ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಏಕದಿನ ನಾಯಕತ್ವದ ಭವಿಷ್ಯ ಈ ವಾರವೇ ನಿರ್ಧಾರ; ಈ ಇಬ್ಬರು ಕೊಹ್ಲಿ ಬೇಡ ಎಂದರೆ ಹೊಸ ನಾಯಕ ಫಿಕ್ಸ್!

Team Indias new ODI captain selection to be decided this week says report

ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಇತ್ತೀಚೆಗಷ್ಟೇ ಯುಎಇಯಲ್ಲಿ ಮುಕ್ತಾಯಗೊಂಡ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿದ್ದಾರೆ. ಹೌದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವ ಮುನ್ನವೇ ಪ್ರಕಟಣೆಯೊಂದನ್ನು ಹೊರಡಿಸಿದ್ದ ವಿರಾಟ್ ಕೊಹ್ಲಿ ಟೂರ್ನಿ ಮುಗಿದ ಬಳಿಕ ತಾನು ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯಲಿದ್ದು ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕನಾಗಿ ಮುಂದುವರಿಯಲಿದ್ದೇನೆ ಎಂಬ ಹೇಳಿಕೆಯನ್ನು ನೀಡಿದ್ದರು. ಟೀಮ್ ಇಂಡಿಯಾವನ್ನು ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿಯೂ ಮುನ್ನಡೆಸುತ್ತಿರುವುದರಿಂದ ಒತ್ತಡ ಹೆಚ್ಚಾಗುತ್ತಿದೆ ಮತ್ತು ತನ್ನ ವೈಯಕ್ತಿಕ ಬ್ಯಾಟಿಂಗ್ ಕುರಿತಾಗಿ ಹೆಚ್ಚಿನ ಗಮನ ಹರಿಸಲಾಗುತ್ತಿಲ್ಲ ಎಂಬ ಕಾರಣದಿಂದಾಗಿ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿ ಇನ್ನುಳಿದ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕನಾಗಿ ಮುಂದುವರಿಯಲು ನಿರ್ಧರಿಸಿದ್ದರು.

ದೊಡ್ಡ ಮೊತ್ತ ಪಡೆಯುತ್ತಿದ್ದ ಧೋನಿಗೆ ಈ ಸಲ ಕಡಿಮೆ ಮೊತ್ತ ಸಿಕ್ಕಿದ್ದಕ್ಕೆ ಕಾರಣ ಆ ಒಬ್ಬ ಆಟಗಾರ!ದೊಡ್ಡ ಮೊತ್ತ ಪಡೆಯುತ್ತಿದ್ದ ಧೋನಿಗೆ ಈ ಸಲ ಕಡಿಮೆ ಮೊತ್ತ ಸಿಕ್ಕಿದ್ದಕ್ಕೆ ಕಾರಣ ಆ ಒಬ್ಬ ಆಟಗಾರ!

ಇನ್ನು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ನ್ಯೂಜಿಲೆಂಡ್ ತಂಡ 3 ಪಂದ್ಯಗಳ ಟಿ ಟ್ವೆಂಟಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಭಾರತ ಪ್ರವಾಸವನ್ನು ಕೈಗೊಂಡಿದೆ. ಹೀಗೆ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸುವ ಮೂಲಕ ವಿರಾಟ್ ಕೊಹ್ಲಿ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ವಹಿಸಿಕೊಂಡರು. ಇನ್ನು ಭಾರತ ಟಿ ಟ್ವೆಂಟಿ ತಂಡಕ್ಕೆ ನೂತನ ನಾಯಕನ ಆಯ್ಕೆಯಾದ ನಂತರ ಇದೀಗ ಭಾರತ ಏಕದಿನ ತಂಡಕ್ಕೂ ಕೂಡ ನೂತನ ನಾಯಕನ ಆಯ್ಕೆಯಾಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಐಪಿಎಲ್: ರಿಟೈನ್ ನಂತರ ಆರ್‌ಸಿಬಿ ಅಭಿಮಾನಿಗಳಿಗೆ ಸಿರಾಜ್ ಸಂದೇಶ, ಮ್ಯಾಕ್ಸ್‌ವೆಲ್ ಭರವಸೆಐಪಿಎಲ್: ರಿಟೈನ್ ನಂತರ ಆರ್‌ಸಿಬಿ ಅಭಿಮಾನಿಗಳಿಗೆ ಸಿರಾಜ್ ಸಂದೇಶ, ಮ್ಯಾಕ್ಸ್‌ವೆಲ್ ಭರವಸೆ

ಹೌದು, ವಿರಾಟ್ ಕೊಹ್ಲಿ ಭಾರತ ಏಕದಿನ ತಂಡದ ನಾಯಕತ್ವವನ್ನು ಕೂಡ ತ್ಯಜಿಸಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹೆಚ್ಚಾಗಿ ಹರಿದಾಡುತ್ತಿದೆ. ಸದ್ಯ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿ ಮುಗಿದ ಬಳಿಕ ಟೀಮ್ ಇಂಡಿಯಾ ಸೌತ್ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದೆ. ಬಿಸಿಸಿಐನ ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ದಕ್ಷಿಣ ಆಫ್ರಿಕಾ ಪ್ರವಾಸದ ಕುರಿತು ನಿರ್ಧಾರಗಳನ್ನು ಕೈಗೊಂಡ ಕೂಡಲೇ ಭಾರತ ಏಕದಿನ ತಂಡದ ನಾಯಕತ್ವದ ವಿಚಾರವೂ ಕೂಡ ತೀರ್ಮಾನವಾಗಲಿದೆಯಂತೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ನಾಯಕತ್ವದ ವಿಚಾರ ಯಾವಾಗ ನಡೆಯಲಿದೆ, ನೂತನ ನಾಯಕನ ಆಕೆಯ ನಿರ್ಧಾರವನ್ನು ತೆಗೆದುಕೊಳ್ಳುವವರು ಯಾರು ಮತ್ತು ಕೊಹ್ಲಿ ನಂತರ ಭಾರತ ಏಕದಿನ ತಂಡದ ನಾಯಕ ಯಾರಾಗಬಹುದು ಎಂಬುದರ ಕುರಿತ ವಿವರ ಈ ಕೆಳಕಂಡಂತಿದೆ..

ಸೌತ್ ಆಫ್ರಿಕಾ ಪ್ರವಾಸಕ್ಕೂ ಮುನ್ನ ನಡೆಯಲಿದೆ ನಾಯಕತ್ವದ ಚರ್ಚೆ

ಸೌತ್ ಆಫ್ರಿಕಾ ಪ್ರವಾಸಕ್ಕೂ ಮುನ್ನ ನಡೆಯಲಿದೆ ನಾಯಕತ್ವದ ಚರ್ಚೆ

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದೆ. ಆದರೆ ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಕೊರೋನಾವೈರಸ್ ಹೆಚ್ಚಳವಾಗುತ್ತಿರುವುದರಿಂದ ಟೀಮ್ ಇಂಡಿಯಾಕ್ಕೆ ಕೇಂದ್ರ ಸರ್ಕಾರದ ಅನುಮತಿ ಬೇಕಾಗಿದೆ. ಒಂದುವೇಳೆ ಸರ್ಕಾರ ದಕ್ಷಿಣ ಆಫ್ರಿಕಾದ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿದರೆ, ಚೇತನ್ ಶರ್ಮಾ ಮುಂದಾಳತ್ವದ ಆಯ್ಕೆ ಸಮಿತಿ ವಿರಾಟ್ ಕೊಹ್ಲಿ ಅವರನ್ನೇ ಭಾರತ ಏಕದಿನ ತಂಡದ ನಾಯಕನಾಗಿ ಮುಂದುವರೆಸಬೇಕೇ ಅಥವಾ ನೂತನ ನಾಯಕನ ಅಗತ್ಯವಿದೆಯಾ ಎಂಬುದರ ಕುರಿತು ಚರ್ಚೆ ನಡೆಸಲಿದೆ ಎನ್ನಲಾಗುತ್ತಿದೆ.

ಭಾರತ ಏಕದಿನ ನಾಯಕತ್ವ ಬದಲಾವಣೆ ವಿಚಾರ ಬಂದಿದ್ದೇಕೆ?

ಭಾರತ ಏಕದಿನ ನಾಯಕತ್ವ ಬದಲಾವಣೆ ವಿಚಾರ ಬಂದಿದ್ದೇಕೆ?

ಮೂಲಗಳು ತಿಳಿಸಿರುವ ಪ್ರಕಾರ ಬಿಸಿಸಿಐ ಏಕದಿನ ಮತ್ತು ಟಿ ಟ್ವೆಂಟಿ ಎರಡೂ ತಂಡಗಳಿಗೂ ಪ್ರತ್ಯೇಕ ನಾಯಕರನ್ನು ಮುಂದುವರಿಸಲು ಇಚ್ಛಿಸುತ್ತಿಲ್ಲವಂತೆ. ಹೀಗಾಗಿ ಭಾರತ ಏಕದಿನ ಮತ್ತು ಟಿ ಟ್ವೆಂಟಿ ಎರಡೂ ತಂಡಗಳಿಗೂ ಓರ್ವ ನಾಯಕನನ್ನೇ ನೇಮಿಸುವ ಉದ್ದೇಶವನ್ನು ಬಿಸಿಸಿಐ ಹೊಂದಿದೆ ಎನ್ನಲಾಗುತ್ತಿದೆ.

ಭಾರತ ಏಕದಿನ ನಾಯಕತ್ವ ಬದಲಾವಣೆಯನ್ನು ನಿರ್ಧರಿಸಲಿದ್ದಾರೆ ಈ ಇಬ್ಬರು

ಭಾರತ ಏಕದಿನ ನಾಯಕತ್ವ ಬದಲಾವಣೆಯನ್ನು ನಿರ್ಧರಿಸಲಿದ್ದಾರೆ ಈ ಇಬ್ಬರು

ಸದ್ಯ ಭಾರತ ಏಕದಿನ ತಂಡಕ್ಕೆ ನೂತನ ನಾಯಕನನ್ನು ಆಯ್ಕೆ ಮಾಡುವ ವಿಚಾರದ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಭಾರತ ಏಕದಿನ ತಂಡಕ್ಕೆ ನೂತನ ನಾಯಕನನ್ನು ಆಯ್ಕೆ ಮಾಡುವ ನಿರ್ಧಾರವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಕೈಗೊಳ್ಳಲಿದ್ದಾರೆ. ಈ ಇಬ್ಬರೂ ನಾಯಕನ ಬದಲಾವಣೆ ಸರಿಯಾದ ನಿರ್ಧಾರ ಎಂದು ಸಮ್ಮತಿ ಸೂಚಿಸಿದರೆ ಆದಷ್ಟು ಬೇಗ ವಿರಾಟ್ ಕೊಹ್ಲಿ ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಯಲಿದ್ದು ಹೊಸ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗುವುದು ಖಚಿತ.

ಕೆಲವೇ ದಿನಗಳಲ್ಲಿ Virat Kohli ಬಗ್ಗೆ BCCI ನಿಂದ ಶಾಕಿಂಗ್ ನ್ಯೂಸ್!! | Oneindia Kannada

Story first published: Thursday, December 2, 2021, 17:57 [IST]
Other articles published on Dec 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X