ಜಗತ್ತಿನ ಅತ್ಯಂತ ಏಕಾಂಗಿ ವ್ಯಕ್ತಿ ಎನಿಸಿತ್ತು: ಕಠಿಣ ಸಂದರ್ಭದ ಬಗ್ಗೆ ಹೇಳಿಕೊಂಡ ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಆರಂಭದದಿಂದಲೂ ಅದ್ಭುತ ಪ್ರದರ್ಶನದ ಮೂಲಕ ಏರುಗತಿಯನ್ನೇ ಕಾಣುತ್ತಾ ಬಂದ ಆಟಗಾರ. ಕಳೆದ ಒಮದು ವರ್ಷದಿಂದೀಚೆಗೆ ವಿರಾಟ್ ಕೊಹ್ಲಿ ಶತಕವನ್ನು ಗಳಿಸದಿದ್ದರೂ ರನ್ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಆ ಒಂದು ಸಂದರ್ಭ ಮಾತ್ರ ನನ್ನ ಜೀವನದ ಅತ್ಯಂತ ಕಠಿಣ ಕ್ಷಣವಾಗಿತ್ತು ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಮಾರ್ಕ್ ನಿಕೋಲಸ್ ಜೊತೆಗೆ ಪಾಡ್‌ಕಾಸ್ಟ್‌ನಲ್ಲಿ ಪಾಲ್ಗೊಂಡ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದ ಕಠಿಣ ಸಂದರ್ಭದ ಬಗ್ಗ ಹೇಳಿಕೊಂಡಿದ್ದಾರೆ. ಒಂದು ಪ್ರವಾಸ ನನಗೆ ಬಹಳಷ್ಟು ಕಠಿಣವಾಗಿತ್ತು. ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಆ ಸಂದರ್ಭದಲ್ಲಿ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೀರಾ ಎಂದು ನಿಕೋಲಸ್ ಕೇಳಿದ ಪ್ರಶ್ನೆಗೆ ವಿರಾಟ್ ಕೊಹ್ಲಿ 'ಹೌದು' ಎಂದು ಉತ್ತರಿಸಿದ್ದಾರೆ. 'ಹೆಚ್ಚಿನ ರನ್ ಗಳಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಯುತ್ತಿರುವ ಕಾರಣ ಬೆಳಗ್ಗೆ ಎದ್ದೇಳಲು ಉತ್ತಮ ಅನುಭವ ಇರುತ್ತಿರಲಿಲ್ಲ, ನನಗನಿಸುತ್ತದೆ ಎಲ್ಲಾ ಆಟಗಾರರು ಕುಡ ಈ ರೀತಿಯ ಅನುಭವವನ್ನು ಎದುರಿಸಿರುತ್ತಾರೆ. ಆ ಸಂದರ್ಭದಲ್ಲಿ ನಿಮ್ಮ ನಿಯಂತ್ರಣದಲ್ಲಿ ಯಾವುದು ಕೂಡ ಇರುವುದಿಲ್ಲ' ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
2014ರ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಈ ಕಳಪೆ ಫಾರ್ಮ್‌ನಲ್ಲಿದ್ದರು. ಆ ಸರಣಿಯ ಐದು ಪಂದ್ಯಗಳ 10 ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ 1, 8, 25, 0, 39, 28, 0, 7, 6 ಮತ್ತು 20 ರನ್ ಗಳಿಸಿದ್ದರು. 13.50 ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ್ದರು.
"ಇಂತಾ ಪರಿಸ್ಥಿತಿಯಿಂದ ಹೇಗೆ ಹೊರ ಬರುವುದು ಎಂಬುದು ನಿಮಗೆ ಆ ಸಂದರ್ಭದಲ್ಲಿ ತಿಳಿಯುವುದಿಲ್ಲ. ಆಗ ನಾನು ಕೂಡ ಆ ಸ್ಥಿತಿಯಿಂದ ಆಚೆ ಬರಲು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಆಗ ನನಗೆ ನಾನು ಜಗತ್ತಿನಲ್ಲಿ ಅತ್ಯಂತ ಏಕಾಂಗಿ ಮನುಷ್ಯ ಎನಿಸಿತ್ತು" ಎಂದಿದ್ದಾರೆ ವಿರಾಟ್ ಕೊಹ್ಲಿ. ಅಂತಾ ಸಂದರ್ಭದಲ್ಲಿ ಮಾತನಾಡಲು ನನ್ನ ಸುತ್ತ ವ್ಯಕ್ತಿಗಳು ಇದ್ದರು. ಆದರೆ ಈ ಬಗ್ಗೆ ಏನಾಗುತ್ತಿದೆ ಎಂಬುದನ್ನು ಅರಿತುಕೊಳ್ಳಲು ವೃತ್ತಿಪರರ ಅಗತ್ಯವಿರುತ್ತದೆ" ಎಂದು ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications