ಕೊಹ್ಲಿಗೆ 30: 'ನಿನ್ನನ್ನು ಹುಟ್ಟಿಸಿದ ದೇವರಿಗೆ ಥ್ಯಾಂಕ್ಸ್' ಎಂದ ಅನುಷ್ಕಾ


ನವದೆಹಲಿ, ನವೆಂಬರ್ 5: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಂದಿಗೆ (ನವೆಂಬರ್ 5) 30ರ ಹರೆಯಕ್ಕೆ ಕಾಲಿರುತ್ತಿದ್ದಾರೆ. ತನ್ನ ಹುಟ್ಟುಹಬ್ಬವನ್ನು ಪತ್ನಿ ಅನುಷ್ಕಾ ಶರ್ಮಾ ಅವರ ಜೊತೆ ಕಳೆಯಲಿಚ್ಛಿಸಿರುವ ಕೊಹ್ಲಿ ಆ ಸಲುವಾಗಿ ಹರಿದ್ವಾರಕ್ಕೆ ಆಗಮಿಸಿದ್ದಾರೆ.
ಕೊಹ್ಲಿ-ಅನುಷ್ಕಾ ಇಬ್ಬರೂ ಶನಿವಾರ (ನವೆಂಬರ್ 4) ರಾತ್ರಿ ಡೆಹ್ರಾಡೂನ್‌ನ ಜಾಲಿ ಗ್ರ್ಯಾಂಟ್ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಅನಂತರ ಅಲ್ಲಿಂದ ನರೇಂದ್ರ ನಗರದಲ್ಲಿರುವ 'ಹೋಟೆಲ್ ಆನಂದ'ದಲ್ಲಿ ತಂಗಲು ತೆರಳಿದರು. ಈ ಜೋಡಿ ನವೆಂಬರ್ 7ರ ವರೆಗೂ ಹರಿದ್ವಾರದಲ್ಲಿ ಉಳಿಯಲಿದೆ.
ಕೊಹ್ಲಿ ತನ್ನ ಹುಟ್ಟು ಹಬ್ಬವನ್ನು ಹರಿದ್ವಾರದಲ್ಲಿರುವ ಅನಂತ್ ಧಾಮ್ ಆತ್ಮಾಬೋಧ್ ಆಶ್ರಮದಲ್ಲೂ ಆಚರಿಸುವುದರಲ್ಲಿದ್ದಾರೆ ಎನ್ನಲಾಗಿದೆ. ಸಾಮಾಜಿಕ ತಾಲತಾಣಗಳಲ್ಲಿ ಕ್ರೀಡಾಭಿಮಾನಿಗಳಿಂದ, ಸ್ಟಾರ್‌ಗಳಿಂದ ಕೊಹ್ಲಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇವೆಲ್ಲದರ ನಡುವೆ ಅನುಷ್ಕಾ ಶರ್ಮಾ ಅವರ ವಿಶ್ ಇನ್ನೂ ಸೊಗಸಾಗಿದೆ.
ವೆರಿವೆರಿ ಸ್ಪೆಷಲ್ ವಿಶ್
ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಅವರು ಭಾರತ ತಂಡದ ನಾಯಕನಿಗೆ ಟ್ವಿಟರ್ ನಲ್ಲಿ ಶುಭಾಶಯ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಯಶಸ್ಸು ನಿಮ್ಮ ಬೆನ್ನಿಗಿರಲಿ. ನೀವು ಬಯಸಿದ್ದೆಲ್ಲಾ ಸಿಗುವಂತಾಗಲಿ ಎಂದು ವೆರಿವೆರಿ ಸ್ಪೆಶಲ್ ಬ್ಯಾಟ್ಸ್ಮನ್, ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಹಾರೈಸಿದ್ದಾರೆ.
ಶತಕಗಳ ಸಂಖ್ಯೆ ಹೆಚ್ಚಲಿ ಎಂದ ಭಜ್ಜಿ
ಸ್ಪಿನ್ ಮಾಂತ್ರಿಕ, ಮಾಜಿ ಆಟಗಾರ ಹರ್ಭಜನ್ ಸಿಂಗ್ ಕೂಡ ಕೊಹ್ಲಿಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ. ಈ ವರ್ಷ ನೀವು ಹೆಚ್ಚಿನ ದಾಖಲೆ ಮುರಿಯುವಂತಾಗಲಿ, ಬರೆಯುವಂತಾಗಲಿ. ಶತಕಗಳ ಸಂಖ್ಯೆಯೂ ಹೆಚ್ಚಲಿ ಎಂದಿದ್ದಾರೆ.
ನನಗೆ ನೀವೇ ಸ್ಫೂರ್ತಿ
ಭಾನುವಾರ (ನವೆಂಬರ್ 4) ಮುಕ್ತಾಯಗೊಂಡ ಭಾರತ-ವೆಸ್ಟ್ ಇಂಡೀಸ್ ಮೊದಲ ಟಿ20ಯಲ್ಲಿ ಭಾರತ 5 ವಿಕೆಟ್ ಗೆಲುವು ಸಾಧಿಸಿ ಸರಣಿಲ್ಲಿ 1-0ಯ ಮುನ್ನಡೆಯಲ್ಲಿದೆ. ಕೇವಲ 13 ರನ್ ಗೆ 3 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖಪಾತ್ರ ವಹಿಸಿದ್ದ ಕುಲದೀಪ್ ಯಾದವ್ ಅವರೂ ವಿಶ್ ಮಾಡಿ, ನನಗೆ ನೀವೇ ಸ್ಪೂರ್ತಿ ಎಂದು ಬರೆದುಕೊಂಡಿದ್ದಾರೆ.
ಶುಭ ಕೋರಿದ ಪೂಜಾರ
ಅನುಭವಿ ಆಟಗಾರ ಚೇತೇಶ್ವರ ಪೂಜಾರ, ಕೊಹ್ಲಿಗೆ ಜನ್ಮ ದಿನದ ಶುಭಾಶಯ ತಿಳಿಸಿದ್ದಾರೆ. ಈ ವರ್ಷದುದ್ದಕ್ಕೂ ನಿಮಗೆ ಖುಷಿ-ಯಶಸ್ಸು ಇರಲಿ ಎಂದು ಹಾರೈಸಿದ್ದಾರೆ. ಐಸಿಸಿ ಟೆಸ್ಟ್ ಮತ್ತು ಏಕದಿನ ರ್ಯಾಂಕಿಂಗ್ ನಲ್ಲಿ ಕೊಹ್ಲಿ ನಂ.1 ಸ್ಥಾನದಲ್ಲಿರುವ ಬ್ಯಾಟ್ಸ್ಮನ್.
ದೇವರಿಗೊಂದು ಥ್ಯಾಂಕ್ಸ್
ಎಲ್ಲಾ ಶುಭಾಶಯಗಳ ನಡುವೆ ಹೆಚ್ಚು ಗಮನ ಸೆಳೆಯೋದು ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಅವರ ವಿಷ್. ಟ್ವಿಟರ್ ನಲ್ಲಿ ಹರಿದ್ವಾರ ಬಸದಿಯಲ್ಲಿ ನಿಂತ ಫೋಟೋ ಹಾಕಿರುವ ಅನುಷ್ಕಾ, 'ನಿನ್ನನ್ನು ಹುಟ್ಟಿಸಿದ ದೇವರಿಗೆ ಥ್ಯಾಂಕ್ಯ' ಎಂದು ಅರ್ಥಪೂರ್ಣ ಸಾಲನ್ನು ಬರೆದುಕೊಂಡಿದ್ದಾರೆ.
ಕ್ಯಾಪ್ಶನ್‌ನ ಹಂಗಿಲ್ಲದ ಕೆಲ ಸ್ವೀಟ್ ಟ್ವೀಟ್‌ಗಳು ಇಲ್ಲಿವೆ..
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications