Holi Festival: ಟೀಮ್ ಇಂಡಿಯಾ ಆಟಗಾರರ ಬಣ್ಣದೋಕುಳಿ; ಸಂಭ್ರಮಿಸಿದ ಕ್ರಿಕೆಟ್ ತಾರೆಯರು

ದೇಶಾದ್ಯಂತ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಟೀಮ್ ಇಂಡಿಯಾ ಆಟಗಾರರು ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದು ಡ್ರೆಸ್ಸಿಂಗ್ ರೂಮ್‌ನಲ್ಲಿ ಹಾಗೂ ಟೀಮ್ ಬಸ್‌ನಲ್ಲಿ ಬಣ್ಣದೋಕುಳಿ ಆಡಿ ಸಂಭ್ರಮಿಸಿದ್ದಾರೆ. ನಾಲ್ಕನೇ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಈಗಾಗಲೇ ಅಹ್ಮದಾಬಾದ್‌ನಲ್ಲಿ ಅಭ್ಯಾಸ ನಡೆಸುತ್ತಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಟಗಾರರು ಹೋಳಿ ಆಡಿ ಸಂಭ್ರಮಿಸಿದ್ದಾರೆ.
ಅಹ್ಮದಾಬಾದ್ ನರೆಂದ್ರ ಮೋದಿ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಅಭ್ಯಾಸ ಹೋಳಿ ಆಡಿದ ಟೀಮ್ ಇಂಡಿಯಾ ಆಟಗಾರರು ಬಳಿಕ ವಾಸ್ತವ್ಯವಿರುವ ಹೋಟೆಲ್‌ಗೆ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ತಂಡದ ಬಸ್‌ನಲ್ಲಿಯೂ ಬಣ್ಣದೋಕುಳಿ ಆಡಿದ್ದಾರೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಬ್ಮನ್ ಗಿಲ್, ರವೀಂದ್ರ ಜಡೇಜಾ ಸೇರಿದಂತೆ ತಂಡದ ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿಗಳು ಹಾಡಿ ಕುಣಿದಿದ್ದಾರೆ.
ಇನ್ನು ಇದರ ವಿಡಿಯೋವನ್ನು ಯುವ ಆಟಗಾರ ಶುಬ್ಮನ್ ಗಿಲ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಹಿಂದಿ ಹಾಡೊಂದು ಹಾಡುವ ಮೂಲಕ ತಮ್ಮ ಹಾಡಿನ ಕೌಶಲ್ಯವನ್ನು ಕೂಡ ತೋರಿಸಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಹಿಂಭಾಗದಲ್ಲಿದ್ದ ನಾಯಕ ರೋಹಿತ್ ಶರ್ಮಾ ಕೂಡ ವಿಭಿನ್ನವಾಗಿ ಪೋಸ್ ನೀಡಿದ್ದಲ್ಲದೆ ವಿರಾಟ್ ಕೊಹ್ಲಿಯತ್ತ ಬಣ್ಣ ಎರಚಿ ಸಂಭ್ರಮಿಸಿದ್ದಾರೆ. ಮಾರ್ಚ್ 8 ಬುಧವಾರದಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಆರೆ ಅದರ ಸಂಭ್ರಮ ಮಂಗಳವಾರ ಸಂಜೆಯಿಂದಲೇ ದೇಶಾದ್ಯಂತ ಆರಂಭವಾಗಿದೆ.
ಇನ್ನು ವುಮೆನ್ಸ್ ಪ್ರೀಮಿಯರ್ ಲೀಗ್ ತಂಡಗಳು ಕೂಡ ಹೋಳಿ ಹಬ್ಬವನ್ನು ಸಂಭ್ರಮಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಲ್ಲಾ ಆಟಗಾರ್ತಿಯರು ಕೂಡ ಈ ವಿಶಿಷ್ಠ ಹಬ್ಬವನ್ನು ಬಣ್ಣಗಳೊಂದಿಗೆ ಸಂಬ್ರಮಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಹೋಳಿ ಹಬ್ಬದ ಸಂಭ್ರಮದ ಫೋಟೋವನ್ನು ಹಂಚಿಕೊಂಡಿದ್ದು ವಿರಾಟ್ ಕೊಹ್ಲಿ ಕೂಡ ರಚೀಂದ್ರ ಜಡೇಜಾ ಜೊತೆಗೆ ಬಣ್ಣ ತುಂಬಿದ ಮುಖದೊಂದಿಗೆ ಪೋಸ್ ನೀಡಿದ್ದಾರೆ.
ಇನ್ನು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಮೂರು ಪಂದ್ಯಗಳು ಮುಕ್ತಾಯವಾಗಿದ್ದು ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಿಂದ ಮುನ್ನಡೆಯಲ್ಲಿದೆ. ಆದರೆ ಈ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಬೇಕಿದ್ದರೆ ಅಹ್ಮದಾಬಾದ್‌ನಲ್ಲಿ ಗೆಲ್ಲುವ ಅನಿವಾರ್ಯತೆಯಿದೆ. ಹೀಗಾಗಿ ಟೀಮ್ ಇಂಡಿಯಾ ಅಂತಿಮ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications