For Quick Alerts
ALLOW NOTIFICATIONS  
For Daily Alerts
 

IPL 2025: ಮೆಗಾ ಹರಾಜು ಅಖಾಡಕ್ಕೆ ಧುಮುಕಿದ ಟೀಮ್ ಇಂಡಿಯಾದ 6 ಸ್ಟಾರ್ ಫ್ಲೇಯರ್ಸ್‌

ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳುವ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಐಪಿಎಲ್‌ನ 10 ಫ್ರಾಂಚೈಸಿ ತಂಡಗಳು 46 ಆಟಗಾರರನ್ನು ಉಳಿಸಿಕೊಂಡಿವೆ. ಇದರೊಂದಿಗೆ ಜೊತೆಗೆ ಕೆಲವು ಸ್ಟಾರ್ ಆಟಗಾರರನ್ನು ಸಹ ಬಿಡುಗಡೆ ಮಾಡಲಾಯಿತು.

ಮುಂಬೈ ಇಂಡಿಯನ್ಸ್ ತಂಡದಿಂದ ರೋಹಿತ್ ಶರ್ಮಾ ಹೊರ ಬರುತ್ತಾರೆ ಎಂಬ ಊಹಪೋಹಗಳಿಗೆ ತೆರೆ ಬಿದ್ದಿದೆ. ಎಂಎಸ್ ಧೋನಿ ಅವರು ಕೂಡ ಮುಂದಿನ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಆಡಲಿದ್ದಾರೆ. ಐಪಿಎಲ್ 2025ರ ಆವೃತ್ತಿಗೆ ಉಳಿಸಿಕೊಂಡಿರುವ ದೇಶೀ ಆಟಗಾರರ ಪೈಕಿ ವಿರಾಟ್‌ ಕೊಹ್ಲಿ ಅತಿಹೆಚ್ಚು ಮೊತ್ತಕ್ಕೆ ರಿಟೇನ್ ಆಗಿದ್ದಾರೆ. ಅವರಿಗೆ ಆರ್‌ಸಿಬಿ 21 ಕೋಟಿ. ರೂ ನೀಡಿದೆ.

Team India Six Star Players in IPL 2024 Mega Auction

ಸ್ಟಾರ್ ಆಟಗಾರರು ಐಪಿಎಲ್ 2025ರ ಮೆಗಾ ಹರಾಜು ಅಖಾಡಕ್ಕೆ ಬಂದಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಕೆಎಲ್‌ ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ ಸೇರಿದಂತೆ ಹಲವು ಸ್ಟಾರ್ ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್ ಕಳೆದ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವ ವಹಿಸಿದ್ದರು. ಕೆಕೆಆರ್‌ ತಂಡ 10 ವರ್ಷಗಳ ನಂತರ ಐಪಿಎಲ್ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದರ ಹೊರತಾಗಿಯೂ ಅವರನ್ನು ಕೆಕೆಆರ್ ಬಿಡುಗಡೆ ಮಾಡಿದೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಾಂಪಿಯನ್‌ ನಾಯಕನನ್ನು ರಿಟೇನ್ ಮಾಡಿಕೊಳ್ಳದಿರುವುದು.

ಕೆಎಲ್ ರಾಹುಲ್

ಕೆಎಲ್ ರಾಹುಲ್ ಐಪಿಎಲ್‌ನ ಅನುಭವಿ ಆಟಗಾರರಲ್ಲಿ ಒಬ್ಬರು. ಅವರು ಅನೇಕ ತಂಡಗಳಲ್ಲಿ ಆಡಿದ್ದಾರೆ. ಅವರು ಪಂಜಾಬ್ ಕಿಂಗ್ಸ್‌ ಪರ ಹಲವು ಆವೃತ್ತಿಗಳನ್ನು ಆಡಿದ್ದರು. ನಂತರ 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ (ಎಲ್‌ಎಸ್‌ಜಿ) ಗೆ ಸೇರಿದ್ದರು. ಇದೇ ಆವೃತ್ತಿಯಲ್ಲಿ ಅವರು ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ಶತಕಗಳನ್ನು ಸಿಡಿಸಿ ಮಿಂಚಿದ್ದರು. ಆದರೆ ಐಪಿಎಲ್ 2025ರ ಟೂರ್ನಿಗಾಗಿ ಅವರನ್ನು ಎಲ್‌ಎಸ್‌ಜಿ ಉಳಿಸಿಕೊಂಡಿಲ್ಲ.

ರಿಷಬ್ ಪಂತ್

ಡೆಲ್ಲಿ ಕ್ಯಾಪಿಟಲ್ಸ್‌ ಪರ ರಿಷಬ್ ಪಂತ್ ಹಲವು ದಾಖಲೆಗಳನ್ನು ಮಾಡಿದ್ದಾರೆ. 2016ರಲ್ಲಿ ಡೆಲ್ಲಿ ತಂಡ ಸೇರಿದ ಅವರು ಅತಿಹೆಚ್ಚು ರನ್ ಗಳಿಸಿದ್ದಾರೆ. 2018 ರಲ್ಲಿ ಅವರು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 128 ರನ್ ಬಾರಿಸಿ ದಾಖಲೆ ಸೃಷ್ಟಿಸಿದ್ದರು. 100ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಡೆಲ್ಲಿ ತಂಡದ ಏಕೈಕ ಬ್ಯಾಟರ್ ಕೂಡ ಪಂತ್. ಅವರು 2021 ರಲ್ಲಿ ಐಪಿಎಲ್‌ನ ಐದನೇ ಕಿರಿಯ ನಾಯಕರಾದರು. ಆದರೆ, ಮುಂಬರುವ ಆವೃತ್ತಗೆ ಡೆಲ್ಲಿ ಅವರನ್ನು ಉಳಿಸಿಕೊಂಡಿಲ್ಲ.

ಇಶಾನ್ ಕಿಶನ್

ಎದುರಾಳಿ ಬೌಲರ್ ಯಾರೆ ಇದ್ದರೂ ಸಿಕ್ಸರ್ ಹೊಡೆಯಬಲ್ಲ ಸ್ಪೋಟಕ ಎಡಗೈ ಇಶಾನ್ ಕಿಶನ್ ಆವರನ್ನು ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿಲ್ಲ. ಮೊದಲ ಬಾರಿಗೆ ಗುಜರಾತ್ ಲಯನ್ಸ್‌ ಪರ ಆಡಿದ ಅವರು ನಂತರ 2018 ರಲ್ಲಿ ಮುಂಬೈ ಇಂಡಿಯನ್ಸ್‌ಗೆ ಸೇರಿದ್ದರು. ಅಲ್ಲಿಂದ ಕಿಶನ್ ವೃತ್ತಿಜೀವನವೇ ಬದಲಾಯಿತು. ಆದರೆ ಸತತ 7 ಆವೃತ್ತಿಗಳ ನಂತರ ಮುಂಬೈ ಫ್ರಾಂಚೈಸಿ ಅವರನ್ನು ಬಿಡುಗಡೆ ಮಾಡಿದೆ. ಐಪಿಎಲ್‌ನಲ್ಲಿ 2000ಕ್ಕೂ ಹೆಚ್ಚು ರನ್ ಗಳಿಸಿದ ಮುಂಬೈ ಇಂಡಿಯನ್ಸ್‌ನ 6 ಬ್ಯಾಟರ್‌ಗಳಲ್ಲಿ ಕಿಶನ್ ಕೂಡ ಒಬ್ಬರು.

ಮೊಹಮ್ಮದ್ ಶಮಿ

ಐಪಿಎಲ್ 2023ರಲ್ಲಿ ಮೊಹಮ್ಮದ್ ಶಮಿ 17 ಪಂದ್ಯಗಳಲ್ಲಿ 28 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದರು. ಆದರೆ ಪ್ರಸ್ತುತ ಶಮಿ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದಾರೆ. ಕಳೆದ ವರ್ಷ ಅಹಮದಾಬಾದ್‌ನಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿ ನಂತರ ಶಮಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಅವರು ಯಾವಾಗ ಮೈದಾನಕ್ಕೆ ಮರಳುತ್ತಾರೆ ಎಂಬುದು ಇನ್ನೂ ತಿಳಿದಿಲ್ಲ. ಬಹುಶಃ ಈ ಕಾರಣಕ್ಕಾಗಿಯೇ ಗುಜರಾತ್ ಅವರನ್ನು ಬಿಡುಗಡೆ ಮಾಡಿದೆ.

ಯುಜ್ವೇಂದ್ರ ಚಹಾಲ್

ಯುಜ್ವೇಂದ್ರ ಚಹಾಲ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಐಪಿಎಲ್‌ನಲ್ಲಿ ಚಹಾಲ್ 200 ವಿಕೆಟ್‌ ಪಡೆದ ಏಕೈಕ ಬೌಲರ್‌ ಎನಿಸಿಕೊಂಡಿದ್ದಾರೆ. ಆದರೆ ಈ ದಾಖಲೆ ಹೊರೆತಾಗಿಯೂ, ರಾಜಸ್ಥಾನ ರಾಯಲ್ಸ್ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಮುಂಬರುವ ಮೆಗಾ ಹರಾಜಿನಲ್ಲಿ ಚಹಾಲ್ ಅವರು ಭಾರೀ ಮೊತ್ತ ಪಡೆದರೆ ಅಚ್ಚರಿ ಪಡಬೇಕಿಲ್ಲ.

Story first published: Friday, November 1, 2024, 11:25 [IST]
Other articles published on Nov 1, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+