮಸ್ಯೆಯಾಗಿಯೇ ಉಳಿದಿದೆ. ನ್ಯೂಜಿಲೆಂಡ್ ವಿರುದ್ಧ ಧರ್ಮಶಾಲಾ ಮೈದಾನದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ದಾಳಿಗೆ ತುತ್ತಾದರು. ಬೌಲ್ಟ್, ಶಾರ್ಟ್ ಬಾಲ್ ಮೂಲಕ ಅಯ್ಯರ್ ಅವರನ್ನು ಪೆವೆಲಿಯನ್ ಗೆ ಅಟ್ಟಿದರು.

ಬಹಳ ಸಮಯದಿಂದ ಅಯ್ಯರ್ ಶಾರ್ಟ್ ಬಾಲ್ ಗಳಲ್ಲಿ ಔಟಾಗುತ್ತಿರುವುದು ಕಂಡು ಬರುತ್ತಿದೆ. ಅಯ್ಯರ್ ಅವರು ಬೌಲ್ಟ್ ಅವರ ಶಾರ್ಟ್ ಬಾಲ್ ಅನ್ನು ಪುಲ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟಿನ ಮೇಲಿನ ಅಂಚಗೆ ತಾಗಿ ಗಾಳಿಯಲ್ಲಿ ಹೋಯಿತು. ಅಲ್ಲದೆ ಹೆಚ್ಚು ದೂರ ಹೋಗಲಿಲ್ಲ. ಪರಿಣಾಮ ಅಯ್ಯರ್ ಅವರು ಡೆವೊನ್ ಕಾನ್ವೇಗೆ ಕ್ಯಾಚ್ ನೀಡಿದರು.
ಏಷ್ಯಾಕಪ್ ಪಂದ್ಯದಲ್ಲಿ ವೇಗಿ ಹ್ಯಾರಿಸ್ ರೌಫ್
ಕಿವೀಸ್ ವಿರುದ್ಧ ಅಯ್ಯರ್ ವೇಗವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು 29 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 33 ರನ್ ಗಳಿಸಿದ್ದರು. ಇದಕ್ಕೂ ಮೊದಲು ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ವೇಗಿ ಹ್ಯಾರಿಸ್ ರೌಫ್ ಕೂಡ ಶ್ರೇಯಸ್ ಅಯ್ಯರ್ ಅವರನ್ನು ಶಾರ್ಟ್ ಬಾಲ್ನಲ್ಲಿ ಔಟ್ ಮಾಡಿದ್ದರು.
ಅದೇ ರೀತಿ ಶಾರ್ಟ್ ಬಾಲ್ ಗಳಲ್ಲಿ ಒಂದಲ್ಲ ಎರಡಲ್ಲ ಹಲವು ಬಾರಿ ಶ್ರೇಯಸ್ ಔಟಾಗುವುದನ್ನು ನೋಡಿದ್ದೇವೆ. ಇದರ ಹೊರತಾಗಿಯೂ, ಶಾರ್ಟ್ ಬಾಲ್ ವಿರುದ್ಧ ಅಯ್ಯರ್ ಆಟದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ.
ನ್ಯೂಜಿಲೆಂಡ್ ವಿರುದ್ಧ 33 ರನ್
ಇಲ್ಲಿಯವರೆಗೆ ವಿಶ್ವಕಪ್ ನಲ್ಲಿ ಅಯ್ಯರ್ ಅಫ್ಘಾನಿಸ್ತಾನ ವಿರುದ್ಧ ಔಟಾಗದೆ 25, ಪಾಕಿಸ್ತಾನ ವಿರುದ್ಧ 53, ಬಾಂಗ್ಲಾದೇಶ ವಿರುದ್ಧ 19 ಮತ್ತು ನ್ಯೂಜಿಲೆಂಡ್ ವಿರುದ್ಧ 33 ರನ್ ಗಳಿಸಿದ್ದಾರೆ. ಅಯ್ಯರ್ ಇದುವರೆಗೆ ಭಾರತದ ಪರ 10 ಟೆಸ್ಟ್, 51 ODI ಮತ್ತು 49 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ಅವರು ಟೆಸ್ಟ್ ಪಂದ್ಯದ 16 ಇನ್ನಿಂಗ್ಸ್ ಗಳಲ್ಲಿ 44.40 ಸರಾಸರಿಯಲ್ಲಿ 666 ರನ್ ಗಳನ್ನು ಗಳಿಸಿದ್ದಾರೆ, 46 ODIಗಳಲ್ಲಿ 46 ಇನ್ನಿಂಗ್ಸ್ ಗಳಲ್ಲಿ 46.29 ರ ಸರಾಸರಿಯಲ್ಲಿ 1,898 ರನ್ ಮತ್ತು T20 ಪಂದ್ಯಗಳಲ್ಲಿ 135.98 ಸ್ಟ್ರೈಕ್ ರೇಟ್ ನಲ್ಲಿ 1043 ರನ್ ಗಳನ್ನು ಗಳಿಸಿದ್ದಾರೆ. ಅವರು ಟೆಸ್ಟ್ ನಲ್ಲಿ ಒಂದು ಮತ್ತು ODI ನಲ್ಲಿ 3 ಶತಕಗಳನ್ನು ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications