Team India: ಚಾಂಪಿಯನ್ಸ್ ಟ್ರೋಫಿ ನಂತರ ಟೀಮ್ ಇಂಡಿಯಾದ ಮುಂದಿನ ಗುರಿ ಏನು?
ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯನ್ನು ಟೀಮ್ ಇಂಡಿಯಾ ಸಂಭ್ರಮಾಚರಣೆಯೊಂದಿಗೆ ಕೊನೆಗೊಳಿಸಿದೆ. ಕಳೆದ ಹಲವು ತಿಂಗಳುಗಳಿಂದ ಎಲ್ಲರ ಗಮನ ಟ್ರೋಫಿಯ ಮೇಲಿತ್ತು, ಆದರೆ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಟೀಮ್ ಇಂಡಿಯಾ 4 ವಿಕೆಟ್‌ಗಳಿಂದ ಸೋಲಿಸಿತು.
ಟೀಮ್ ಇಂಡಿಯಾ 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಕೀರ್ತಿ ಪತಾಕೆ ಹಾರಿಸಿತು. ಆದರೆ ಈಗ ಟೀಮ್ ಇಂಡಿಯಾದ ಮುಂದಿನ ಗುರಿ ಬಗ್ಗೆ ನೋಡುವ ಸಮಯ ಬಂದಿದೆ. ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಯಾವಾಗ ಮತ್ತು ಯಾವ ತಂಡದ ವಿರುದ್ಧ ಆಡುತ್ತದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಟೀಮ್ ಇಂಡಿಯಾ 2024-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ಡಬ್ಲ್ಯೂಟಿಸಿ) ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸೋಲುಗಳು ಭಾರತ ತಂಡವನ್ನು ಡಬ್ಲ್ಯೂಟಿಸಿ ಫೈನಲ್ ರೇಸ್‌ನಿಂದ ಹೊರ ಹಾಕಿದವು. ಆದರೆ ಈಗ ಮುಂದಿನ ಆವೃತ್ತಿಗೆ ಟೀಮ್ ಇಂಡಿಯಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಜ್ಜಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಹೊಸ ಆವೃತ್ತಿಯೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಪ್ರಾರಂಭವಾಗಲಿದೆ.
ಇಂಗ್ಲೆಂಡ್ ಟೆಸ್ಟ್ ಸರಣಿ ಯಾವಾಗ?
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಲೇ ಮುಂದಿನ ಸರಣಿಗೆ ಟೀಮ್ ಇಂಡಿಯಾದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡ ಶೀಘ್ರದಲ್ಲೇ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಭಾರತ ತಂಡ ಜೂನ್ ನಿಂದ ಆಗಸ್ಟ್ ವರೆಗೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಮೊದಲ ಪಂದ್ಯ ಜೂನ್ 20 ರಂದು ಲೀಡ್ಸ್‌ನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ, ಎಲ್ಲಾ ಟೀಮ್ ಇಂಡಿಯಾ ಆಟಗಾರರು ಐಪಿಎಲ್‌ನಲ್ಲಿ ಬ್ಯುಸಿಯಾಗಲಿದ್ದಾರೆ.
ಡಬ್ಲ್ಯೂಟಿಸಿ ಫೈನಲ್
ಜೂನ್ 11 ರಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ. ತವರಿನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕಾಂಗರೂ ಪಡೆ ಭಾರತವನ್ನು ಸೋಲಿಸುವ ಮೂಲಕ ಫೈನಲ್‌ಗೆ ತಲುಪಿತ್ತು. ಈ ಸರಣಿಯ ಸೋಲಿನ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿಯ ಬಗ್ಗೆ ಮಾತುಕತೆ ನಡೆದಿತ್ತು. ಜೂನ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ಪ್ರವಾಸದಲ್ಲಿ ಈ ಇಬ್ಬರು ಅನುಭವಿ ಆಟಗಾರರು ಟೀಮ್ ಇಂಡಿಯಾ ಪರ ಕಾಣಿಸಿಕೊಳ್ಳುತ್ತಾರೋ? ಇಲ್ಲವೋ? ಎಂಬುದು ಈಗ ಕುತೂಹಲಕಾರಿಯಾಗಿದೆ.
ಟೀಮ್ ಇಂಡಿಯಾ ವೇಳಾಪಟ್ಟಿ
ಇಂಗ್ಲೆಂಡ್ ಪ್ರವಾಸ - 5 ಪಂದ್ಯಗಳ ಟೆಸ್ಟ್ ಸರಣಿ (ಜೂನ್ 21 - ಆಗಸ್ಟ್ 4, 2025)
ಬಾಂಗ್ಲಾದೇಶ ಪ್ರವಾಸ - 3 ಏಕದಿನ, 3 ಟಿ20 ಪಂದ್ಯಗಳ ಸರಣಿ (ಆಗಸ್ಟ್ 2025)
ಏಷ್ಯಾ ಕಪ್ 2025 (ಸೆಪ್ಟೆಂಬರ್ 2025)
ವೆಸ್ಟ್ ಇಂಡೀಸ್ ತಂಡದ ಭಾರತ ಪ್ರವಾಸ - 2 ಪಂದ್ಯಗಳ ಟೆಸ್ಟ್ ಸರಣಿ (ಅಕ್ಟೋಬರ್ 2025)
ಆಸ್ಟ್ರೇಲಿಯಾ ಪ್ರವಾಸ - 3 ಏಕದಿನ, 5 ಟಿ20 ಪಂದ್ಯಗಳ ಸರಣಿ (ಅಕ್ಟೋಬರ್/ನವೆಂಬರ್ 2025)
ದಕ್ಷಿಣ ಆಫ್ರಿಕಾ ತಂಡದ ಭಾರತ ಪ್ರವಾಸ - 2 ಟೆಸ್ಟ್, 3 ಏಕದಿನ , 5 ಟಿ20 ಪಂದ್ಯಗಳ ಸರಣಿ (ನವೆಂಬರ್/ಡಿಸೆಂಬರ್ 2025)
ನ್ಯೂಜಿಲೆಂಡ್ ತಂಡದ ಭಾರತ ಪ್ರವಾಸ - 3 ಏಕದಿನ, 5 ಟಿ20 ಪಂದ್ಯಗಳ ಸರಣಿ (ಜನವರಿ 2026)
ಟಿ20 ವಿಶ್ವಕಪ್ 2026 - ಭಾರತ/ಶ್ರೀಲಂಕಾ (ಫೆಬ್ರವರಿ/ಮಾರ್ಚ್ 2026)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications