2026ರಲ್ಲಿ ಭಾರತ ತಂಡಕ್ಕೆ ಸಾಲು ಸಾಲು ಸವಾಲು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ಭಾರತ ತಂಡ 2025ರಲ್ಲಿ ಸ್ಥಿರ ಪ್ರದರ್ಶನ ನೀಡಿತ್ತು. ಈ ವೇಳೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿತ್ತು. ಈ ವರ್ಷದಲ್ಲಿ ಟೀಮ್ ಇಂಡಿಯಾ ಸಾಲು ಸಾಲು ಸವಾಲುಗಳನ್ನು ಎದುರಿಸಲಿದೆ. ಈ ವೇಳೆ ಭಾರತ ತಂಡ ಟಿ20 ವಿಶ್ವಕಪ್ ಸೇರಿದಂತೆ ಹಲವು ದ್ವಿಪಕ್ಷೀಯ ಸರಣಿಗಳಲ್ಲಿ ಭಾಗವಹಿಸಲಿದೆ. 2026ರಲ್ಲಿ ಟೀಮ್ ಇಂಡಿಯಾ ಯಾವೆಲ್ಲಾ ಟೂರ್ನಿಗಳಲ್ಲಿ ಭಾಗವಹಿಸಲಿದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಭಾರತ ಈ ವರ್ಷದ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಈ ವೇಳೆ ಉಭಯ ತಂಡಗಳ ನಡುವೆ ಮೂರು ಏಕದಿನ ಪಂದ್ಯ ಹಾಗೂ ಐದು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಇದಾದ ಬಳಿಕ ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲಿದೆ. ಅಲ್ಲದೆ ಈ ವಿಶ್ವಕಪ್‌ನಲ್ಲಿ ಭಾರತ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಅಖಾಡ ಪ್ರವೇಶಿಸಲಿದೆ. ಈ ವೇಳೆ ಭಾರತ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಟಿ20 ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಇನ್ನೇನು ಭಾರತ ತಂಡವನ್ನು ಪ್ರಕಟಿಸಬೇಕಿದೆ.

ಭಾರತ ಹಾಗೂ ನ್ಯೂಜಿಲೆಂಡ್ ಏಕದಿನ ಸರಣಿ
ಜನವರಿ 11, ಮೊದಲ ಏಕದಿನ ಪಂದ್ಯ, ವಡೋಧರಾ
ಜನವರಿ 14, ಎರಡನೇ ಏಕದಿನ ಪಂದ್ಯ, ರಾಜ್‌ಕೋಟ್
ಜನವರಿ 18, ಮೂರನೇ ಏಕದಿನ ಪಂದ್ಯ, ಇಂದೋರ್
ಭಾರತ ಹಾಗೂ ನ್ಯೂಜಿಲೆಂಡ್ ಟಿ20 ಸರಣಿ
ಜನವರಿ 21, ಮೊದಲ ಪಂದ್ಯ, ನಾಗಪುರ
ಜನವರಿ 23, ಎರಡನೇ ಪಂದ್ಯ, ರಾಯ್‌ಪುರ
ಜನವರಿ 25, ಮೂರನೇ ಪಂದ್ಯ, ಗುವಾಹಟಿ
ಜನವರಿ 28, ನಾಲ್ಕನೇ ಪಂದ್ಯ, ವಿಶಾಖಪಟ್ಟಣಂ
ಜನವರಿ 31, ಐದನೇ ಪಂದ್ಯ, ತಿರುವನಂತಪುರಂ
ಫೆಭ್ರವರಿ 7 ರಿಂದ ಮಾರ್ಚ್ 8 ಟಿ20 ವಿಶ್ವಕಪ್‌ನಲ್ಲಿ ಭಾಗಿ
ಜೂನ್ 2026: ಭಾರತ ಪ್ರವಾಸ ಬೆಳೆಸಲಿರುವ ಅಫ್ಘಾನಿಸ್ತಾನ (3 ಏಕದಿನ, 1 ಟೆಸ್ಟ್)
ಜುಲೈ 2026: ಭಾರತ, ಇಂಗ್ಲೆಂಡ್ ಪ್ರವಾಸ ಬೆಳೆಸಲಿದ್ದು, ಈ ವೇಳೆ 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನು ಆಡಲಿದೆ. 2027ರಲ್ಲಿ ನಡೆಯಲಿರುವ ವಿಶ್ವಕಪ್ ದೃಷ್ಟಿಯಿಂದ ಈ ಪ್ರವಾಸ ಮಹತ್ವ ಪಡೆದಿದೆ. ಈ ಪ್ರವಾಸದಲ್ಲಿ ಮೊದಲು ಟಿ20 ಸರಣಿ ನಡೆಯಲಿದೆ.

ಇಂಗ್ಲೆಂಡ್ ವಿರುದ್ಧ ಟಿ20 ಸರಣಿ
ಜುಲೈ 1, ಮೊದಲ ಟಿ20, ಡರ್ಹ್ಯಾಮ್
ಜುಲೈ 4, ಎರಡನೇ ಟಿ20, ಮ್ಯಾಂಚೆಸ್ಟರ್
ಜುಲೈ 7, ಮೂರನೇ ಟಿ20, ನಾಟಿಂಗ್‌ಹ್ಯಾಮ್
ಜುಲೈ 9, ನಾಲ್ಕನೇ ಟಿ20, ಬ್ರಿಸ್ಟಲ್
ಜುಲೈ 11, ಐದನೇ ಟಿ20, ಸೌತಾಂಪ್ಟನ್
ಏಕದಿನ ಸರಣಿ ವೇಳಾಪಟ್ಟಿ
ಜುಲೈ 14, ಮೊದಲ ಏಕದಿನ, ಬರ್ಮಿಂಗ್‌ಹ್ಯಾಮ್
ಜುಲೈ 16, ಎರಡನೇ ಏಕದಿನ, ಕಾರ್ಡಿಫ್
ಜುಲೈ 19, ಮೂರನೇ ಏಕದಿನ, ಲಾರ್ಡ್ಸ್
ಆಗಸ್ಟ್ 2026: ಶ್ರೀಲಂಕಾ ಪ್ರವಾಸವನ್ನು ಬೆಳೆಸಲಿರುವ ಭಾರತ. ಈ ವೇಳೆ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.
ಸೆಪ್ಟೆಂಬರ್ 2026: ತಟಸ್ಥ ಸ್ಥಳದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಣ 3 ಟಿ20 ಪಂದ್ಯ
ಸೆಪ್ಟೆಂಬರ್- ಅಕ್ಟೋಬರ್ 2026: ಭಾರತ ಪ್ರವಾಸ ಬೆಳೆಸಲಿರುವ ವೆಸ್ಟ್ ಇಂಡೀಸ್ (3 ಏಕದಿನ, 5 ಟಿ20_
ಅಕ್ಟೋಬರ್- ನವೆಂಬರ್ 2026: ನ್ಯೂಜಿಲೆಂಡ್ ಪ್ರವಾಸ ಬೆಳೆಸಲಿರುವ ಭಾರತ (2 ಟೆಸ್ಟ್, 3 ಏಕದಿನ, 5 ಟಿ20)
ಡಿಸೆಂಬರ್ 2026: ಭಾರತ ಪ್ರವಾಸ ಬೆಳೆಸಲಿರುವ ಶ್ರೀಲಂಕಾ (3 ಏಕದಿನ, 3 ಟಿ20 ಪಂದ್ಯ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications