ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದ ವೇಳಾಪಟ್ಟಿ ಪ್ರಕಟ
ಮುಂಬೈ, ಸೆಪ್ಟೆಂಬರ್ 5: ಮುಂದಿನ ವರ್ಷ ಭಾರತೀಯ ಕ್ರಿಕೆಟ್ ತಂಡವು ಕೈಗೊಳ್ಳಲಿರುವ ಇಂಗ್ಲೆಂಡ್ ಪ್ರವಾಸದ ವೇಳಾಪಟ್ಟಿಯನ್ನು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಬಿಡುಗಡೆ ಮಾಡಿದೆ.
ಮುಂದಿನ ವರ್ಷ ಜುಲೈನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿನ ಈ ಪ್ರವಾಸದ ವೇಳೆ, ಇಂಗ್ಲೆಂಡ್ ತಂಡದ ವಿರುದ್ಧ ಭಾರತ ತಂಡವು 5 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಲಿದೆ.

ಈ ಪ್ರವಾಸದ ವೇಳೆ, ಮೊದಲು ನಡೆಯುವುದು ಟಿ20 ಸರಣಿ. ಈ ಸರಣಿಯ ಮೊದಲ ಪಂದ್ಯ 2018ರ ಜುಲೈ 18ರಂದು ನಡೆಯಲಿದೆ. ಜುಲೈ 12ರಿಂದ ಏಕದಿನ ಸರಣಿಯು ಶುರುವಾಗಲಿದ್ದು, ಆಗಸ್ಟ್ 1ರಿಂದ ಟೆಸ್ಟ್ ಸರಣಿಯು ಆರಂಭವಾಗುತ್ತದೆ.
ಇಸಿಬಿಯು ಬಿಡುಗಡೆ ಮಾಡಿರುವ ಪ್ರವಾಸದ ವೇಳಾಪಟ್ಟಿಯು ಇಂತಿದೆ.
| ಟಿ20 ಸರಣಿ | ||
|---|---|---|
| ದಿನಾಂಕ | ಪಂದ್ಯ | ಸ್ಥಳ |
| ಜುಲೈ 3, ಮಂಗಳವಾರ | 1ನೇ ಟಿ20 | ಓಲ್ಡ್ ಟ್ರಾಫರ್ಡ್ |
| ಜುಲೈ 6, ಶುಕ್ರವಾರ | 2ನೇ ಟಿ20 | ಕಾರ್ಡಿಫ್ |
| ಜುಲೈ 8, ಭಾನುವಾರ | 3ನೇ ಟಿ20 | ಬ್ರಿಸ್ಟೋಲ್ |
| ಏಕದಿನ ಸರಣಿ | ||
|---|---|---|
| ದಿನಾಂಕ | ಪಂದ್ಯ | ಸ್ಥಳ |
| ಜುಲೈ 12, ಗುರುವಾರ | 1ನೇ ಏಕದಿನ | ಟ್ರೆಂಟ್ ಬ್ರಿಡ್ಜ್ |
| ಜುಲೈ 14, ಶನಿವಾರ | 2ನೇ ಏಕದಿನ | ಲಾರ್ಡ್ಸ್ |
| ಜುಲೈ 17, ಮಂಗಳವಾರ | 3ನೇ ಏಕದಿನ | ಎಮೆರಾಲ್ಡ್ ಹೆಡಿಂಗ್ಲೆ |
| ಟೆಸ್ಟ್ ಸರಣಿ | ||
|---|---|---|
| ದಿನಾಂಕ | ಪಂದ್ಯ | ಸ್ಥಳ |
| ಆಗಸ್ಟ್ 1ರಿಂದ 5 | ಮೊದಲ ಟೆಸ್ಟ್ | ಎಡ್ಗ್ ಬಾಸ್ಟನ್ |
| ಆಗಸ್ಟ್ 9ರಿಂದ 13 | ಎರಡನೇ ಟೆಸ್ಟ್ | ಲಾರ್ಡ್ಸ್ |
| ಆಗಸ್ಟ್ 18ರಿಂದ 22 | ಮೂರನೇ ಟೆಸ್ಟ್ | ಟ್ರೆಂಟ್ ಬ್ರಿಡ್ಜ್ |
| ಆಗಸ್ಟ್ 30ರಿಂದ ಸೆಪ್ಟೆಂಬರ್ 3 | ನಾಲ್ಕನೇ ಟೆಸ್ಟ್ | ಏಜೀಸ್ ಬೌಲ್ |
| ಸೆಪ್ಟೆಂಬರ್ 7ರಿಂದ 11 | ಐದನೇ ಟೆಸ್ಟ್ | ಕಿಯಾ ಓವಲ್ |
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications