IND vs ENG: ಇಂಗ್ಲೆಂಡ್ ಪ್ರವಾಸದ ಟೀಮ್ ಇಂಡಿಯಾ ವೇಳಾಪಟ್ಟಿ ರಿಲೀಸ್
ನವದೆಹಲಿ: ಮುಂದಿನ ವರ್ಷ 2025ರಲ್ಲಿ ಭಾರತ ತಂಡವು ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡವು 5 ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಈ ಐದು ಟೆಸ್ಟ್‌ಗಳ ಸರಣಿಯ ವೇಳಾಪಟ್ಟಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಪ್ರಕಟಿಸಿದೆ. ಟೀಮ್ ಇಂಡಿಯಾ 2 ತಿಂಗಳ ಸುದೀರ್ಘ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.

2007 ರಿಂದ ಇಂಗ್ಲೆಂಡ್ ನೆಲದಲ್ಲಿ ಭಾರತ ತಂಡವು ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಮೂರು ವರ್ಷಗಳ ಹಿಂದೆ 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸರಣಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತ್ತು. ಸರಣಿಯು 2-2 ಡ್ರಾದಲ್ಲಿ ಕೊನೆಗೊಂಡಿತ್ತು.
ಈಗ ಮುಂದಿನ ವರ್ಷ ಇಂಗ್ಲೆಂಡ್ ವಿರುದ್ಧ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಸರಣಿ ಗೆಲ್ಲುವ ನಿರೀಕ್ಷೆಯಿದೆ. ರೋಹಿತ್ ಶರ್ಮಾ ಈಗಾಗಲೇ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳನ್ನು ತವರಿನಲ್ಲಿ ಸೋಲಿಸಿ ಇತಿಹಾಸ ನಿರ್ಮಿಸಿದ್ದಾರೆ.
ಭಾರತ vs ಇಂಗ್ಲೆಂಡೆ ಟೆಸ್ಟ್ ಸರಣಿ- 2025
1ನೇ ಟೆಸ್ಟ್ - ಜೂನ್ 20 ರಿಂದ 24 (ಹೆಡಿಂಗ್ಲಿ)
2ನೇ ಟೆಸ್ಟ್ - ಜುಲೈ 2 ರಿಂದ 6 (ಎಡ್ಜ್‌ಬಾಸ್ಟನ್)
3 ನೇ ಟೆಸ್ಟ್ - ಜುಲೈ 10 ರಿಂದ 14 (ಲಾರ್ಡ್ಸ್)
4 ನೇ ಟೆಸ್ಟ್ - ಜುಲೈ 23 ರಿಂದ 27 (ಓಲ್ಡ್ ಟ್ರಾಫರ್ಡ್)
5 ನೇ ಟೆಸ್ಟ್ - ಜುಲೈ 31 ರಿಂದ ಆಗಸ್ಟ್ 4 (ಓವಲ್)
ತವರಿನಲ್ಲಿ ಸರಣಿ ಕೈ ವಶ
ಈ ವರ್ಷ ಆರಂಭದಲ್ಲಿ ಇಂಗ್ಲೆಂಡ್ ತಂಡವು ಭಾರತ ಪ್ರವಾಸ ಕೈಗೊಂಡಿತ್ತು. ಈ ವೇಳೆ ಉಭಯ ತಂಡಗಳು ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿದ್ದವು. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಸೋತ ನಂತರ, ಇಂಗ್ಲೆಂಡ್ ವಿರುದ್ಧ ಭಾರತ 4-1 ಅಂತರದಿಂದ ಗೆದ್ದು ಸರಣಿ ವಶ ಕೈ ಮಾಡಿಕೊಂಡಿತ್ತು.
ಈ ಸರಣಿಯಲ್ಲಿ ಯುವ ಸ್ಟಾರ್ ಆಟಗಾರರಾದ ಧ್ರುವ್ ಜುರೆಲ್, ಸರ್ಫರಾಜ್ ಖಾನ್, ದೇವದತ್ ಪಡಿಕ್ಕಲ್, ಆಕಾಶದೀಪ್ ಮತ್ತು ರಜತ್ ಪಾಟಿದಾರ್ ಅವರು ಭಾರತ ತಂಡದ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications