Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಾಂಪಿಯನ್ಸ್ ಟ್ರೋಫಿಗೆ 15 ಸದಸ್ಯರ ಟೀಂ ಇಂಡಿಯಾ ಪ್ರಕಟ

ನವದೆಹಲಿ, ಮೇ 08: ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಲಿರುವ 15 ಸದಸ್ಯರ ಭಾರತ ತಂಡವನ್ನು ಸೋಮವಾರ(ಮೇ 08)ದಂದು
ಅಧಿಕೃತವಾಗಿ ಪ್ರಕಟಿಸಲಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ತಂಡಕ್ಕೆ ಶಿಖರ್ ಧವನ್, ರೋಹಿತ್ ಶರ್ಮ, ಅಜಿಂಕ್ಯ ರಹಾನೆ ಮರಳಿದ್ದರೆ, ಗೌತಮ್ ಗಂಭೀರ್ ಗೆ ಸ್ಥಾನ ಸಿಕ್ಕಿಲ್ಲ.

[#CT17 #INDvPAK ಫುಲ್ ವೇಳಾಪಟ್ಟಿ ನೋಟ್ ಮಾಡ್ಕೊಳಿ!]

ಎಂಎಸ್ ಕೆ ಪ್ರಸಾದ್ ನೇತೃತ್ವದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿಯು ತಂಡವನ್ನು ಪ್ರಕಟಿಸಿದೆ.ಜೂನ್ 1 ರಿಂದ 18ರ ವರೆಗೆ 18 ದಿನಗಳ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ 3 ಕ್ರಿಕೆಟ್ ಮೈದಾನಗಳಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಪಂದ್ಯಗಳು ನಡೆಯಲಿವೆ.

Virat Kohli

ಭಾರತೀಯ ಕಾಲಮಾನ ಪ್ರಕಾರ ಕ್ರಮವಾಗಿ ಹಗಲು ಪಂದ್ಯ ಮಧ್ಯಾಹ್ನ 3 ಗಂಟೆ ಹಾಗೂ ಹಗಲು /ರಾತ್ರಿ ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಜೂನ್ 04ರಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಿಗದಿಯಾಗಿದೆ.

ಭುಜದ ನೋವಿಗೆ ತುತ್ತಾಗಿ ಸದ್ಯ ಇಂಗ್ಲೆಂಡಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಎಲ್ ರಾಹುಲ್ ಅವರ ಅನುಪಸ್ಥಿತಿ ಭಾರತವನ್ನು ಕಾಡಲಿದೆ. ರಾಹುಲ್ ಅವರು ಪೂರ್ಣ ಪ್ರಮಾಣದಲ್ಲಿ ಫಿಟ್ ಆಗದ ಕಾರಣ, ರಾಹುಲ್ ಬದಲಿಗೆ ಅಜಿಂಕ್ಯ ರಹಾನೆ ಸ್ಥಾನ ಪಡೆದಿದ್ದಾರೆ.

ಮತ್ತೊಬ್ಬ ಓಪನರ್ ಶಿಖರ್ ಧವನ್ ಅಥವಾ ಗೌತಮ್ ಗಂಭೀರ್ ನಡುವೆ ಪೈಪೋಟಿ ಇತ್ತು. ಆದರೆ, ಆಯ್ಕೆದಾರರು ಶಿಖರ್ ಧವನ್ ಗೆ ಮಣೆ ಹಾಕಲಾಗಿದೆ.




ತಂಡ ಹೀಗಿದೆ:
* ರೋಹಿತ್ ಶರ್ಮ(ಆರಂಭಿಕ ಆಟಗಾರ)
* ಅಜಿಂಕ್ಯರಹಾನೆ (ಆರಂಭಿಕ ಆಟಗಾರ)
* ಶಿಖರ್ ಧವನ್ (ರಿಸರ್ವ್ ಓಪನರ್)
* ವಿರಾಟ್ ಕೊಹ್ಲಿ (ನಾಯಕ)
* ಯುವರಾಜ್ ಸಿಂಗ್(ಆಲ್ ರೌಂಡರ್)
* ಎಂಎಸ್ ಧೋನಿ (ವಿಕೆಟ್ ಕೀಪರ್)
* ಮನೀಶ್ ಪಾಂಡೆ (ಬ್ಯಾಟ್ಸ್ ಮನ್)
* ಕೇದಾರ್ ಜಾಧವ್(ಆಲ್ ರೌಂಡರ್)
* ಹಾರ್ದಿಕ್ ಪಾಂಡ್ಯ(ಆಲ್ ರೌಂಡರ್)
* ರವೀಂದ್ರ ಜಡೇಜ (ಆಲ್ ರೌಂಡರ್)
* ರವಿಚಂದ್ರನ್ ಅಶ್ವಿನ್ (ಸ್ಪಿನ್ನರ್)
* ಉಮೇಶ್ ಯಾದವ್ (ವೇಗಿ)

* ಭುವನೇಶ್ವರ್ ಕುಮಾರ್ (ವೇಗಿ)
* ಮೊಹಮ್ಮದ್ ಶಮಿ (ವೇಗಿ)
* ಜಸ್ ಪ್ರೀತ್ ಬೂಮ್ರಾ (ವೇಗಿ)
(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+