ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಸಂಭ್ರಮ ಆಚರಿಸಿ, ಶುಭಾಶಯ ತಿಳಿಸಿದ ಟೀಂ ಇಂಡಿಯಾ ಆಟಗಾರರು

ಜಿಂಬಾಬ್ವೆ ವಿರುದ್ಧದ ಮಹತ್ವದ ಪಂದ್ಯದಕ್ಕೆ ಟೀಂ ಇಂಡಿಯಾ ಸಿದ್ಧತೆ ನಡೆಸುತ್ತಿದೆ. ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ತಮ್ಮ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಟೀಂ ಇಂಡಿಯಾ ಆಟಗಾರರು ಅಭ್ಯಾಸಕ್ಕೆ ತೆರಳುವ ಮುನ್ನ ಕೇಕ್ ಕತ್ತರಿಸಿ, ಕೊಹ್ಲಿ ಜನ್ಮದಿನವನ್ನು ಆಚರಿಸಿದ್ದಾರೆ.
ಮೆಲ್ಬೋರ್ನ್‌ನಲ್ಲಿ ತಂಡವು ವಿರಾಟ್ ಕೊಹ್ಲಿ ಅವರ ಜನ್ಮದಿನವನ್ನು ಹೇಗೆ ಆಚರಿಸಿರುವ ಫೋಟೊಗಳು ವೈರಲ್ ಆಗಿವೆ. ಭಾನುವಾರ (ನವೆಂಬರ್ 6) ನಡೆಯಲಿರುವ ತನ್ನ ಕೊನೆಯ ಸೂಪರ್ 12 ಹಣಾಹಣಿಯಲ್ಲಿ ಜಿಂಬಾಬ್ವೆಯನ್ನು ಎದುರಿಸಲು ಟೀಂ ಇಂಡಿಯಾ ಸಜ್ಜಾಗಿದೆ.
ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸಿದರೆ ಭಾರತ ಸೆಮಿಫೈನಲ್ ಸ್ಥಾನ ಖಚಿತವಾಗುತ್ತದೆ. ಕೊಹ್ಲಿ ಹುಟ್ಟುಹಬ್ಬದ ಪ್ರಯುಕ್ತ ಶನಿವಾರ ಸಂಜೆ ಮೆಲ್ಬೋರ್ನ್‌ನಲ್ಲಿ ಸಣ್ಣ ಮತ್ತು ವಿಶೇಷ ಪಾರ್ಟಿಯನ್ನು ಯೋಜಿಸಿದೆ. 34ನೇ ವರ್ಷಕ್ಕೆ ಕಾಲಿಟ್ಟಿರುವ ವಿಶೇಷ ಆಟಗಾರ ವಿರಾಟ್ ಕೊಹ್ಲಿಗೆ ಸಣ್ಣ ಡಿನ್ನರ್ ಪಾರ್ಟಿ. ಇಡೀ ತಂಡವು ಅವರ ಕುಟುಂಬಗಳೊಂದಿಗೆ ತಂಡದ ಭೋಜನಕ್ಕೆ ಹಾಜರಾಗಲಿದೆ.
ಅಭ್ಯಾಸದ ಆರಂಭದ ಮೊದಲು ತಮ್ಮ ಹುಟ್ಟುಹಬ್ಬದ ಕೇಕ್ ಅನ್ನು ಸಹ ಕತ್ತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಶ್ವಿನ್, ಟೀಮ್ ಇದೀಗ ಕೇಕ್ ಕತ್ತರಿಸಿ ಕೊಹ್ಲಿಯ ಹುಟ್ಟುಹಬ್ಬವನ್ನು ಆಚರಿಸಿದೆ ಎಂದು ಬಹಿರಂಗಪಡಿಸಿದರು. "ಹೌದು, ನಾವು ಅಭ್ಯಾಸಕ್ಕೆ ಬರುವ ಮೊದಲು ಕೇಕ್ ಕತ್ತರಿಸಿ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದೇವೆ" ಎಂದು ಅಶ್ವಿನ್ ಹೇಳಿದರು

ಕೊಹ್ಲಿಗೆ ಶುಭಾಶಯಗಳ ಮಹಾಪೂರ
ಲೆಜೆಂಡರಿ ಬ್ಯಾಟರ್ ಕೊಹ್ಲಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಉಪ ನಾಯಕ ಕೆಎಲ್ ರಾಹುಲ್, ಶಮಿ ಮತ್ತು ಹಾರ್ದಿಕ್ ಪಾಂಡ್ಯ ಗೆಳೆಯನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಮತ್ತು ಇತರ ಹಲವು ಯುವ ಆಟಗಾರರಿಗೆ ಕೊಹ್ಲಿ ಸ್ಫೂರ್ತಿಯಾಗಿದ್ದಾರೆ.
ಬಾಂಗ್ಲಾದೇಶದ ಪಂದ್ಯಕ್ಕೆ ಮುನ್ನ ಫಾರ್ಮ್ ಕಳೆದುಕೊಂಡಿದ್ದ ಕೆಎಲ್ ರಾಹುಲ್‌ಗೆ ಬ್ಯಾಟಿಂಗ್ ಬಗ್ಗೆ ಹಲವು ಸಲಹೆಗಳನ್ನು ನೀಡಿದ್ದರು. ಕೊಹ್ಲಿ ಸಲಹೆ ನಂತರ ರಾಹುಲ್ ಬಾಂಗ್ಲಾದೇಶದ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ಫಾರ್ಮ್ ಕಂಡುಕೊಂಡಿದ್ದಾರೆ.
ಶ್ರೇಯಸ್ ಅಯ್ಯರ್ ಕೂಡ ತನ್ನ ನೆಚ್ಚಿನ ಕ್ರಿಕೆಟಿಗನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಭಾರತದ ತಂಡದ ಆಟಗಾರರು ಮಾತ್ರವಲ್ಲದೆ, ವಿಶ್ವದ ಹಲವು ತಂಡಗಳ ಆಟಗಾರರು ಬ್ಯಾಟಿಂಗ್ ದಿಗ್ಗಜನಿಗೆ ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭಹಾರೈಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications