Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೋಚ್‌ ಗೌತಮ್‌ ಗಂಭೀರ್‌ ಮನೆಯಲ್ಲಿ ಪಾರ್ಟಿ: ಎಲ್ಲರ ಚಿತ್ತ ಕದ್ದ ಆ ಪ್ಲೇಯರ್

ಭಾರತ ಹಾಗೂ ಆರಂಭವಾಗಲಿದೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಆಟಗಾರರು ದೆಹಲಿಗೆ ತಲುಪಿದ್ದಾರೆ.ಇದೇ ವೇಳೆ ಆಟಗಾರರುಗೂ ವೆಸ್ಟ್‌ ಇಂಡೀಸ್ ನಡುವಣ ಎರಡನೇ ಟೆಸ್ಟ್‌ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರದಿಂ ಅಭ್ಯಾಸವನ್ನು ನಡೆಸಿ ರಾತ್ರಿ ಪಾರ್ಟಿ ಮೂಡ್‌ನಲ್ಲಿದ್ದರು. ಈ ವೇಳೆ ಆಟಗಾರರು ಟೀಮ್ ಬಸ್‌ನಿಂದ ತಂಡದ ಕೋಚ್‌ ಗೌತಮ್ ಗಂಭೀರ್ ಅವರ ಮನೆಗೆ ಬಂದರು. ಈ ವೇಳೆ ಹಲವು ಆಟಗಾರರು ಸಿಂಪಲ್ ಆಗಿ ಕಾಣಿಸಿಕೊಂಡರೆ, ಇನ್ನು ಕೆಲವರು ಗ್ರೌಂಡ್‌ ಲುಕ್‌ನಲ್ಲಿ ಕಾಣಿಸಿಕೊಂಡರು.

ಹಳೆಯ ರಾಜೀಂದ್ರ ನಗರನಲ್ಲಿ ಗೌತಮ್ ಗಂಭೀರ್ ಅವರ ದೊಡ್ಡ ಬಂಗಲೆ ಇದೆ. ಈ ಮನೆಗೆ ಸೋಮವಾರ ರಾತ್ರಿ ಟೀಮ್ ಇಂಡಿಯಾ ಆಟಗಾರರು ಬಂದರು. ಈ ವೇಳೆ ಟೀಮ್ ಇಂಡಿಯಾದ ಆಟಗಾರರಾದ ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣಾ, ಜಸ್ಪ್ರೀತ್ ಬುಮ್ರಾ, ಸಿಂಪಲ್ ಆಗಿ ವೈಟ್‌ ಟಿ-ಶರ್ಟ್‌ನಲ್ಲಿ ಕಾಣಿಸಿಕೊಂಡರೆ, ನಾಯಕ ಶುಭಮನ್ ಗಿಲ್ ಮಾತ್ರ ಭಿನ್ನವಾಗಿ ಕಾಣಿಸಿಕೊಂಡರು. ಈ ವೇಳೆ ಇವರು ಬ್ಲ್ಯಾಕ್‌ ಶರ್ಟ್‌ ಹಾಕಿಕೊಂಡಿದ್ದರು. ಅಲ್ಲದೆ ಇವರು ರಾತ್ರಿಯ ಸಮಯದಲ್ಲೂ ಕೂಲಿಂಗ್ ಗ್ಲಾಸ್ ಧರಿಸಿದ್ದರು.

Team India players party at Coach Gambhir s Delhi residence ahead of 2nd Test

ಟೀಮ್ ಇಂಡಿಯಾ ಆಟಗಾರರಲ್ಲದೆ ಇನ್ನೊಬ್ಬ ಆಟಗಾರರ ಗಂಭೀರ್ ಅವರ ಮನೆಗೆ ಬಂದರು. ಆಗ ಎಲ್ಲರ ಕಣ್ಣುಗಳ ಅವರ ಕಾರ್ ಮೇಲೆ ಬಿದ್ದಿತು. ಹರ್ಷಿತ್ ರಾಣಾ ತಮ್ಮ ಬಿಎಂಡಬ್ಲ್ಯೂ ಕಾರ್‌ನಲ್ಲಿ ಗೌತಮ್ ಮನೆಗೆ ಬಂದರು. ಅಂದಹಾಗೆ ರಾಣಾ, ವೆಸ್ಟ್‌ ಇಂಡೀಸ್ ಹಾಗೂ ಭಾರತದ ನಡುವಣ ಟೆಸ್ಟ್‌ ಪಂದ್ಯದ ವೇಳೆ ತಂಡದ ಜೊತೆಗೆ ಇಲ್ಲ. ಪ್ರೋಟೊಕಾಲ್‌ ಪ್ರಕಾರ ಇವರು ತಂಡದ ಜೊತೆ ಹೊಟೇಲ್‌ನಲ್ಲಿ ಉಳಿಯುವಂತಿಲ್ಲ. ಅಲ್ಲದೆ ತಂಡದ ಬಸ್‌ನಲ್ಲಿ ಬರುವಂತಿಲ್ಲ. ಹೀಗಾಗಿ ಇವರು ತಮ್ಮ ಸ್ವಂತ ಕಾರಿನಲ್ಲಿ ಬಂದರು. ಇಷ್ಟಾಗ್ಯೂ ಅವರು ಈ ಭೋಜನ ಕೂಟಕ್ಕೆ ಬಂದಿರುವುದು ಇವರ ಹಾಗೂ ಗೌತಮ್ ಗಂಭೀರ್ ಅವರ ಸಂಬಂಧವನ್ನು ಸೂಚಿಸುತ್ತದೆ.

ಸಖತ್ ವೈರಲ್

ತಂಡದ ಎಲ್ಲಾ ಸದಸ್ಯರು ಔತಣಕೂಟವನ್ನು ಸಂಪೂರ್ಣವಾಗಿ ಆನಂದಿಸಿದರು. ಈ ಭೇಟಿಯ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಗೌತಮ್ ಗಂಭೀರ್ ಅವರೊಂದಿಗೆ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಮತ್ತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಇದ್ದರು.

ಭಾರತ ಹಾಗೂ ವೆಸ್ಟ್‌ ಇಂಡೀಸ್ ನಡುವಣ ಎರಡನೇ ಟೆಸ್ಟ್‌ ಪಂದ್ಯ ನವದೆಹಲಿಯಲ್ಲಿ ಶುಕ್ರವಾರದಿಂದ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಸರಣಿ ವಶಕ್ಕೆ ಪಡೆಯುವ ಪ್ಲ್ಯಾನ್ ಟೀಮ್ ಇಂಡಿಯಾ ಆಟಗಾರರದ್ದಾಗಿದೆ. ಇನ್ನು ಟೀಮ್ ಇಂಡಿಯಾ ಈ ಅಂಗಳದಲ್ಲಿ ಕೊನೆಯ ಬಾರಿಗೆ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಆಡಿತ್ತು. ಇನ್ನು ಟೀಮ್ ಇಂಡಿಯಾ ಈ ಅಂಗಳದಲ್ಲಿ 1987 ರಿಂದ ಒಂದೇ ಒಂದು ಪಂದ್ಯವನ್ನು ಸೋತಿಲ್ಲ ಎಂಬುದೇ ವಿಶೇಷ.

Story first published: Thursday, October 9, 2025, 13:29 [IST]
Other articles published on Oct 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+