ICC T20I Ranking: ಜಿಂಬಾಬ್ವೆ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಕೆಲವು ಆಟಗಾರರ ಟಿ20 ರ್‍ಯಾಕಿಂಗ್ ಸುಧಾರಣೆ
ಜುಲೈ 11 ಬುಧವಾರ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಟಿ20ಯ ನೂತನ ರ್‍ಯಾಕಿಂಗ್ ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತ ತಂಡದ ಆಟಗಾರರ ರ್‍ಯಾಕಿಂಗ್ ಸುಧಾರಣೆ ಕಂಡಿದೆ.
ಟೀಮ್ ಇಂಡಿಯಾ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಅವರ ಶ್ರೇಯಾಂಕ ಸುಧಾರಿಸಿದೆ. ಜಿಂಬಾಬ್ವೆ ವಿರುದ್ಧದ ಎರಡನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಋತುರಾಜ್ ಗಾಯಕ್ವಾಡ್ ಐಸಿಸಿ ನೂತನ ಟಿ20 ಶ್ರೇಯಾಂಕದಲ್ಲಿ ಅಗ್ರ 10ರೊಳಗೆ ಸೇರಿಕೊಂಡಿದ್ದಾರೆ. ಗಾಯಕ್ವಾಡ್ 13 ಸ್ಥಾನ ಮೇಲಕ್ಕೇರಿದ್ದಾರೆ.

ಹೊಸ ರ್‍ಯಾಕಿಂಗ್ ಪ್ರಕಾರ ಗಾಯಕ್ವಾಡ್ 20ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಏರಿದ್ದಾರೆ. ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಗಾಯಕ್ವಾಡ್ 47 ಎಸೆತಗಳಲ್ಲಿ 77 ರನ್ ಗಳಿಸಿದ್ದರು.
ಇದಲ್ಲದೆ, ರಿಂಕು ಸಿಂಗ್ ಮತ್ತು ಅಭಿಷೇಕ್ ಶರ್ಮಾ ಕೂಡ ರ್‍ಯಾಕಿಂಗ್‌ನಲ್ಲಿ ಭಾರೀ ಮುನ್ನಡೆ ಸಾಧಿಸಿದ್ದಾರೆ. ರಿಂಕು ಸಿಂಗ್ 4 ಸ್ಥಾನ ಮೇಲೇರಿ 39ನೇ ಸ್ಥಾನಕ್ಕೆ ತಲುಪಿದ್ದಾರೆ. ಎರಡನೇ ಪಂದ್ಯದಲ್ಲಿ ರಿಂಕು ಸಿಂಗ್ 22 ಎಸೆತಗಳಲ್ಲಿ 48 ರನ್ ಗಳಿಸಿದ್ದರು.
ಮತ್ತೊಂದೆಡೆ ಭಾರತದ ಪರ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಅಭಿಷೇಕ್ ಎರಡನೇ ಪಂದ್ಯದಲ್ಲಿ ಕೇವಲ 47 ಎಸೆತಗಳಲ್ಲಿ ಅದ್ಭುತ 100 ರನ್ ಗಳಿಸುವ ಮೂಲಕ ಟಿ20 ರ್‍ಯಾಕಿಂಗ್‌ನಲ್ಲಿ 75ನೇ ಸ್ಥಾನಕ್ಕೆ ಬಂದಿದ್ದಾರೆ.
ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರ ಬೌಲಿಂಗ್ ರ‍್ಯಾಂಕಿಂಗ್ ಕೂಡ ಸುಧಾರಿಸಿದೆ. ಬಿಷ್ಣೋಯ್ ಎಂಟು ಸ್ಥಾನ ಮೇಲೇರಿ 14ನೇ ಸ್ಥಾನಕ್ಕೆ ತಲುಪಿದ್ದಾರೆ. ಜಿಂಬಾಬ್ವೆ ವಿರುದ್ಧ ಮೊದಲೆರಡು ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ.
ಭಾರತ vs ಜಿಂಬಾಬ್ವೆ ಟಿ20 ಸರಣಿ
ಭಾರತ ಮತ್ತು ಜಿಂಬಾಬ್ವೆ ನಡುವೆ 5 ಟಿ20 ಪಂದ್ಯಗಳ ಸರಣಿ ನಡೆಯುತ್ತಿದೆ. ಶುಭಮನ್ ಗಿಲ್ ನಾಯಕನಾಗಿ ಮುನ್ನೆಡೆಸುತ್ತಿರುವ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಸೋಲು ಕಂಡಿತ್ತು.
ನಂತರ ಎರಡನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರ ಶತಕದ ನೆರವನಿಂದ ಜಿಂಬಾಬ್ವೆ ತಂಡವನ್ನು ಟೀಮ್ ಇಂಡಿಯಾ ಸೋಲಿಸಿತ್ತು. ಉಭಯ ತಂಡಗಳ ತಲಾ ಒಂದೊಂದು ಪಂದ್ಯವನ್ನುಗೆದ್ದಿರುವುದರಿಂದ ಸರಣಿ ಸದ್ಯಕ್ಕೆ ಸಮಬಲದಲ್ಲಿದೆ.
ಹಾರ್ದಿಕ್ ಪಾಂಡ್ಯ ರ್‍ಯಾಕಿಂಗ್ ಇಳಿಕೆ
ಟಿ20 ಆಲ್‌ರೌಂಡರ್ ಶ್ರೇಯಾಂಕದಲ್ಲಿ ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅಗ್ರಸ್ಥಾನದಿಂದ ಕುಸಿದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಶ್ರೀಲಂಕಾ ಸ್ಟಾರ್ ವನಿಂದು ಹಸರಂಗಾ ಮತ್ತೆ ಅಗ್ರಸ್ಥಾನಕ್ಕೆ ಏರಿದ್ದಾರೆ. ಟಿ20 ವಿಶ್ವಕಪ್ ಗೆಲುವಿನ ನಂತರ ಹಾರ್ದಿಕ್ ಪಾಂಡ್ಯ ಕಳೆದ ವಾರ ಆಲ್‌ರೌಂಡರ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೆ ಏರಿದ್ದರು.
ಮತ್ತೊಂದೆಡೆ ವಾಷಿಂಗ್ಟನ್ ಸುಂದರ್ ಕೂಡ ಗಮನಾರ್ಹ ಪ್ರಗತಿ ಸಾಧಿಸಿ ಅಗ್ರ 50ರೊಳಗೆ ಪ್ರವೇಶಿಸಿದ್ದಾರೆ. ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತದ ಗೆಲುವಿಗೆ ಹೋರಾಡಿ 27 ರನ್ ಬಾರಿಸಿದ್ದು, ಎರಡು ಪಂದ್ಯಗಳಲ್ಲಿ 3 ವಿಕೆಟ್‌ಗಳನ್ನು ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications