For Quick Alerts
ALLOW NOTIFICATIONS  
For Daily Alerts
 

Rohit Sharma: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷ ಪೂರ್ಣಗೊಳಿಸಿದ ರೋಹಿತ್ ಶರ್ಮಾ; ಹಳೇ ಫೋಟೋ ನೋಡಿ

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಈ ದಿನ ಅವಿಸ್ಮರಣೀಯವಾಗಿದೆ. ಏಕೆಂದರೆ, ಜೂನ್ 23ಕ್ಕೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷ ಪೂರ್ಣಗೊಳಿಸಿದ್ದಾರೆ.

ಮುಂಬೈನ ಪ್ರಸಿದ್ಧ ಬಲಗೈ ಬ್ಯಾಟರ್ ರೋಹಿತ್ ಶರ್ಮಾ 20 ವರ್ಷದ ಯುವಕನಾಗಿದ್ದಾಗ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರಾರಂಭಿಸಿದನು. ಅಂದಿನಿಂದ ಇಲ್ಲಿಯವರೆಗೆ ಹಲವು ಏರಿಳಿತಗಳ ನಡುವೆ ಭಾರತ ತಂಡದ ಆಧಾರಸ್ತಂಭವಾಗಿ ಬೆಳೆದಿದ್ದಾರೆ.

Team India Skipper Rohit Sharma Has Completed 16 Years In International Cricket

ಜೂನ್ 23, 2007ರಂದು ಐರ್ಲೆಂಡ್‌ ವಿರುದ್ಧದ ಏಕದಿನ ಪಂದ್ಯದಲ್ಲಿ ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ರೋಹಿತ್ ಶರ್ಮಾ ಚೊಚ್ಚಲ ಪಂದ್ಯವನ್ನು ಆಡಿದರು. ಐರ್ಲೆಂಡ್‌ನ ಕೊರೆಯುವ ಚಳಿಯ ನಡುವೆ ಪೂರ್ಣ ತೋಳಿನ ಜೆರ್ಸಿ ಧರಿಸಿದ ಯುವಕ ಮೈದಾನಕ್ಕಿಳಿದಿದ್ದನು. ಅಂದು ಭಾರತ ತಂಡವು ಸುಲಭವಾಗಿ ಪಂದ್ಯವನ್ನು ಗೆದ್ದಿತು.

ರೋಹಿತ್ ಶರ್ಮಾ ಒಟ್ಟಾರೆ 441 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 17,115 ರನ್‌ಗಳು ಮತ್ತು 43 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ. 36 ವರ್ಷದ ಹಿಟ್-ಮ್ಯಾನ್ ಇದೀಗ ತಮ್ಮ ಕ್ರಿಕೆಟ್ ವೃತ್ತಿಜೀವನದ ಪ್ರಮುಖ ಘಟ್ಟದಲ್ಲಿ ನಿಂತಿದ್ದಾರೆ. ತಮ್ಮ ನಾಯಕತ್ವದಲ್ಲಿ ಭಾರತ ತಂಡ 10 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಲು ಎದುರು ನೋಡುತ್ತಿದ್ದಾರೆ.

ಮುಂಬರುವ ವೆಸ್ಟ್ ಇಂಡೀಸ್‌ ವಿರುದ್ಧದ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಾರೆ. ಅದು ಅಂದಿನ ತಮ್ಮ ನಾಯಕ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ.

Team India Skipper Rohit Sharma Has Completed 16 Years In International Cricket

"2007ರಲ್ಲಿ ನಾನು ಭಾರತ ತಂಡಕ್ಕೆ ಆಯ್ಕೆಯಾದಾಗ, ಮೊದಲ ಬಾರಿಗೆ ನಾನು ರಾಹುಲ್ ದ್ರಾವಿಡ್ ಅವರೊಂದಿಗೆ ಸಂವಾದ ನಡೆಸುವ ಅವಕಾಶವನ್ನು ಬೆಂಗಳೂರಿನಲ್ಲಿ ಶಿಬಿರದಲ್ಲಿ ಹೊಂದಿದ್ದೆ," ಎಂದು ದ್ರಾವಿಡ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ ರೋಹಿತ್ ಶರ್ಮಾ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು.

2013ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಮೂರು ಏಕದಿನ ದ್ವಿಶತಕಗಳಲ್ಲಿ ಮೊದಲನೆಯದನ್ನು ಬಾರಿಸಿದರು. ಆ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡದ ವಿಜಯದ ನಂತರ ಅವರು ಬ್ಯಾಟಿಂಗ್ ಕ್ರಮಾಂಕದಲ್ಲಿ ಅಗ್ರಸ್ಥಾನಕ್ಕೆ ಬಡ್ತಿ ಪಡೆದರು.

ಐಸಿಸಿ ಪುರುಷರ ಏಕದಿನ ವಿಶ್ವಕಪ್ 2019ರ ಸಮಯದಲ್ಲಿ ರೋಹಿತ್ ಶರ್ಮಾ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ಆರಂಭಿಕ ಆಟಗಾರನಾಗಿ ಅವರು ಒಂಬತ್ತು ಪಂದ್ಯಗಳಲ್ಲಿ 81ರ ಸರಾಸರಿಯಲ್ಲಿ 648 ರನ್ ಗಳಿಸಿ ಪಂದ್ಯಾವಳಿಯಲ್ಲಿ ಸಾರ್ವಕಾಲಿಕ ಗರಿಷ್ಠ ಐದು ಶತಕಗಳನ್ನು ಗಳಿಸಿದ್ದರು.

ಏಕದಿನ ವಿಶ್ವಕಪ್‌ನಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ರೋಹಿತ್ ಶರ್ಮಾ ಹೊಂದಿದ್ದಾರೆ. ಮೊದಲ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ (2003ರಲ್ಲಿ 674 ರನ್) ಮತ್ತು ಮ್ಯಾಥ್ಯೂ ಹೇಡನ್ (2007ರಲ್ಲಿ 659 ರನ್) ಗಳಿಸಿದ ಶ್ರೇಷ್ಠ ಕ್ರಿಕೆಟಿಗರು.

Story first published: Friday, June 23, 2023, 22:49 [IST]
Other articles published on Jun 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+