T20 World Cup 2024: ಸಂಜು ಸ್ಯಾಮ್ಸನ್ ಬಿಟ್ಟು ಅಮೆರಿಕಾಕ್ಕೆ ಹಾರಿದ ಟೀಮ್ ಇಂಡಿಯಾ 2ನೇ ಬ್ಯಾಚ್; ಕಾರಣವೇನು?
ಮೇ 28 ಮಂಗಳವಾರ, ಬಹು ನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಾಗಿ ಈಗಾಗಲೇ ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ ಮೊದಲನೇ ಬ್ಯಾಚ್ ಅಮೆರಿಕಾಕ್ಕೆ ತೆರಳಿದೆ. ಇದೀಗಾ ಸೋಮವಾರ ಟೀಮ್ ಇಂಡಿಯಾ ಎರಡನೇ ಬ್ಯಾಚ್ ಅಮೆರಿಕಾಕ್ಕೆ ಹಾರಿದೆ.
ಎರಡಣೇ ಬ್ಯಾಚ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೂವರು ಆಟಗಾರರಾದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಮೀಸಲು ಆಟಗಾರ ವೇಗ ಬೌಲರ್ ಅವೇಶ್ ಖಾನ್ ಅವರು ವಿಮಾನ ನಿಲ್ದಾಣದಲ್ಲಿರುವ ಫೋಟೋಗಳು ವೈರಲ್ ಆಗಿವೆ.

ಆದರೆ ಈ ಬ್ಯಾಚ್‌ನಲ್ಲಿ ಸಂಜು ಸ್ಯಾಮ್ಸನ್, ವಿರಾಟ್ ಕೊಹ್ಲಿ ಮತ್ತಿ ರಿಂಕು ಸಿಂಗ್ ಕಾಣಿಸಿಕೊಂಡಿಲ್ಲ. ಮೊದಲ ಬ್ಯಾಚ್ ಮೇ 25 ರಂದು ಹೊರಟಿತ್ತು. ಭಾರತ ತಂಡದಲ್ಲಿ ಅವೇಶ್ ಖಾನ್ ಅವರು ಮೀಸಲು ಆಟಗಾರನಾಗಿದ್ದು, 15 ಆಟಗಾರರ ಮುಖ್ಯ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಯುಜ್ವೇಂದ್ರ ಚಹಾಲ್ ಸ್ಥಾನ ಪಡೆದಿದ್ದಾರೆ.
ಐಪಿಎಲ್ ಫೈನಲ್‌ನಿಂದಾಗಿ ಈ ಆಟಗಾರರು ಮೊದಲ ಬ್ಯಾಚ್‌ನೊಂದಿಗೆ ಹೊರಡಲು ಸಾಧ್ಯವಾಗರಲಿಲ್ಲ. ಹೀಗಾಗಿ ಭಾರತ ತಂಡವನ್ನು ಎರಡು ಬ್ಯಾಚ್‌ಗಳಲ್ಲಿ ಕಳುಹಿಸಲು ಬಿಸಿಸಿಐ ಮುಂದಾಗಿತ್ತು. ಆದಾಗ್ಯೂ, ಎರಡು ಬ್ಯಾಚ್‌ಗಳ ನಂತರವೂ ಎಲ್ಲಾ ಆಟಗಾರರು ನ್ಯೂಯಾರ್ಕ್ ತಲುಪಲು ಸಾಧ್ಯವಾಗಿಲಿಲ್ಲ.
ಸಂಜು, ಕೊಹ್ಲಿ ಗೈರು
ಸಂಜು ಸ್ಯಾಮ್ಸನ್ ಅವರು ದುಬೈನಲ್ಲಿ ಕೆಲವು ವೈಯಕ್ತಿಕ ಕೆಲಸಗಳನ್ನು ಮುಗಿಸಬೇಕಾಗಿದೆ. ಇದರಿಂದ ಸಂಜು ತಡವಾಗಿ ನ್ಯೂಯಾರ್ಕ್ ತಲುಪಿದ್ದಾರೆ. ಇನ್ನು ವಿರಾಟ್ ಕೂಡ ವಿರಾಮದ ಕಾರಣ ಇನ್ನೂ ನ್ಯೂಯಾರ್ಕ್ ತೆರಳಿಲ್ಲ.

ವರದಿಗಳ ಪ್ರಕಾರ ಬಿಸಿಸಿಐಗೆ ಸ್ವಲ್ಪ ಸಮಯ ನೀಡುವಂತೆ ಕೊಹ್ಲಿ ಮನವಿ ಮಾಡಿದ್ದಾರೆ. ಹಾಗಾಗಿ ಜೂನ್ 1 ರಂದು ಬಾಂಗ್ಲಾದೇಶ ವಿರುದ್ಧದ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.
ಮೇ 25 ರಂದು ಹೊರಟ ಮೊದಲ ಬ್ಯಾಚ್
ಮೇ 25 ರಂದು ತೆರೆಳಿದ ಮೊದಲ ಬ್ಯಾಚ್‌ನಲ್ಲಿ ನಾಯಕ ರೋಹಿತ್ ಶರ್ಮಾ ಜೊತೆಗೆ ವಿಕೆಟ್ ಕೀಪರ್ ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಶಿವಂ ದುಬೆ, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್ ಸೇರಿದಂತೆ ಮೀಸಲು ಆಟಗಾರರಾದ ಖಲೀಲ್ ಅಹ್ಮದ್, ಅರ್ಷ್‌ದೀಪ್ ಸಿಂಗ್ ಮತ್ತು ಸಿಬ್ಬಂದಿ ಇದ್ದರು.
ಹಾರ್ದಿಕ್ ಪಾಂಡ್ಯ ಲಂಡನ್‌ನಲ್ಲಿರುವ ಕಾರಣ ಮೊದಲ ಬ್ಯಾಚ್‌ನೊಂದಿಗೆ ಪ್ರಯಾಣಿಸಲು ಸಾಧ್ಯವಾಗಿರಲಿಲ್ಲ. ಆದರೆ, ಲಂಡನ್‌ನಿಂದಲೇ ನೇರವಾಗಿ ಟೀಮ್ ಇಂಡಿಯಾವನ್ನು ನ್ಯೂಯಾರ್ಕ್‌ನಲ್ಲಿ ಸೇರಿಕೊಳ್ಳಲಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶ್‌ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಮೀಸಲು ಆಟಗಾರರು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಅವೇಶ್ ಖಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications