Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೂರು ಮಾದರಿಗೆ ಟೀಮ್ ಇಂಡಿಯಾದ ಹೊಸ ಜರ್ಸಿ ಅನಾವರಣ

ಕ್ರಿಕೆಟ್‌ನ ಮೂರು ಮಾದರಿಗೆ ಟೀಮ್ ಇಂಡಿಯಾದ ನೂತನ ಜರ್ಸಿ ಅನಾವರಣವಾಗಿದೆ. ಇಂಡಿಯನ್ ಕ್ರಿಕೆಟ್ ಟೀಮ್‌ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಬಿಡುಗಡೆಗೊಳಿಸಲಾಗಿದ್ದು ಟೆಸ್ಟ್ ಏಕದಿನ ಹಾಗೂ ಟಿ20 ಮಾದರಿಗೆ ನೂತನ ಮಾದರಿಯ ಜರ್ಸಿಯನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದ ಹಿನ್ನಲೆಯಲ್ಲಿ ವಿಎಫ್‌ಎಕ್ಸ್ ಜನರೇಟೆಡ್ ವಿಡಿಯೋದ ಮೂಲಕ ಅನಾವರಣ ಮಾಡಲಾಗಿದೆ.

ಭಾರತ ಈ ನೂತನ ಜರ್ಸಿಯೊಂದಿಗೆ ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು ಜೂನ್ 7ರಂದು ಓವಲ್ ಕ್ರೀಡಾಂಗಣದಲ್ಲಿ ಈ ಮಹತ್ವದ ಪಂದ್ಯ ಆಯೋಜನೆಯಾಗಲಿದೆ.

Team Indias new jersey all 3 formats unveiled ahead of WTC Final match against Australia
Photo Credit: twitter

ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಈಗಾಗಲೇ ಈ ಮಹತ್ವದ ಪಂದ್ಯಕ್ಕಾಗಿ ಇಂಗ್ಲೆಂಡ್‌ಗೆ ಪ್ರಯಾಣಿಸಿದ್ದು ಸಿದ್ಧತೆಯನ್ನು ನಡೆಸುತ್ತಿದೆ. ಟೀಮ್ ಇಂಡಿಯಾದ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ ಸವಾಲೊಡ್ಡಿದ್ದು ಟೆಸ್ಟ್ ಮಾದರಿಯಲ್ಲಿ ಯಾವ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇನ್ನು ಟೀಮ್ ಇಂಡಿಯಾ ಇತ್ತೀಚೆಗೆ ನೂತನ ಟ್ರೈನಿಂಗ್ ಜರ್ಸಿಯೊಂದಿಗೆ ಅಭ್ಯಾಸವನ್ನು ನಡೆಸಿತ್ತು. ಬಹುತೇಕ ಭಾರತೀಯ ಆಟಗಾರರು ನೂತನ ಜರ್ಸಿಯಲ್ಲಿ ಫೋಸ್ ನೀಡಿದ್ದರು. ಇದೀಗ ಸಾಕಷ್ಟು ಕುತೂಹಲ ಮೂಡಿಸಿದ್ದ ನೂತನ ಜರ್ಸಿ ಕೂಡ ಬಿಡುಗಡೆಯಾಗಿದೆ. ಅಡಿಡಾಸ್ ಸಂಸ್ಥೆ ಟೀಮ್ ಇಂಡಿಯಾದ ನೂತನ ಜರ್ಸಿ ಸ್ಪಾನ್ಸರ್ ಆಗಿ ಒಪ್ಪಂದ ಮಾಡಿಕೊಂಡಿದ್ದು ಹೀಗಾಗಿ ಹೊಸ ಮಾದರಿಯ ಜರ್ಸಿ ಸಿದ್ಧಗೊಳಿಸಲಾಗಿದೆ.

WTCಯಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ರವಿಚಂದ್ರನ್ ಅಶ್ವಿನ್, ಕೆಎಸ್ ಭರತ್, ಶುಬ್ಮನ್ ಗಿಲ್, ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಚೇತೇಶ್ವರ ಪೂಜಾರ, ಅಕ್ಷರ್ ಪಟೇಲ್, ಅಜಿಂಕ್ಯ ರಹಾನೆ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಜಯದೇವ್ ಉನದಕ್ತ್, ಉಮೇಶ್ ಯಾದವ್
ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್

Story first published: Thursday, June 1, 2023, 19:59 [IST]
Other articles published on Jun 1, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+