ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ ಡಿಸೆಂಬರ್ 17ರಿಂದ ಆರಂಭ

ನವದೆಹಲಿ: ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲಿರುವ ವಿರಾಟ್ ಕೊಹ್ಲಿ ಪಡೆ ಅಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿ, 3 ಪಂದ್ಯಗಳ ಏಕದಿನ ಸರಣಿ ಮತ್ತು 3 ಪಂದ್ಯಗಳ ಟಿ20ಐ ಯಲ್ಲಿ ಪಾಲ್ಗೊಳ್ಳಲಿದೆ. ಈ ಪ್ರವಾಸ ಸರಣಿಯ ಪಂದ್ಯಗಳು ಡಿಸೆಂಬರ್ 17ರಿಂದ ಆರಂಭವಾಗಲಿವೆ. ಟೆಸ್ಟ್ ಸರಣಿಯ ಮೂಲಕ ಪ್ರವಾಸ ಸರಣಿ ಆರಂಭವಾಗಲಿದ್ದು ಡಿಸೆಂಬರ್ 17ರಂದು ಅಡಿಲೇಡ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.
ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿಯ ಪ್ರಕಾರ ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗುವ ಭಾರತ-ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ ಡಿಸೆಂಬರ್ 17ರಂದು ಅಡಿಲೇಡ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸರಣಿಯು ಡೇ-ನೈಟ್ ಟೆಸ್ಟ್ ಪಂದ್ಯವನ್ನೂ ಒಳಗೊಂಡಿರಲಿದೆ.
ಟೆಸ್ಟ್ ಸರಣಿಯ ಕೊನೇ ಪಂದ್ಯ ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ಜನವರಿ 15ರಂದು ಆರಂಭವಾಗಲಿದೆ.

ಟೆಸ್ಟ್‌ಗೂ ಮುನ್ನ ಏಕದಿನ ಸರಣಿ
ವರದಿಯ ಪ್ರಕಾರ ಭಾರತ ತಂಡ ಟೆಸ್ಟ್ ಸರಣಿಗೂ ಮುನ್ನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಏಕದಿನ ಸರಣಿ ಕ್ರಮವಾಗಿ ನವೆಂಬರ್ 26, 28 ಮತ್ತು 30ರಂದು ನಡೆಯಲಿದೆ. ವೈಟ್ ಬಾಲ್ ಸರಣಿಗಳು ಮುಕ್ತಾಯದ ಬಳಿಕ ರೆಡ್‌ಬಾಲ್ ಕ್ರಿಕೆಟ್ ಆರಂಭವಾಗಲಿದೆ.

ಮೂರು ಪಂದ್ಯಗಳ ಟಿ20ಐ ಸೀರೀಸ್
ಏಕದಿನ ಸರಣಿ ಮುಕ್ತಾಯದ ಬಳಿಕ ಮೂರು ಪಂದ್ಯಗಳ ಟಿ20ಐ ಸರಣಿ ನಡೆಯಲಿದ್ದು, ಡಿಸೆಂಬರ್ 4, 6 ಮತ್ತು 8ರಂದು ನಡೆಯಲಿವೆ. ಆಸ್ಟ್ರೇಲಿಯಾ ಪ್ರವಾಸ ಸರಣಿಗಾಗಿ ಟೀಮ್ ಇಂಡಿಯಾ ದುಬೈನಿಂದ ಪ್ರಯಾಣ ಬೆಳೆಸಲಿದೆ. ಸದ್ಯ ಭಾರತೀಯರು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದಾರೆ.

25-27 ಮಂದಿಯ ಭಾರತ ತಂಡ
ಸೆಪ್ಟೆಂಬರ್ 19ರಂದು ಆರಂಭವಾಗಿರುವ 2020ನೇ ಐಪಿಎಲ್ ಆವೃತ್ತಿ ನವೆಂಬರ್ 19ರಂದು ಮುಕ್ತಾಯವಾಗಲಿದೆ. ಟೂರ್ನಿ ಬಳಿಕ 25-27 ಮಂದಿಯನ್ನೊಳಗೊಂಡ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಹೊರಡಲಿದೆ. ಆಸ್ಟ್ರೇಲಿಯಾದಲ್ಲಿ ಭಾರತ ತಂಡ 14 ದಿನಗಳ ಕ್ವಾರಂಟೈನ್ ಪಾಲಿಸುವುದನ್ನು ನಿರೀಕ್ಷಿಸಲಾಗಿದೆ.

ಪ್ರವಾಸ ಸರಣಿಯ ವೇಳಾಪಟ್ಟಿ ಬದಲು
ಆಸ್ಟ್ರೇಲಿಯಾಕ್ಕೆ ಭಾರತದ ಪ್ರವಾಸ ಸರಣಿಯ ವೇಳಾಪಟ್ಟಿ ಹಲವಾರು ಬಾರಿ ಬದಲಾವಣೆ ಕಂಡಿದೆ. ಹಿಂದಿನ ವೇಳಾಪಟ್ಟಿಯ ಪ್ರಕಾರ ಡಿಸೆಂಬರ್ 3ರಂದು ಟೆಸ್ಟ್ ಸರಣಿ ಆರಂಭವಾಗಬೇಕಿತ್ತು. ಅಲ್ಲದೆ ಐಪಿಎಲ್ ಮುಕ್ತಾಯಕ್ಕೂ ಮುನ್ನವೇ ಆಸ್ಟ್ರೇಲಿಯಾ ಪ್ರವಾಸ ಸರಣಿ ಆರಂಭವಾಗುತ್ತಿತ್ತು. ಆದರೆ ಈಗ ಪ್ರವಾಸ ಸರಣಿಯ ವೇಳಾಪಟ್ಟಿ ಸಂಪೂರ್ಣ ಬದಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications