For Quick Alerts
ALLOW NOTIFICATIONS  
For Daily Alerts
 

IND vs ENG: ಐದನೇ ಟಿ20 ಪಂದ್ಯದಲ್ಲಿ ಅಬ್ಬರಿಸಲು ಟೀಮ್ ಇಂಡಿಯಾ ಸ್ಟಾರ್ಸ್ ಸಜ್ಜು!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯ ನಾಳೆ ಅಂದರೆ ಭಾನುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಟೀಮ್ ಇಂಡಿಯಾ ಸರಣಿ ಗೆದ್ದಿದೆ. ಇಂಗ್ಲೆಂಡ್ ವಿರುದ್ಧದ ಈ ಟಿ20 ಸರಣಿಯಲ್ಲಿ ಭಾರತ ತಂಡ 3-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಐದನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಮ್ಯಾನೇಜ್‌ಮೆಂಟ್ ಬೆಂಚ್ ಮೇಲೆ ಕುಳಿತ ಆಟಗಾರರನ್ನು ಪ್ರಯತ್ನಿಸಬಹುದು.

ಟೀಮ್ ಇಂಡಿಯಾ ವಿಕೆಟ್‌ಕೀಪರ್-ಬ್ಯಟರ್ ಸಂಜು ಸ್ಯಾಮ್ಸನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅವರು ಫಾರ್ಮ್‌ಗೆ ಮರಳಲುವ ಬಗ್ಗೆ ತಂಡ ನಿರೀಕ್ಷೆ ಇಟ್ಟುಕೊಂಡಿದೆ.

Team India Star players ready to make splash in fifth T20I against England

ಪುಣೆಯಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯವನ್ನು ಭಾರತ 15 ರನ್‌ಗಳಿಂದ ಗೆದ್ದು ಐದು ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ. ಅಲ್ಲದೆ, ಭಾರತ ಸರಣಿ ಗೆದ್ದಿದ್ದರೂ, ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಅವರ ಕಳಪೆ ಫಾರ್ಮ್ ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೂ ಮೊದಲು ವಿಜಯ್ ಹಜಾರೆ ಟ್ರೋಫಿಯಲ್ಲಿ ಸ್ಯಾಮ್ಸನ್ ಕೇರಳ ಪರ ಆಡಿರಲಿಲ್ಲ. ಪಂದ್ಯದ ಅಭ್ಯಾಸದ ಕೊರತೆ ಅವರ ಆಟದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಅವರು ಮಾರ್ಕ್ ವುಡ್ ಮತ್ತು ಜೋಫ್ರಾ ಆರ್ಚರ್ ಅವರ ಬೌಲಿಂಗ್‌ ವಿರುದ್ಧ ರನ್ ಗಳಿಸಲು ಹೋರಾಡುತ್ತಿದ್ದಾರೆ. ಸ್ಯಾಮ್ಸನ್ ಇದುವರೆಗೆ ನಾಲ್ಕು ಪಂದ್ಯಗಳಲ್ಲಿ ಕೇವಲ 35 ರನ್ ಗಳಿಸಿದ್ದಾರೆ, ಆದರೆ ಭಾರತ ತನ್ನ ಆರಂಭಿಕ ಜೋಡಿಯ ಸಂಯೋಜನೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವಂತೆ ಕಾಣಿಸುತ್ತಿಲ್ಲ.

ಎಂಟು ತಿಂಗಳ ಹಿಂದೆ ಬಾಂಗ್ಲಾದೇಶ ವಿರುದ್ಧ 75 ರನ್ ಗಳಿಸಿದ ನಂತರ ವಿಶ್ವ ಶ್ರೇಯಾಂಕದಲ್ಲಿ ನಾಲ್ಕನೇ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಅವರಿಗೆ ಉತ್ತಮ ಇನ್ನಿಂಗ್ಸ್ ಆಡಲು ಸಾಧ್ಯವಾಗಿಲ್ಲ. ಭಾರತ ತಂಡದ ನಾಯಕ ಇಂಗ್ಲೆಂಡ್ ವಿರುದ್ಧ ಇಲ್ಲಿಯವರೆಗೆ ಎರಡು ಪಂದ್ಯಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಉಳಿದ ಎರಡು ಪಂದ್ಯಗಳಲ್ಲಿ ಅವರು 12 ಮತ್ತು 14 ರನ್ ಗಳಿಸಿದ್ದಾರೆ. ಈಗ ಅವರು ತಮ್ಮ ತವರು ನೆಲದಲ್ಲಿ ದೊಡ್ಡ ಇನ್ನಿಂಗ್ಸ್ ಆಡುವ ಮೂಲಕ ಫಾರ್ಮ್‌ಗೆ ಮರಳಲು ಸಜ್ಜಾಗಿದ್ದಾರೆ. ಆದರೆ, ರಿಂಕು ಸಿಂಗ್ ನಾಲ್ಕನೇ ಪಂದ್ಯದಲ್ಲಿ 30 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ಫಾರ್ಮ್ ಮತ್ತು ಫಿಟ್‌ನೆಸ್ ಬಗ್ಗೆ ವ್ಯಕ್ತಪಡಿಸಿದ ಕಳವಳವನ್ನು ನಿವಾರಿಸಿದರು.

ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟಿ20 ಪಂದ್ಯದಲ್ಲಿ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಬಿರುಸಿನ ಅರ್ಧಶತಕಗಳನ್ನು ಗಳಿಸಿದರು. ಇದೀಗ ವಾಂಖೆಡೆ ಸ್ಟೇಡಿಯಂನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಅವರು ಮತ್ತೆ ತಮ್ಮ ಬ್ಯಾಟಿಂಗ್ ಅಬ್ಬರವನ್ನು ತೋರಿಸಲು ತಯಾರಾಗುತ್ತಿದ್ದಾರೆ.

ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ವೇಗದ ಬೌಲರ್ ಮೊಹಮ್ಮದ್ ಶಮಿ ಮೂರನೇ ಪಂದ್ಯದಲ್ಲಿ ಆಡಿದ್ದರೂ ನಾಲ್ಕನೇ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದರು. ಐದನೇ ಪಂದ್ಯದಲ್ಲಿ ಆಡುವ ಹನ್ನೊಂದರಲ್ಲಿ ಅವರನ್ನು ಸೇರಿಸುವ ಮೂಲಕ ಅವರ ಫಿಟ್ನೆಸ್ ಅನ್ನು ಮರು ಮೌಲ್ಯಮಾಪನ ಮಾಡಲು ತಂಡದ ಮ್ಯಾನೇಜ್ಮೆಂಟ್ ಮುಂದಾಗಬಹುದು. ಇಂಗ್ಲೆಂಡ್ ತಂಡದ ಬಗ್ಗೆ ನೋಡುವುದಾದರೆ ಇದುವರೆಗೆ ಯಾವುದೇ ವಿಭಾಗದಲ್ಲೂ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹ್ಯಾರಿ ಬ್ರೂಕ್ ಫಾರ್ಮ್‌ಗೆ ಮರಳಿರುವುದು ಅವರಿಗೆ ಲಾಭದಾಯಕವಾಗಿದೆ.

Story first published: Saturday, February 1, 2025, 16:40 [IST]
Other articles published on Feb 1, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+