ಮನೆ ಮನೆಗೆ ಸಿಲಿಂಡರ್ ತಲುಪಿಸುವ ರಿಂಕು ಸಿಂಗ್ ತಂದೆಯ ವಿಡಿಯೋ ಸಖತ್ ವೈರಲ್: ನೀವು ಯಾವತ್ತೂ ನನಗೆ ಸ್ಪೂರ್ತಿ ಎಂದ ಸ್ಟಾರ್ ಪ್ಲೇಯರ್
ಟೀಮ್ ಇಂಡಿಯಾದ ಕ್ರಿಕೆಟಿಗ ರಿಂಕು ಸಿಂಗ್ ಅವರ ವಿಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ಅವರ ತಂದೆಯದ್ದಾಗಿದೆ. ರಿಂಕು ಟೀಮ್ ಇಂಡಿಯಾದ ಫ್ಯೂಚರ್ ಸೂಪರ್ ಸ್ಟಾರ್ ಎಂದೇ ಕರೆಸಿ ಕೊಳ್ಳುತ್ತಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಿಂಕು ಸಿಂಗ್ ಅವರ ತಂದೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಜನರ ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಟೀಮ್ ಇಂಡಿಯಾದ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ರಿಂಕು ಸಿಂಗ್ ಈಗ ಕ್ರಿಕೆಟ್ ಲೋಕದಲ್ಲಿ ದೊಡ್ಡ ಸ್ಟಾರ್ ಆಗಿರುವುದರಿಂದ ತಂದೆ ಈ ಕೆಲಸ ಬಿಡಬೇಕು ಎನ್ನುತ್ತಾರೆ ಸೋಶಿಯಲ್ ಮೀಡಿಯಾ ಬಳಕೆದಾರರು. ಆದರೆ, ಇದೀಗ ರಿಂಕು ಸಿಂಗ್ ತಮ್ಮ ತಂದೆಯ ಈ ಕೆಲಸಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

'ಯಾವಾಗಲೂ ಕಷ್ಟಪಟ್ಟು ದುಡಿಯಬೇಕು ಎಂದು ನನ್ನ ತಂದೆ ಹೇಳುತ್ತಿರುತ್ತಾರೆ...'ಎಂದು ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ತಮ್ಮ ತಂದೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ರಿಂಕು ಸಿಂಗ್ ಅವರ ತಂದೆ ಆಟೋದಿಂದದ ಎಲ್‌ಪಿಜಿ ಸಿಲಿಂಡರ್ ಅನ್ನು ಇಳಿಸುವುದನ್ನು ಕಾಣಬಹುದು. ಅಂದರೆ ಅವರು ತಮ್ಮ ಹಳೆಯ ಕೆಲಸವನ್ನು ಮಾಡುತ್ತಿದ್ದಾರೆ.
ಈ ವೀಡಿಯೊವನ್ನು ಹಂಚಿಕೊಂಡಿರುವ ಟೀಮ್ ಇಂಡಿಯಾ ಸೂಪರ್ ಸ್ಟಾರ್, ನನ್ನ ತಂದೆಯ ಬಗ್ಗೆ ನನಗೆ ಹೆಮ್ಮೆ ಇದೆ! ನೀವು ಯಾವಾಗಲೂ ಕಷ್ಟಪಟ್ಟು ಕೆಲಸ ಮಾಡಬೇಕು ಮತ್ತು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳಬಾರದು ಎಂದು ನನ್ನ ತಂದೆ ಯಾವಾಗಲೂ ಹೇಳುತ್ತಾರೆ. ನೀವು ಯಾವಾಗಲೂ ನನ್ನ ಸ್ಫೂರ್ತಿ ಎಂದು ಬರೆದುಕೊಂಡಿದ್ದಾರೆ.

ಇತ್ತೀಚಿಗೆ ನೀಡಿದ ಸಂದರ್ಶನ ಒಂದರಲ್ಲಿ ರಿಂಕು ಸಿಂಗ್ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ನಾನು ನನ್ನ ತಂದೆಗೆ ಅನೇಕ ಬಾರಿ ನಮ್ಮ ತಂದೆಗೆ ಈ ಕೆಲಸ ಮಾಡದಂತೆ ನಿರಾಕರಿಸಿದ್ದೇನೆ. ಆದರೆ ಅವರು ತಮ್ಮ ಕೆಲಸವನ್ನು ಬಿಡಲು ಸಿದ್ಧರಿಲ್ಲ ಎಂದು ಹೇಳಿದ್ದರು. ನನ್ನ ತಂದೆಗೆ ಈಗ ವಿಶ್ರಾಂತಿ ಪಡೆಯಲು ಹೇಳಿದ್ದೇನೆ ಏಕೆಂದರೆ. ನಮ್ಮಲ್ಲಿ ಈಗ ಎಲ್ಲವೂ ಇದೆ ಎಂದು ರಿಂಕು ತಿಳಿಸಿದ್ದರು. ಅಲ್ಲದೆ ತಂದೆ ಸಿಲಿಂಡರ್‌ಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಬಿಡಬೇಕು ಎಂದು ರಿಂಕು ಸಿಂಗ್ ಹೇಳುತ್ತಾರೆ.

ರಿಂಕು ಸಿಂಗ್ ಅವರ ತಂದೆ ಇನ್ನೂ ಈ ಕೆಲಸ ಮಾಡುತ್ತಿದ್ದಾರೆ. ಮತ್ತು ಅವರ ಕೆಲಸವನ್ನು ಪ್ರೀತಿಸುತ್ತಾನೆ. ಯಾರಾದರೂ ಜೀವನಪೂರ್ತಿ ದುಡಿದಿದ್ದರೆ, ಅವರಿಗೆ ಕೆಲಸ ಮಾಡುವುದನ್ನು ನಿಲ್ಲಿಸು ಎಂದು ಸೂಚಿಸುವುದು ಕಷ್ಟ ಎಂದು ಅವರು ಹೇಳುತ್ತಾರೆ. ಆದರೆ, ರಿಂಕು ಸಿಂಗ್ ತಂದೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದಲ್ಲದೆ, ಸಾಮಾಜಿಕ ಮಾಧ್ಯಮ ಬಳಕೆದಾರರು ನಿರಂತರವಾಗಿ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications