Duleep Trophy 2024: ಮೊದಲ ದಿನವೇ ಟೀಮ್ ಇಂಡಿಯಾ ಯುವ ಆಟಗಾರರು ಪ್ಲಾಪ್
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಈ ಸರಣಿಗೆ ಭಾರತ ತಂಡವನ್ನು ಮುಂದಿನ ವಾರದೊಳಗೆ ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ. ಅದಕ್ಕೂ ಮುನ್ನ ಟೀಮ್ ಇಂಡಿಯಾದ ಕೆಲವು ಆಟಗಾರರು ದುಲೀಪ್ ಟ್ರೋಫಿಯ ಭಾಗವಾಗಿದ್ದಾರೆ.
ಟೀಮ್ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯಲು ಎಲ್ಲ ಆಟಗಾರರಿಗೂ ಈ ಟೂರ್ನಿ ಅತ್ಯಂತ ಮಹತ್ವದ್ದಾಗಿದೆ. ಆದರೆ ರಿಷಬ್ ಪಂತ್ ಸೇರಿದಂತೆ ಟೀಮ್ ಇಂಡಿಯಾದ ಕೆಲವು ಯುವ ಸ್ಟಾರ್ ಆಟಗಾರರು ಮೊದಲ ದಿನವೇ ಪ್ಲಾಪ್ ಆಗಿದ್ದಾರೆ.

ರಿಷಬ್ ಪಂತ್
ಸುಮಾರು ಒಂದೂವರೆ ವರ್ಷಗಳ ಕಾಲ ಕಾರು ಅಪಘಾತದಿಂದಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಗಾಯಗಳಿಂದ ಚೇತರಿಸಿಕೊಂಡ ನಂತರ ಅವರು ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಸರದಿ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಷಬ್ ಪಂತ್ ಮರಳುವುದು ಬಹುತೇಕ ಖಚಿತ. ಆದರೆ ಪಂತ್ ದುಲೀಪ್ ಟ್ರೋಫಿಯಲ್ಲಿ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಭಾರತ ಬಿ ತಂಡದ ವಿರುದ್ಧ ಕೇವಲ 7 ರನ್ ಗಳಿಸಿದರು.
ಶ್ರೇಯಸ್ ಅಯ್ಯರ್
ಕೇಂದ್ರ ಗುತ್ತಿಗೆಯಿಂದ ಹೊರಗುಳಿದ್ದ ಶ್ರೇಯಸ್ ಅಯ್ಯರ್ ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾಗೆ ಮರಳಿದ್ದರು. ಆದರೆ ವಿಶೇಷವಾದುದನ್ನು ಮಾಡಲು ಅವರಿಂದ ಸಾಧ್ಯವಾಗಿರಲಿಲ್ಲ. ಇದೀಗ ದುಲೀಪ್ ಟ್ರೋಫಿಯಲ್ಲಿ ಆಡುತ್ತಿರುವ ಅವರು ಮೊದಲ ಪಂದ್ಯದಲ್ಲೇ ನಿರಾಸೆ ಮೂಡಿಸಿದ್ದಾರೆ. ಭಾರತ ಡಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಕೇವಲ 9 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಸರ್ಫರಾಜ್ ಖಾನ್
ಈ ವರ್ಷದ ಆರಂಭದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾಕ್ಕೆ ಸರ್ಫರಾಜ್ ಪಾದಾರ್ಪಣೆ ಮಾಡಿದ್ದರು. ಈಗ ಟೀಮ್ ಇಂಡಿಯಾದಲ್ಲಿ ಮತ್ತೊಂದು ಅವಕಾಶ ಪಡೆಯಲು ದುಲೀಪ್ ಟ್ರೋಫಿಯಲ್ಲಿ ಸರ್ಫರಾಜ್‌ಗೆ ಪ್ರತಿಯೊಂದು ಪಂದ್ಯವೂ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಆದರೆ ಸರ್ಫರಾಜ್ ಮೊದಲ ಪಂದ್ಯದಲ್ಲಿ 9 ರನ್ ಗಳಿಸಿದ್ದು, ಬಾಂಗ್ಲಾ ಟೆಸ್ಟ್ ಸರಣಿ ತಂಡದಲ್ಲಿ ಸ್ಥಾನ ಪಡೆಯುತ್ತಾರೋ? ಇಲ್ಲವೋ? ಕಾದು ನೋಡಬೇಕಿದೆ.
ಯಶಸ್ವಿ ಜೈಸ್ವಾಲ್
ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಸ್ಥಾನ ಬಾಂಗ್ಲಾ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಆದರೆ ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಜೈಸ್ವಾಲ್ ಅವರಿಂದ ದೊಡ್ಡ ಸ್ಕೋರ್ ನಿರೀಕ್ಷಿಸಲಾಗಿತ್ತು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ ಕೇವಲ 30 ರನ್ ಗಳಿಸಿ ಔಟಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications