Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ಹಣಿಯಲು ಟೀಮ್ ಇಂಡಿಯಾ ಲಾಕ್‌ಡೌನ್‌ ರಣ ತಂತ್ರ: ಏನಿದು?

ಭಾರತ ಸದ್ಯ ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿದೆ. ತವರಿನಲ್ಲಿ ಅನುಭವಿಸಿದ ಸರಣಿ ಸೋಲಿನ ಕಹಿಯನ್ನು ಮರೆಯಲು ರೋಹಿತ್ ಶರ್ಮಾ ಪಡೆ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಬಾರ್ಡರ್‌ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ, ಆಸೀಸ್‌ ವಿರುದ್ಧ ಕಾದಾಟ ನಡೆಸಲಿದೆ. ಈ ಸರಣಿಯಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಡಲಾಗುತ್ತದೆ. ಈ ಸರಣಿಯನ್ನು ಗೆಲ್ಲಲೇ ಬೇಕು ಎಂಬ ಹಠವನ್ನು ಟೀಮ್ ಇಂಡಿಯಾ ತೊಟ್ಟಿದೆ. ಈ ಸರಣೀಗಾಗಿ ಟೀಮ್ ಇಂಡಿಯಾ ಸಿಕ್ರೇಟ್ ತಯಾರಿನ್ನು ಸಹ ನಡೆಸುತ್ತಿದೆ.

ಬಾರ್ಡರ್‌ ಗವಾಸ್ಕರ್‌ ಟೆಸ್ಟ್ ಸರಣಿ ನವೆಂಬರ್‌ 22 ರಂದು ಪರ್ತ್‌ನಲ್ಲಿ ಆರಂಭವಾಗಲಿದೆ. ಈ ಸರಣಿ ಟೀಮ್ ಇಂಡಿಯಾ ಪಾಲಿಗೆ ಮಹತ್ವದಾಗಿದೆ. ವಿಶ್ವ ಟೆಸ್ಟ್‌ ಚಾಂಪಿಯನ್ ಶಿಪ್‌ ಫೈನಲ್‌ ಪ್ರವೇಶಿಸುವ ದೃಷ್ಟಿಯಿಂದ ಈ ಸರಣಿ ಮಹತ್ವ ಪಡೆದಿದೆ. ಈ ಟೆಸ್ಟ್‌ ಸರಣಿಯಲ್ಲಿ ಟೀಮ್ ಇಂಡಿಯಾ 4 ಪಂದ್ಯಗಳಲ್ಲಿ ಗೆಲುವು ದಾಖಲಿಸುವ ಅನಿವಾರ್ಯತೆ ಇದೆ. ಹೀಗಾಗಿ ಟೀಮ್ ಇಂಡಿಯಾ ಕಠಿಣ ಅಭ್ಯಾಸವನ್ನು ನಡೆಸಿದೆ.

Team India s Secret Strategy to Win the Border-Gavaskar Series Against Australia

ಭಾರತ ತಂಡ ಈಗಾಗಲೇ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದೆ. ಈ ವೇಳೆ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ, ಪ್ಯಾಟ್‌ ಕಮಿನ್ಸ್‌ ಪಡೆಯ ಸದ್ದಡಗಿಸಲು ಸಿಕ್ರೇಟ್ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಹಾಗಿದ್ದರೆ ಟೀಮ್ ಇಂಡಿಯಾ ಮಾಡಿಕೊಳ್ಳುತ್ತಿರುವ ರಣ ತಂತ್ರವೇನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಟೀಮ್ ಇಂಡಿಯಾ ವೆಸ್ಟರ್ನ್‌ ಆಸ್ಟ್ರೇಲಿಯಾ ಕ್ರಿಕೆಟ್‌ ಸಂಸ್ಥೆಯ ಅಂಗಳದಲ್ಲಿ ಅಭ್ಯಾಸವನ್ನು ಆರಂಭಿಸಿದೆ. ಆದರೆ ಈ ಅಭ್ಯಾಸವನ್ನು ಕವರ್‌ ಮಾಡಲು ಯಾವುದೇ ಪತ್ರಕರ್ತರಿಗೆ ಅವಕಾಶ ಇಲ್ಲ. ಅಲ್ಲದೆ ಅಭಿಮಾನಿಗಳಿಗೂ ಸಹ ಬ್ಯಾನ್ ಮಾಡಲಾಗಿದೆ. ಅಲ್ಲದೆ ಸಹಾಯಕ ಸಿಬ್ಬಂದಿಗಳು ಸಹ ಪೋಟೋ ಹಾಗೂ ವಿಡಿಯೋವನ್ನು ತೆಗೆಯುವುದನ್ನು ನಿಷೇಧಿಸಲಾಗಿದೆ. ಟೀಮ್ ಇಂಡಿಯಾ ಸಿಕ್ರೆಟ್‌ ಅಭ್ಯಾಸವನ್ನು ಆರಂಭಿಸಿದೆ. ಟೀಮ್ ಇಂಡಿಯಾ ಈ ರೀತಿಯಾಗಿಯೇ ಟಿ20 ವಿಶ್ವಕಪ್‌ 2022ರಲ್ಲಿ ಮಾಡಿಕೊಂಡಿತ್ತು.

ಸಿಕ್ರೇಟ್ ಅಭ್ಯಾಸಕ್ಕೆ ಕಾರಣ ಏನು?

ಟೀಮ್ ಇಂಡಿಯಾ ಸಿಕ್ರೇಟ್ ಅಭ್ಯಾಸವನ್ನು ನಡೆಸುತ್ತಿದೆ. ಫೋಟೋ ಹಾಗೂ ವಿಡಿಯೋಗಳನ್ನು ನಿರ್ಬಂಧಿಸಿದೆ. ಇದಕ್ಕೆ ಕಾರಣ, ತಾವು ಮಾಡಿಕೊಳ್ಳುತ್ತಿರುವ ತಂತ್ರ ಬೇರೆಯವರಿಗೆ ತಿಳಿಯಬರಾದು ಎಂದಾಗಿದೆ. ಇನ್ನು ಟೀಮ್ ಇಂಡಿಯಾ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಗಳು ಆಗಿವೆ. ಅಂದಹಾಗೆ ಪರ್ತ್ ಟೆಸ್ಟ್‌ಗೂ ಮುನ್ನ ಟೀಮ್ ಇಂಡಿಯಾ ಅಭ್ಯಾಸ ಪಂದ್ಯವನ್ನು ಸಹ ಆಡಲಿದೆ. ಈ ವೇಳೆಯೂ ಮೈದಾನದ ಸಿಬ್ಬಂದಿಯನ್ನು ಹೊರತು ಪಡಿಸಿ ಬೇರೆಯವರಿಗೆ ನಿಷೇಧ ಹೇರಲಾಗಿದೆ. ಭಾರತ ತಂಡ ಸರಣಿಯ ಮೊದಲ ಪಂದ್ಯವನ್ನು ಪರ್ತ್‌ನಲ್ಲಿಯೇ ಆಡಬೇಕಿದೆ. ಗೆಲುವಿನೊಂದಿಗೆ ಸರಣಿ ಆರಂಭಿಸಲು ಟೀಂ ಇಂಡಿಯಾ ಪ್ಲ್ಯಾನ್ ಮಾಡಿಕೊಂಡಿದೆ. ಆದಾಗ್ಯೂ, ಆಸ್ಟ್ರೇಲಿಯಾದ ವೇಗದ ಬೌಲರ್‌ಗಳ ವಿರುದ್ಧ ಭಾರತೀಯ ಬ್ಯಾಟ್ಸ್‌ಮನ್‌ಗಳ ಸವಾಲಿನ ಮೇಲೆ ಸವಾಲು ಎದುರಿಸಲಿದ್ದಾರೆ.

Team India s Secret Strategy to Win the Border-Gavaskar Series Against Australia

ರೋಹಿತ್ ಶರ್ಮಾ ಮೊದಲ ಟೆಸ್ಟ್‌ನಲ್ಲಿ ಆಡುವುದು ಅನುಮಾನವಾಗಿದೆ. ಹೀಗಾಗಿ ಟೀಮ್ ಇಂಡಿಯಾವನ್ನು ಜಸ್ಪ್ರಿತ್ ಬುಮ್ರಾ ಮುನ್ನಡೆಸಲಿದ್ದಾರೆ.

Story first published: Wednesday, November 13, 2024, 18:41 [IST]
Other articles published on Nov 13, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+