ಮೂರನೇ ಟೆಸ್ಟ್‌ಗೂ ಮುನ್ನ ಭಾರತದ ಕ್ಯಾಂಪ್‌ನಲ್ಲಿ ಕಾಣಿಸಿಕೊಂಡ ಸ್ವಿಂಗ್ ಬೌಲರ್
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಮೂರನೇ ಟೆಸ್ಟ್ ಗುರುವಾರದಿಂದ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಲು ಯೋಜನೆಯನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ಇದೇ ವೇಳೆ ಸರಣಿಯಲ್ಲಿ ಮುನ್ನಡೆ ಸಾಧಿಸಲು ಎರಡೂ ತಂಡಗಳು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿವೆ. ಆದರೆ ಗಿಲ್ ಪಡೆ ಹೆಣೆದಿರುವ ಈ ತಂತ್ರ ನಿಜಕ್ಕೂ ಟೆಸ್ಟ್ ಪಂದ್ಯ ಗೆಲ್ಲಲು ಸಹಾಯ ಮಾಡಬಹುದು. ಹಾಗಿದ್ದರೆ ಟೀಮ್ ಇಂಡಿಯಾದ ಆ ಯೋಜನೆ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಆಂಡರ್ಸನ್, ತೆಂಡೂಲ್ಕರ್ ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳು ಮುಗಿದಿವೆ. ಲೀಡ್ಸ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್ ಸೋಲು ಕಂಡ ಬಳಿಕ, ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲವು ದಾಖಲಿಸಿದೆ. ಈಗ ಸರಣಿಯಲ್ಲಿ ಮುನ್ನಡೆ ಸಾಧಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಇದರಂತೆ ಇಂಗ್ಲೆಂಡ್ ತಂಡದ ಆ ಒಂದು ಅಸ್ತ್ರಕ್ಕೆ ಪ್ರತಿಯಾಗಿ ನೆಟ್ಸ್‌ನಲ್ಲಿ ಪ್ರತಿ ಅಸ್ತ್ರವನ್ನು ಹೆಣೆದುಕೊಂಡಿದೆ.

ಟೀಮ್ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ದೀಪಕ್ ಚಹಾರ್ ನೆಟ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದಲ್ಲಿ ಸ್ಥಾನವನ್ನು ಪಡೆಯದೇ ಇದ್ದರೂ ಸಹ ನೆಟ್ಸ್‌ನಲ್ಲಿ ಕಾಣಿಸಿಕೊಂಡಿದ್ದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ.
ದೀಪಕ್ ಚಾಹರ್ ತಮ್ಮ ಸ್ವಿಂಗ್ ಬೌಲಿಂಗ್‌ಗೆ ಭಾರೀ ಫೇಮಸ್. ಕ್ರಿಕೆಟ್ ಕಾಶಿ ಎಂದೇ ಕರಿಸಿಕೊಳ್ಳುವ ಲಾರ್ಡ್ಸ್ ಅಂಗಳ ಸ್ವಿಂಗ್ ಬೌಲರ್‌ಗಳಿಗೆ ಸಹಾಯ ಮಾಡಲಿದೆ. ಅಲ್ಲದೆ ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಸಹ ಈ ಪಿಚ್ ಮೇಲೆ ಹುಲ್ಲು ಇರಬೇಕು, ಬೌನ್ಸ್ ಹಾಗೂ ಸ್ವಿಂಗ್ ಇರಬೇಕು ಎಂದು ತಿಳಿಸಿದ್ದಾರೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಟೀಮ್ ಇಂಡಿಯಾ ದೀಪಕ್ ಚಾಹರ್ ಅವರನ್ನು ನೆಟ್ಸ್‌ನಲ್ಲಿ ಬಳಸಿಕೊಂಡಿದೆ. ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆಯದ ದೀಪಕ್ ನೆಟ್ಸ್ ಸೇರಿಕೊಂಡಿದ್ದು ಹೇಗೆ ಎಂಬ ಪ್ರಶ್ನೆಗಳು ಸಹ ಸಹಜವಾಗಿ ಎಲ್ಲರ ಮನದಲ್ಲಿ ಮೂಡುತ್ತವೆ.
ಇಂಗ್ಲೆಂಡ್‌ಗೆ ಹೋಗಿದ್ದು ಏಕೆ?
ದೀಪಕ್ ಚಾಹರ್ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಭಾಗವಹಿಸಲು ಬಂದಿದ್ದರು. ಈ ಪ್ರತಿಷ್ಠಿತ ಟೂರ್ನಿಯನ್ನು ನೋಡಲು ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಸಹ ಹೋಗೊದ್ದರು. ಅಷ್ಟೇ ಅಲ್ಲ ಟೀಮ್ ಇಂಡಿಯಾದ ಆಟಗಾರರು ಸಹ ತಮ್ಮ ಬಿಡುವಿನ ಸಮಯದಲ್ಲಿ ಈ ಪಂದ್ಯದ ಮಜೆಯನ್ನು ಸವಿದಿದ್ದಾರೆ. ದೀಪಕ್ ಚಾಹರ್ ಸಹ ಈ ಟೂರ್ನಿಯನ್ನು ಕಣ್ಣು ತುಂಬಿಕೊಳ್ಳಲು ತಮ್ಮ ಪತ್ನಿಯೊಂದಿಗೆ ಇಂಗ್ಲೆಂಡ್‌ಗೆ ಹೋಗಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾ ಇವರು ಇಂಗ್ಲೆಂಡ್ ಹೋಗಿದನ್ನು ತಿಳಿದು ಇವರ ಲಾಭ ಪಡೆಯಲು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಟೀಮ್ ಇಂಡಿಯಾದ ಮಾರಕ ಬೌಲರ್ ಜಸ್ಪ್ರಿತ್ ಬುಮ್ರಾ ಮೂರನೇ ಟೆಸ್ಟ್‌ನಲ್ಲಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications