ಟೀಮ್ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಹೈ ಲೈಫ್ ಸ್ಟೈಲ್ ಹೊಂದಿರುವ ಆಟಗಾರ. ಈ ಪ್ಲೇಯರ್ ಖಾಸಗಿ ಬದುಕಿನ ಬಗ್ಗೆ ಅಭಿಮಾನಿಗಳು ಸರ್ಚ್ ಮಾಡ್ತಾ ಇರುತ್ತಾರೆ. ಅವರು ಯುವಕರ ಪಾಲಿನ ರೋಲ್ ಮಾಡಲ್. ಸಮಯ ಸಿಕ್ಕಾಗಲೆಲ್ಲಾ ತಮ್ಮ ಐಶಾರಾಮಿ ಬದುಕಿನ ಅನಾರವಣವನ್ನು ವಿರಾಟ್ ಕೊಹ್ಲಿ ಮಾಡುತ್ತಲ್ಲೇ ಇರುತ್ತಾರೆ.
ಈಗ ವಿರಾಟ್ ಕೊಹ್ಲಿ ಅವರು ತಮ್ಮ ಹೊಸ ಮನೆಯ ವಿಡಿಯೋವನ್ನು ಸಮಾಜಿಕ ತಾಣಗಳಲ್ಲಿ ಹಾಕಿದ್ದಾರೆ. ಈ ಮನೆಯನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್.. ಹಾಲಿ ಡೇ ಹೋಮ್ ಟೂರ್ ಮಾಡಿಸಿದ್ದಾರೆ. ಮುಂಬೈನ ದಕ್ಷಿಣ ಭಾಗದಲ್ಲಿ ಭವ್ಯ ಭಂಗಲೆಯನ್ನು ಕೊಂಡು ಕೊಂಡಿದ್ದಾರೆ. ಈ ಐಶಾರಾಮಿ ಮನೆ 10 ಸಾವಿರ ಸ್ಕ್ವೇರ್ ಫುಟ್ ನಲ್ಲಿ ನಿರ್ಮಿಸಲಾಗಿದೆ.

ಭಾರತದ ಮಾಜಿ ನಾಯಕನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಅಲಿಬಾಗ್‌ನಲ್ಲಿರುವ ತಮ್ಮ ಹಾಲಿಡೇ ಹೌಸ್ ಅನ್ನು ತೋರಿಸುತ್ತಿದ್ದಾರೆ. ಅಲಿಬಾಗ್‌ನಲ್ಲಿರುವ ಹಾಲಿಡೇ ಹೋಮ್‌ನಲ್ಲಿ ಏನಿದೆ ಎಂದು ವಿರಾಟ್ ಕೊಹ್ಲಿ ವಿಡಿಯೋದಲ್ಲಿ ತೋರಿಸುತ್ತಿದ್ದಾರೆ, ಜೊತೆಗೆ ಈ ಮನೆಯ ವಿಶೇಷತೆ ವಿಸ್ತರಿಸಿದ್ದಾರೆ.
ವಿರಾಟ್ ಕೊಹ್ಲಿ ವಿರಾಮ ತೆಗೆದುಕೊಂಡರೆ ಇನ್ನು ಮುಂದೆ ಇದೇ ಮನೆಯಲ್ಲಿ ವಿರಾಟ್ ಟೈಮ್ ಸ್ಪೆಂಡ್ ಮಾಡಲಿದ್ದಾರೆ. ಆರ್ಕಿಟೆಕ್ಚರಲ್ ಡೈಜೆಸ್ಟ್ ಪ್ರಕಾರ ಕ್ಯಾಲಿಫೋರ್ನಿಯಾದ ಕೊಂಕಣ ಶೈಲಿಯ ನಾಲ್ಕು-ಮಲಗುವ ಕೋಣೆ ವಿಲ್ಲಾ ಇದಾಗಿದೆ. ಕಿಟಕಿಗಳು ಮತ್ತು ಗಾಜಿನ ಗೋಡೆಗಳ ಮೂಲಕ ನೈಸರ್ಗಿಕ ಬೆಳಕ ಮನೆಯ ಒಳಗಡೆ ಹರಿಯುವಂತೆ ಮಾಡುವ ಎತ್ತರದ ಛಾವಣಿಗಳನ್ನು ಹೊಂದಿದೆ.
ಈ ಮನೆಯ ಲೀವಿಂಗ್ ಕೋಣೆಯನ್ನು ಪ್ರವೇಶಿಸಿದರೆ ಅಚ್ಚರಿ ಎದುರಾಗುತ್ತದೆ. ಈ ಕೋಣೆಯಲ್ಲಿ ಟಿವಿ ಇಲ್ಲ. ವಿರಾಟ್ ಕೊಹ್ಲಿ ಅವರ ಪ್ರಕಾರ, ನಾವೆಲ್ಲಾ ಆಟಗಾರರು ರಜೆಯ ಮಜೆಯನ್ನು ಸವಿಯಲು ಕುಟುಂಬದ ಜೊತೆ ಸಮಯ ಕಳೆಯಲು ಬಯಸುತ್ತೇವೆ ಎಂದಿದ್ದಾರೆ. ಇಲ್ಲಿ ಆಸಕ್ತಿದಾಯಕ ವಿಷಯ ಅಂದ್ರೆ, ಕಟ್-ಔಟ್ ಸೀಲಿಂಗ್ ಎತ್ತರವಾಗಿದೆ. ಇಲ್ಲಿ ನೈಸರ್ಗಿಕ ಬೆಳಕ ಮನೆಯನ್ನು ಆವರಿಸಿದೆ.

ವಿಲ್ಲಾವನ್ನು ಬಲಿನೀಸ್ ಸುಕಬುಮಿ ಕಲ್ಲಿನಿಂದ ನಿರ್ಮಿಸಲಾಗಿದ್ದು, ತಾಪಮಾನ ನಿಯಂತ್ರಣಕ್ಕೆ ಸಹಾಯಕವಾಗುತ್ತದೆ. ಸಂಪೂರ್ಣ-ಕಸ್ಟಮೈಸ್ ಮಾಡಿದ ಅಡುಗೆಮನೆಯನ್ನು ಸಹ ವಿರಾಟ್ ಮನೆ ಒಳಗೊಂಡಿದೆ.
ವಿರಾಟ್ ಕೊಹ್ಲಿ ಚಿಕ್ಕ ವಯಸ್ಸಿನಲ್ಲಿ ಬಿಡುವಿಲ್ಲದ ವೇಳಾಪಟ್ಟಿಯಿಂದ ಕುಟುಂಬದ ಜೊತೆ ಕಾಲ ಕಳೆಯುವುದನ್ನು ಮಿಸ್ ಮಾಡಿಕೊಂಡಿದ್ದೇನೆ. ಆ ನೆನಪು ಮರುಕಳಿಸುವ ಉದ್ದೇಶದಿಂದಲೇ ಡೈನಿಂಗ್ ಹಾಲ್‌ನ್ನು ನೀಟ್ ಆಗಿ ನಿರ್ಮಿಸಿದ್ದಾರೆ. ಇಲ್ಲಿ ಕುಟುಂಬಸ್ಥರು ಇನ್ನು ಮುಂದೆ ಕುಳಿತು ಹರಟೆ ಹೊಡೆಯಬಹುದು ಎಂಬ ನಂಬಿಕೆ ವಿರಾಟ್ ಅವರದ್ದಾಗಿದೆ. ಕೊಹ್ಲಿ ತಮ್ಮ ಹಾಲಿಡೇ ಹೋಮ್‌ನಲ್ಲಿ ವಿಸ್ತಾರವಾದ ಹೊರಾಂಗಣ ಸ್ಥಳವನ್ನು ಹೈಲೈಟ್ ಮಾಡಿದರು. ಅಲ್ಲದೆ ಈ ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಮುಂಬೈನಲ್ಲಿ ನೆಲೆಸಿರುವ ಕೊಹ್ಲಿ, ಕೆಲಸ ಮತ್ತು ಜೀವನವನ್ನು ಸಮಾನಾಗಿ ನೋಡುವುದು ಅವಶ್ಯಕ ಎಂದರು.
"ನನಗೆ ಮೊದಲ ಆದ್ಯತೆಯಾಗಿದೆ. ನಾನು ಕ್ರಿಕೆಟ್‌ನಲ್ಲಿ ಬ್ಯೂಸಿ ಆಗಿರುತ್ತೇನೆ. ಯಾವಾಗ ಸಮಯ ಸಿಗುತ್ತದೋ ಆಗ, ಕುಟುಂಬದ ಜತೆ ಸಮಯವನ್ನು ಕಳೆಯಲು ಬಯಸುವೆ. ಕುಟುಂಬ ಹಾಗೂ ಕೆಲಸವನ್ನು ಸಮತೋಲನಗೊಳಿಸಲು ಪ್ರಯತ್ನಿಸುವೆ ಎಂದಿದ್ದಾರೆ.

ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ತಂಡವನ್ನು ಸೇರಿಕೊಂಡಿದ್ದಾರೆ. ಸುಮಾರು 14 ತಿಂಗಳ ಬಳಿಕ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ತಂಡಕ್ಕೆ ಸೇರಿಕೊಂಡಿದ್ದಾರೆ.