For Quick Alerts
ALLOW NOTIFICATIONS  
For Daily Alerts
 

India Vs Australia: ಪವರ್ ಪ್ಲೇನಲ್ಲಿ ಪವರ್ ಪ್ಯಾಕ್ ಪರ್ಫಾಮೆನ್ಸ್ ನೀಡಿದ ಸಿರಾಜ್

By ನಾಗೇಶ್

ಟೀಮ್ ಇಂಡಿಯಾ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಇತ್ತೀಚಿಗಷ್ಟೇ ಶ್ರೀಲಂಕಾ ವಿರುದ್ಧ ಫೈನಲ್ ಪಂದ್ಯದಲ್ಲಿ ಬಿಗುವಿನ ದಾಳಿ ನಡೆಸಿ ಅಬ್ಬರಿಸಿದ್ದ ಸಿರಾಜ್ ಮತ್ತೊಮ್ಮೆ ತಮ್ಮ ಬಿಗುವಿನ ದಾಳಿಯ ಮೂಲಕ ಗಮನ ಸೆಳೆದಿದ್ದಾರೆ. ಇತ್ತೀಚಿಗೆ ಸಿರಾಜ್ ನೀಡಿದ ಪ್ರದರ್ಶನ ಅವರ ಮೇಲೆ ಭರವಸೆ ಮೂಡಿಸುವಂತೆ ಮಾಡಿದೆ.

ಹೈದರಾಬಾದ್ ವೇಗಿ ಮೊಹಮ್ಮದ್ ಸಿರಾಜ್ ಪವರ್ ಪ್ಲೇ ಓವರ್ ಗಳಲ್ಲಿ ತಮ್ಮ ಬಿಗುವಿನ ಬೌಲಿಂಗ್ ದಾಳಿಯಿಂದ ಪ್ರಭಾವಿತರಾಗಿದ್ದಾರೆ. ಪವರ್ ಪ್ಲೇ ಓವರ್ ಗಳಲ್ಲಿ ಮೊಹಮ್ಮದ್ ಸಿರಾಜ್ ಅವರ ಅಂಕಿಅಂಶಗಳು ಅಮೋಘವಾಗಿವೆ. ವಿಶ್ವಕಪ್ 2019ರ ನಂತರ, ಮೊಹಮ್ಮದ್ ಸಿರಾಜ್ ಪವರ್ ಪ್ಲೇ ಓವರ್ ಗಳಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳಲ್ಲಿ ಒಬ್ಬರು.

Team India Seamer Mohammed Siraj Powerful Performance In Power Play Against Australia

ವಿಶ್ವಕಪ್ 2019 ರಿಂದ, ಮೊಹಮ್ಮದ್ ಸಿರಾಜ್ ಪವರ್ ಪ್ಲೇ ಓವರ್ ಗಳಲ್ಲಿ 32 ಆಟಗಾರರನ್ನು ಔಟ್ ಮಾಡಿದ್ದಾರೆ. ಪವರ್ ಪ್ಲೇ ನಲ್ಲಿ ಗರಿಷ್ಠ ವಿಕೆಟ್ ಗಳನ್ನು ಪಡೆದ ರಾಜ ನಂತೆ ಸಿರಾಜ್ ಮೆರೆಯುತ್ತಿದ್ದಾರೆ. ಈ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ಅಕ್ಕ ಪಕ್ಕದಲ್ಲಿಯೂ ಯಾವೊಬ್ಬ ಬೌಲರ್ ಇಲ್ಲ. ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಇವರಿಗಿಂತ ಕೊಂಚ ಹಿಂದೆ ಇದ್ದಾರೆ.

ಇವರ ಸನಿಹದಲ್ಲಿರುವ ಆಸ್ಟ್ರೇಲಿಯಾದ ವೇಗದ ಬೌಲರ್ ಸ್ಟಾರ್ಕ್ ವಿಶ್ವಕಪ್ 2019 ರಿಂದ ಪವರ್ ಪ್ಲೇ ಓವರ್ ಗಳಲ್ಲಿ 25 ವಿಕೆಟ್ ಗಳನ್ನು ಪಡೆದಿದ್ದಾರೆ. ಮೊಹಮ್ಮದ್ ಸಿರಾಜ್ ಮತ್ತು ಮಿಚೆಲ್ ಸ್ಟಾರ್ಕ್ ನಂತರ ನ್ಯೂಜಿಲೆಂಡಿನ ಮ್ಯಾಟ್ ಹೆನ್ರಿ ಮೂರನೇ ಸ್ಥಾನದಲ್ಲಿದ್ದಾರೆ.

ಮ್ಯಾಟ್ ಹೆನ್ರಿ ಅವರ ಹೆಸರಿನಲ್ಲಿ 23 ವಿಕೆಟ್ ಗಳಿವೆ. ಇದರ ನಂತರ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್ ವುಡ್ ಇದ್ದಾರೆ. ಜೋಶ್ ಹ್ಯಾಜಲ್ವುಡ್ 19 ಆಟಗಾರರನ್ನು ಪೆವಿಲಿಯನ್ ಗೆ ಅಟ್ಟಿದ್ದಾರೆ. ಅಫ್ಘಾನಿಸ್ತಾನದ ವೇಗದ ಬೌಲರ್ ಫಜುಲ್ಲಾ ಫಾರೂಕಿ ಪವರ್ ಪ್ಲೇ ಓವರ್ ನಲ್ಲಿ ವಿಕೆಟ್ ಬೇಟೆ ನಡೆಸಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಆಟಗಾರ 19 ವಿಕೆಟ್ ಗಳನ್ನು ತಮ್ಮ ಹೆಸರಿನಲ್ಲಿ ಪಡೆದಿದ್ದಾರೆ.

ಈ ಮೂಲಕ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಪವರ್ ಪ್ಲೇ ಓವರ್ ಗಳಲ್ಲಿ ಅತ್ಯಂತ ಅಪಾಯಕಾರಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ ಎಂದು ಅಂಕಿಅಂಶಗಳು ಸಾಬೀತು ಪಡೆಸುತ್ತಿವೆ. ಟೀಮ್ ಇಂಡಿಯಾ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಅವರ ಏಕದಿನ ವೃತ್ತಿಜೀವನವನ್ನು ನೋಡಿದರೆ, ಈ ಆಟಗಾರ ಇದುವರೆಗೆ 31 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಈ 31 ಏಕದಿನ ಪಂದ್ಯಗಳಲ್ಲಿ ಮೊಹಮ್ಮದ್ ಸಿರಾಜ್ 20.35 ಸ್ಟ್ರೈಕ್ ರೇಟ್ ಮತ್ತು 4.86 ಎಕಾನಮಿಯಲ್ಲಿ 54 ವಿಕೆಟ್ ಪಡೆದಿದ್ದಾರೆ. ಹೊಸ ಚೆಂಡಿನ ಹೊರತಾಗಿ, ಮೊಹಮ್ಮದ್ ಸಿರಾಜ್ ಭಾರತದ ಪರ ಬಿಗುವಿನ ದಾಳಿ ನಡೆಸಬಲ್ಲ ಬೌಲರ್ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ.

Story first published: Sunday, October 8, 2023, 19:55 [IST]
Other articles published on Oct 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+