Morne Morkel: ಟೆಸ್ಟ್ ಕದನಕ್ಕೆ ಮೋರ್ನೆ ಮೊರ್ಕೆಲ್ ನೇತೃತ್ವದಲ್ಲಿ ಭಾರತ ಸಜ್ಜು
ಒಂದು ತಿಂಗಳ ವಿರಾಮದ ನಂತರ ಭಾರತ ತಂಡವು ಮುಂಬರುವ ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಗಾಗಿ ಅಭ್ಯಾಸವನ್ನು ಪ್ರಾರಂಭಿಸಿದೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಚೆನ್ನೈನಲ್ಲಿ0 ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ.
ಇಂದು (ಶುಕ್ರವಾರ) ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸೇರಿದಂತೆ ಇಡೀ ತಂಡ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಅಭ್ಯಾಸದಲ್ಲಿ ನಿರತವಾಗಿದ್ದು, ನೂತನ ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಕೂಡ ಉಪಸ್ಥಿತರಿದ್ದರು. ಹೊಸ ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್ ಟೀಮ್ ಇಂಡಿಯಾಗೆ ಸೇರ್ಪಡೆಯಾಗಿರುವುದು ಮತ್ತಷ್ಟು ಬಲ ಬಂದಂತಾಗಿದೆ.

ಟೆಸ್ಟ್ ಕದನಕ್ಕೆ ಸಜ್ಜು
ಬಿಸಿಸಿಐ ಮೊದಲ ದಿನದ ಅಭ್ಯಾಸದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಅದ್ಭುತ ದೇಶೀಯ ಋತುವಿಗಾಗಿ ಟೀಮ್ ಇಂಡಿಯಾ ತಯಾರಿ ಆರಂಭಿಸಿದ್ದು, ಗೌತಮ್ ಗಂಭೀರ್, ಸಹಾಯಕ ಸಿಬ್ಬಂದಿ ಮತ್ತು ನಾಯಕ ರೋಹಿತ್ ಶರ್ಮಾ ಅವರ ಮಾತುಗಳನ್ನು ಇಡೀ ತಂಡ ಎಚ್ಚರಿಕೆಯಿಂದ ಆಲಿಸುತ್ತಿದೆ ಎಂದು ಫೋಟೋಗಳು ಹೇಳುತ್ತಿವೆ.
ಭಾರತ ತಂಡದ ನೂತನ ಬೌಲಿಂಗ್ ಕೋಚ್ ಆಗಿರುವ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮೊರ್ನೆ ಮೊರ್ಕೆಲ್ ಟೀಮ್ ಇಂಡಿಯಾದಲ್ಲಿ ಹೊಸ ಹುರಪು ತರಲು ಸಿದ್ಧರಾಗಿದ್ದಾರೆ. ಅವರು ದಕ್ಷಿಣ ಆಫ್ರಿಕಾ ಪರ ಆಡುವಾಗ ತಮ್ಮ ಎತ್ತರ ಮತ್ತು ವೇಗದ ಬೌಲಿಂಗ್‌ನಿಂದ ಬ್ಯಾಟರ್‌ಗಳಿಗೆ ಸಾಕಷ್ಟು ಕಾಡಿದ್ದರು. ಕ್ರಿಕೆಟಿಗರಾಗಿ ನಿವೃತ್ತರಾದ ಬಳಿಕವೂ ಅವರು ಕೋಚಿಂಗ್‌ನಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ.
ಮೋರ್ನೆ ಮೊರ್ಕೆಲ್ ಅವರ ತರಬೇತಿಯಲ್ಲಿ ವೇಗದ ಬೌಲರ್‌ಗಳು ಕೇವಲ 'ಬೌಲಿಂಗ್'ಗಿಂತ ಹೆಚ್ಚಿನದನ್ನು ಕಲಿಯಬೇಕಾಗಿದೆ. ಟೀಮ್ ಇಂಡಿಯಾ ಸೇರುವ ಮುನ್ನ ಪಾಕಿಸ್ತಾನದ ಬೌಲಿಂಗ್ ಕೋಚ್ ಆಗಿದ್ದಾಗ, ಅವರ ಮಾರ್ಗದರ್ಶನವು ನಸೀಮ್ ಶಾ ಮೇಲೆ ಆಳವಾದ ಪ್ರಭಾವ ಬೀರಿತ್ತು. ಈಗ ಇದೇ ತಂತ್ರವನ್ನು ಟೀಮ್ ಇಂಡಿಯಾ ಬೌಲರ್‌ಗಳು ಮೋರ್ನೆ ಮೊರ್ಕೆಲ್ ಅವರಿಂದ ಅರಿತು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಪ್ರಾಬಲ್ಯ ಸಾಧಿಸುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications