For Quick Alerts
ALLOW NOTIFICATIONS  
For Daily Alerts
 

ನಾಯಕನಾಗಿ ತನ್ನ ಮುಖ್ಯ ಜವಾಬ್ಧಾರಿ ಯಾವುದೆಂದು ಹೇಳಿದ ರೋಹಿತ್ ಶರ್ಮಾ

Team India skipper Rohit Sharma explains role of him in the Team as captain

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿರುವ ಭಾರತ ತಂಡದ ಖಾಯಂ ನಾಯಕ ರೋಹಿತ್ ಶರ್ಮಾ ಏಷ್ಯಾ ಕಪ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ರೋಹಿತ್ ತಮ್ಮ ನಾಯಕತ್ವದ ಯಶಸ್ಸಿನ ಗುಟ್ಟನ್ನು ಬಹಿರಣಗಪಡಿಸಿದ್ದು ಟೂರ್ನಿಗೂ ಮುನ್ನ ತಾನು ಹಾಗೂ ತನ್ನ ತಂಡ ಯಾವ ರೀತಿಯಾಗಿ ಒತ್ತಡವನ್ನು ನಿಭಾಯಿಸುತ್ತದೆ ಎಂಬುದನ್ನು ಹೇಳಿಕೊಂಡಿದ್ದಾರೆ.

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು ಭಾರತ ತನ್ನ ಅಭಿಯಾನವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ. ಈ ಪಂದ್ಯ ಆಗಸ್ಟ್ 28ರಂದು ರಂದು ನಡೆಯಲಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಟೂರ್ನಿಗೂ ಮುನ್ನ ಸ್ಟಾರ್‌ಸ್ಪೋರ್ಟ್ಸ್‌ನ 'ಫಾಲೋ ದಿ ಬ್ಲೂ' ಕಾರ್ಯಕ್ರಮದಲ್ಲಿ ಭಾಗಿಯಾಗಿ ನಾಯಕತ್ವದ ವಿಚಾರವಾಗಿ ಒಂದಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಒತ್ತಡದ ಅನುಭವವಾಗದಂತೆ ಮಾಡುವುದು ಉದ್ದೇಶ

ಒತ್ತಡದ ಅನುಭವವಾಗದಂತೆ ಮಾಡುವುದು ಉದ್ದೇಶ

ಸ್ಟಾರ್‌ಸ್ಟಪೋರ್ಟ್ಸ್‌ನ ಕಾರ್ಯಕ್ರಮದಲ್ಲಿ ಭಾಗಿಯಾದ ರೋಹಿತ್ ಶರ್ಮಾ 'ನಾಯಕನಾಗಿ ನನಗೆ ತಂಡದ ಆಟಗಾರರು ದೊಡ್ಡ ಟೂರ್ನಿಗಳಲ್ಲಿ ಒತ್ತಡದ ಅನುಭವವಾಗದಂತಾ ವಾತಾವರಣವನ್ನು ನಿರ್ಮಿಸುವುದು ಬಹಳ ಮುಖ್ಯತವಾಗಿದೆ. ಆಟಗಾರರು ತಾವು ಮುಂದೆ ಬಂದು ತಮ್ಮ ಅತ್ಯುತ್ತಮ ಪ್ರದರ್ಶನ ಹೊರಬರುವಂತೆ ಮಾಡುವುದು ಪ್ರಮುಖ ಉದ್ದೇಶ. ಎಲ್ಲರೂ ಪ್ರತಿಯೊಬ್ಬರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕಾಗುತ್ತದೆ ಹಾಗೂ ಆನಂದಿಸಬೇಕು. ಯಾಕೆಂದರೆ ಒತ್ತಡಗಳು ಹೆಚ್ಚಾಗದಂತೆ ಮಾಡುವುದು ನನ್ನ ಉದ್ದೇಶ" ಎಂದಿದ್ದಾರೆ ರೋಹಿತ್ ಶರ್ಮಾ.

ಒತ್ತಡಗಳು ಸಾಮಾನ್ಯ

ಒತ್ತಡಗಳು ಸಾಮಾನ್ಯ

ಮುಂದುವರಿದು ಮಾತನಾಡಿದ ರೋಹಿತ್ ಶರ್ಮಾ 'ಆಟದಲ್ಲಿ ಒತ್ತಡಗಳು ಸಾಮಾನ್ಯ. ಯಾಕೆಂದರೆ ನೀವು ಬೌಲರ್ ಆಗಿದ್ದರೆ ಚೆಂಡನ್ನು ಹಿಡಿದುಕೊಂಡಾಗ ಒಂದು ಒತ್ತಡವಿರುತ್ತದೆ. ಬ್ಯಾಟರ್ ಆಗಿದ್ದರೆ ಬ್ಯಾಟ್‌ಅನ್ನು ಹಿಡಿದಿದ್ದರೆ ಆ ಒತ್ತಡ ನಿಮಗೆ ಅನುಭವವಾಗುತ್ತದೆ. ಅದನ್ನು ನಾವು ನಮ್ಮದೇ ರೀತಿಯಲ್ಲಿ ಎದುರಿಸಬೇಕು. ಆ ಒತ್ತಡಕ್ಕೆ ನಾಯಕನಾಗಲಿ ಕೋಚ್ ಆಗಲಿ ಏನೂ ಮಾಡಲಕು ಸಾಧ್ಯವಿಲ್ಲ. ಆಯಾಯ ಆಟಗಾರರೇ ಅದನ್ನು ನಿಭಾಯಿಸಬೇಕಾಗುತ್ತದೆ' ಎಂದಿದ್ದಾರೆ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ.

ನಾಯಕನ ಹೊಣೆಗಾರಿಕೆಯನ್ನು ಹೇಳಿದ ರೋಹಿತ್

ನಾಯಕನ ಹೊಣೆಗಾರಿಕೆಯನ್ನು ಹೇಳಿದ ರೋಹಿತ್

ಈ ಸಂದರ್ಭದಲ್ಲಿ ನಾಯಕನಾಗಿ ಜವಾಬ್ಧಾರಿ ಏನು ಎಂಬ ಅಂಶವನ್ನು ಹಂಚಿಕೊಂಡಿದ್ದಾರೆ. ತಂಡದ ಪ್ರತಿಯೊಬ್ಬ ಆಟಗಾರನೊಂದಿಗೆ ಉತ್ತಮವಾದ ಬಾಂಧವ್ಯ ಇರಬೇಕು ಎಂದ ಅವರು ಆಟಗಾರರು ಪ್ರದರ್ಶನ ಮತ್ತಷ್ಟು ಉತ್ತಮಗೊಳ್ಳಲು ಸಹಾಯ ಮಾಡಬೇಕಾಗುತ್ತದೆ. ವಿಶೇಷವಾಗಿ ಆಟಗಾರರು ಕಠಿಣ ಸಂದರ್ಭವನ್ನು ಎದುರಿಸುತ್ತಿದ್ದಾಗ ನಾಯಕನ ಜವಾಬ್ಧಾರಿ ಪ್ರಮುಖವಾಗಿರುತ್ತದೆ ಎಂದಿದ್ದಾರೆ ರೋಹಿತ್ ಶರ್ಮಾ. "ಕೆಲ ಆಟಗಾರರು ಕಠಿಣ ಸಂದರ್ಭವನ್ನು ಎದುರಿಸುತ್ತಿರುತ್ತಾರೆ. ಆ ಸಂದರ್ಭದಲ್ಲಿ ಏನಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಅರ್ಥೈಸಬೇಕಾಗುತ್ತದೆ. ಜೊತೆಗೆ ತಂಡ ಆತನಿಂದ ಏನನ್ನು ನಿರೀಕ್ಷಿಸುತ್ತಿದೆ ಹಾಗೂ ತಂಡದಲ್ಲಿ ಯಾವ ಪಾತ್ರವನ್ನು ನಿರ್ವಹಿಸಬೇಕು ಎಂಬುದನ್ನು ಸ್ಪಷ್ಟಪಡಿಸಬೇಲಾಗುತ್ತದೆ" ಎಂದಿದ್ದಾರೆ ರೋಹಿತ್ ಶರ್ಮಾ.

ಏಷ್ಯಾ ಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ

ಏಷ್ಯಾ ಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್, ಆವೇಶ್ ಖಾನ್.
ಸ್ಟ್ಯಾಂಡ್‌ಬೈ: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಹಾರ್.

Story first published: Saturday, August 20, 2022, 15:51 [IST]
Other articles published on Aug 20, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+