ಭಾರತ vs ಇಂಗ್ಲೆಂಡ್: ಎರಡನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ

ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಏಕದಿನ ಸರಣಿಯ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಮೊದಲ ಪಂದ್ಯವನ್ನು ಭಾರತ ತನ್ನ ಸರ್ವಾಂಗೀಣ ಪ್ರದರ್ಶನದಿಂದಾಗಿ ಭರ್ಜರಿಯಾಗಿ ಗೆದ್ದುಕೊಂಡಿದೆ. ಹೀಗಾಗಿ ಎರಡನೇ ಪಂದ್ಯವನ್ನೂ ಗೆದ್ದು ಸರಣಿ ವಶಕ್ಕೆ ಪಡೆದುಕೊಳ್ಳುವ ಉತ್ಸಾಹದಲ್ಲಿದೆ.
ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಗಾಯದ ಸಮಸ್ಯೆಗೆ ಒಳಗಾಯಿತು. ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಐಯ್ಯರ್ ಗಾಯಗೊಂಡಿದ್ದರು. ಬ್ಯಾಟಿಂಗ್ ವೇಳೆ ಮೊಣಕೈಗೆ ಗಾಯ ಮಾಡಿಕೊಂಡಿದ್ದ ರೋಹಿತ್ ಶರ್ಮಾ ಎರಡನೇ ಏಕದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ. ಆದರೆ ಫಿಲ್ಡಿಂಗ್ ವೇಳೆ ಭುಜದ ನೋವಿಗೆ ಒಳಗಾಗಿರುವ ಶ್ರೇಯಸ್ ಐಯ್ಯರ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಶ್ರೇಯಸ್ ಮುಂಬರುವ ಐಪಿಎಲ್ ಟೂರ್ನಿಯಿಂದಲೂ ಸಂಪುರ್ಣವಾಗಿ ಅಲಭ್ಯರಾಗಲಿದ್ದಾರೆ ಎಂಬುದನ್ನು ಡೆಲ್ಲಿ ತಂಡದ ಸಹ ಮಾಲಕರೇ ಸ್ಪಷ್ಟಪಡಿಸಿದ್ದಾರೆ.
ಹಾಗಾದರೆ ಎರಡನೇ ಏಕದಿನ ಪಂದ್ಯಲ್ಲೆ ಭಾರತದ ಸಂಭಾವ್ಯ ತಂಡ ಹೇಗಿದೆ? ಯಾರಿಗೆ ಅವಕಾಶ ದೊರೆಯಲಿದೆ? ಮುಂದೆ ಓದಿ..

ಆರಂಭಿಕರಾಗಿ ರೋಹಿತ್- ಶಿಖರ್
ಏಕದಿನ ಮಾದರಿಯಲ್ಲಿ ಸುದೀರ್ಘ ಕಾಲದಿಂದ ಆರಂಭಿಕ ಜೋಡಿಯಾಗಿರುವ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿಯೂ ಮುಂದುವರಿಯುವುದರಲ್ಲಿ ಅನುಮಾನವಿಲ್ಲ. ಕಳೆದ ಪಂದ್ಯದಲ್ಲಿ ಶಿಖರ್ ಧವನ್ ಶತಕದ ಅಂಚಿಗೆ ಬಂದು ವಿಕೆಟ್ ಕಳೆದುಕೊಂಡಿದ್ದರು. ಮತ್ತೊಮ್ಮೆ ಮುಂಚುವ ಉತ್ಸಾಹದಲ್ಲಿದ್ದಾರೆ ಧವನ್. ಶರ್ಮಾ ಕಳೆದ ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ ರೋಹಿತ್ ಶರ್ಮಾ ತಂಡದಲ್ಲಿದ್ದರೆ ಎದುರಾಳಿಗೆ ಯಾವತ್ತಿಗೂ ಆತಂಕವಿದ್ದೇ ಇರುತ್ತದೆ.

ಮಧ್ಯಮ ಕ್ರಮಾಂಕ: ಕೊಹ್ಲಿ, ಸೂರ್ಯಕುಮಾರ್, ರಾಹುಲ್
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ. ಟಿ20 ಸರಣಿಯ ಪಾರ್ಮ್‌ಅನ್ನು ಕೊಹ್ಲಿ ಏಕದಿನ ಸರಣಿಯಲ್ಲೂ ಮುಂದುವರಿಸಿದ್ದು ಕಲೆದ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದರು. ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಶ್ರೇಯಸ್ ಐಯ್ಯರ್ ಗಾಯಗೊಂಡಿದ್ದಾರೆ. ಹಾಗಾಗಿ ಸೂರ್ಯಕುಮಾರ್ ಯಾದವ್ ಏಕದಿನ ಸರಣಿಗೂ ಆಡುವ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇನ್ನು ಟಿ20 ಸರಣಿಯಲ್ಲಿ ಕಳಪೆ ಫಾರ್ಮ್‌ನಲ್ಲಿದ್ದ ಕೆಎಲ್ ರಾಹುಲ್ ಕಳೆದ ಪಂದ್ಯದಲ್ಲಿ ಅರ್ಧ ಶತಕವನ್ನು ದಾಖಲಿಸಿ ಮತ್ತೆ ಫಾರ್ಮ್‌ಗೆ ಮರಳಿರುವುದನ್ನು ಘೋಷಿಸಿದ್ದಾರೆ.

ಆಲ್‌ರೌಂಡರ್‌ಗಳು: ಹಾರ್ದಿಕ್, ಕೃಣಾಲ್, ಶಾರ್ದೂಲ್
ಆಲ್‌ರೌಂಡರ್‌ಗಳಾಗಿದೆ ಹಾರ್ದಿಕ್ ಪಾಂಡ್ಯ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವಯುವುದು ಪಕ್ಕಾ. ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾ ಪರವಾಗಿ ಏಕದಿನ ಪಂದ್ಯದಲ್ಲಿ ಚೊಚ್ಚಲ ಬಾರಿಗೆ ಅವಕಾಶ ಪಡೆದುಕೊಂಡಿದ್ದ ಕೃಣಾಲ್ ಪಾಂಡ್ಯ ಅರ್ಧ ಶತಕ ಸಿಡಿಸಿದ್ದರು. ಜೊತೆಗೆ ಬೌಲಿಂಗ್‌ನಲ್ಲಿಯೂ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಶಾರ್ದೂಲ್ ಠಾಕೂರ್ ಕೂಡ ಭಾರತ ತಂಡದ ಪರವಾಗಿ ಬೌಲಿಂಗ್‌ನಲ್ಲಿ ಮಿಂಚಿ ಗೆಲುವಿಗೆ ಕಾರಣರಾಗಿದ್ದರು.

ಬೌಲರ್‌ಗಳು: ಭುವಿ, ಪ್ರಸಿದ್ಧ್ ಕೃಷ್ಣ, ಚಾಹಲ್
ಟಿ20 ಸರಣಿಯಂತೆಯೇ ಭುವನೇಶ್ವರ್ ಕುಮಾರ್ ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ತಮ್ಮ ಬೌಲಿಂಗ್ ದಾಳಿಯಲ್ಲಿ ಮಿಂಚಿದ್ದಾರೆ. ಅನುಭವಿ ವೇಗಿಯಾಗಿ ಟೀಮ್ ಇಂಡಿಯಾ ಬೌಲಿಂಗ್ ವಿಭಾಗದ ನೇತೃತ್ವ ಭುವಿ ಪಾಲಾಗಲಿದೆ. ಇನ್ನು ಕಳೆದ ಪಂದ್ಯದಲ್ಲಿ ಚೊಚ್ಚಲ ಬಾರಿಗೆ ಅವಕಾಶ ಗಿಟ್ಟಿಸಿ 4 ವಿಕೆಟ್ ಕಿತ್ತು ಸ್ಮರಣೀಯ ಪದಾರ್ಪಣೆ ಮಾಡಿದ್ದ ಕರ್ನಾಟಕದ ಪ್ರಸಿದ್ಧ್ ಕೃಷ್ಣ ಎರಡನೇ ಪಂದ್ಯದಲಲ್ಇಯೂ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ. ಇನ್ನು ಸ್ಪಿನ್ ಬೌಲಿಂಗ್‌ನಲ್ಲಿ ಚಾಹಲ್ ಅಚಕಾಶ ಪಡೆಯುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ಕುಲ್‌ದೀಪ್ ಯಾದವ್ ಅವಕಾಶ ಪಡೆದಿದ್ದರಾದರೂ ಪರಿಣಾಮಕಾರಿಯಾಗಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications