ವಿರಾಟ್ ಕೊಹ್ಲಿ ರಕ್ತದಲ್ಲಿ ಏನಿದೆ ಎಂಬ ಸಿಕ್ರೆಟ್ ಬಿಚ್ಚಿಟ್ಟ ಎಬಿಡಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂದಾಕ್ಷಣ ನೆನಪಿಗೆ ಬರುವ ಮೂರ್ನಾಲ್ಕು ಹೆಸರುಗಳು ಕಣ್ಣು ಮುಂದೆ ಬಂದು ಹೋಗುತ್ತವೆ. ಅದರಲ್ಲಿ ಎಲ್ಲರ ಕಣ್ಣು ಕುಕ್ಕವ ಆಟಗಾರರು ಎಂದರೆ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಹಾಗೂ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್.. ಇವರಿಬ್ಬರ ಸ್ನೇಹ ಎಂತಹದ್ದು ಎಂದು ಇಡಿ ವಿಶ್ವ ಕ್ರಿಕೆಟ್‌ಗೆ ತಿಳಿದಿದೆ. ತನ್ನ ಜಿಗರಿ ಗೆಳೆಯ ಬಗ್ಗೆ ಕೆಲವು ಸಿಕ್ರೇಟ್ ಬಿಚ್ಚಿಟ್ಟಿದ್ದಾರೆ.
ಐಪಿಎಲ್‌ನಲ್ಲಿ ದೆಹಲಿ ತಂಡವನ್ನು ತೊರೆದ ನಂತರ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸೇರಿದರು. ಆರ್‌ಸಿಬಿಗೆ ಸೇರಿದ ನಂತರ ಡಿವಿಲಿಯರ್ಸ್ ಕೊಹ್ಲಿಯೊಂದಿಗೆ ಹಲವು ಶ್ರೇಷ್ಠ ಇನ್ನಿಂಗ್ಸ್‌ಗಳನ್ನು ಆಡಿ ಗಮನ ಸೆಳೆದಿದ್ದಾರೆ. ಡಿವಿಲಿಯರ್ಸ್ ನವೆಂಬರ್ 2021 ರಲ್ಲಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಗೆಳೆಯ ವಿರಾಟ್ ಕೊಹ್ಲಿ 14 ತಿಂಗಳ ಬಳಿಕ ಟಿ20 ಕ್ರಿಕೆಟ್‌ಗೆ ಮರಳಿರುವ ಬಗ್ಗೆ ಎಬಿ ಡಿವಿಲಿಯರ್ಸ್ ಕೂಡ ಹೇಳಿಕೆ ನೀಡಿದ್ದಾರೆ. ವಿರಾಟ್ ಅವರಲ್ಲಿ ಇನ್ನು ಟಿ20 ಕ್ರಿಕೆಟ್ ಆಡುವ ಸಾಮರ್ಥ್ಯ ಇದೆ. ಅವರು ಮತ್ತೆ ಅಂಗಳಕ್ಕೆ ಬಂದಿದ್ದರಿಂದ ಅಚ್ಚರಿ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ವಿರಾಟ್ ಟಿ20 ಕ್ರಿಕೆಟ್‌ಗೆ ಮರಳಿದ್ದರ ಬಗ್ಗೆ ಎಬಿಡಿ ಹೇಳಿದ್ದೇನು?
2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್, ಕೊನೆಯ ಬಾರಿಗೆ ಬ್ಲ್ಯೂ ಜೆರ್ಸಿ ತೊಟ್ಟು ಟಿ20 ಫಾರ್ಮೆಟ್‌ನಲ್ಲಿ ಕಣಕ್ಕೆ ಇಳಿದಿದ್ದರು. ಆದದ ಬಳಿಕ ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಬ್ಯಾಟ್ ಮಾಡುವುದನ್ನು ಅಭಿಮಾನಿಗಳು ನೋಡುತ್ತಿದ್ದಾರೆ. ಆಫ್ಘಾನ್ ವಿರುದ್ಧದ ಎರಡನೇ ಪಂದ್ಯದಲ್ಲಿ ತಮ್ಮ ಕ್ಲಾಸಿಕ್ ಆಟದ ಪ್ರದರ್ಶನ ನೀಡಿದ್ದ ವಿರಾಟ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಲ್ಲದೆ ಈ ಇನ್ನಿಂಗ್ಸ್‌ನಲ್ಲಿ ನವಿನ್ ಉಲ್ ಹಕ್‌ಗೆ ಒಂದು ಸ್ಟ್ರೇಟ್ ಬೌಂಡರಿ ಬಾರಿಸುವ ಮೂಲಕ ತಮ್ಮ ಹೊಸ ವರ್ಷನ್ ಅನಾವರಣ ಮಾಡಿದ್ದರು.
ಪಿಟಿಐಗೆ ಡಿವಿಲಿಯರ್ಸ್ ಸಂದರ್ಶನ ನೀಡಿದ್ದಾರೆ. ಈ ವೇಳೆ ಎಬಿಡಿ ವಿರಾಟ್, ಟಿ20 ಕ್ರಿಕೆಟ್‌ಗೆ ಮರಳಿದ್ದರ ಬಗ್ಗೆ ಮಾತನಾಡಿದ್ದಾರೆ. 'ನನಗೆ ಆಶ್ಚರ್ಯವಿಲ್ಲ. ವಿರಾಟ್ ಮತ್ತು ರೋಹಿತ್ ಟಿ20 ಕ್ರಿಕೆಟ್ ಆಡುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ. ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ತಂಡವನ್ನು ಕಳುಹಿಸುವ ಮೂಲಕ ನೀವು ಗೆಲ್ಲಲು ಬಯಸುತ್ತೀರಿ. ನಿರಂತರವಾಗಿ ಟಿ20 ಆಡುತ್ತಿರುವ ಆಟಗಾರರಿಂದ ಅವಕಾಶವನ್ನು ಕಿತ್ತುಕೊಂಡಿರುವುದರಿಂದ ಟೀಕೆಗಳು ಸಾಮಾನ್ಯ ಎಂದು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದಿದ್ದಾರೆ.

ರೋಹಿತ್ ಮತ್ತು ವಿರಾಟ್ ಭಾರತದ ಅತ್ಯುತ್ತಮ ಟಿ20 ತಂಡದ ಭಾಗ. ಅವರಿಗೆ ಟಿ20 ತಂಡದಲ್ಲಿ ಸ್ಥಾನ ನೀಡುವ ನಿರ್ಧಾರ ಸರಿಯಾಗಿದೆ ಎಂದಿದ್ದಾರೆ. ನನ್ನ ವೃತ್ತಿಜೀವನದ ಕೊನೆಯಲ್ಲಿ ನನ್ನ ಪರಿಸ್ಥಿತಿ ಇದೇ ರೀತಿ ಆಗಿತ್ತು. ವಿರಾಟ್ ಮತ್ತು ರೋಹಿತ್‌ಗೆ ಅವಕಾಶ ಸಿಕ್ಕಿದೆ ಮತ್ತು ಇದು ಸರಿಯಾದ ನಿರ್ಧಾರ. ನಿಮ್ಮ ಅನುಭವಿ ಆಟಗಾರರು ವಿಶ್ವಕಪ್ ಗೆಲ್ಲಿಸಿಕೊಡುತ್ತಾರೆ ಎಂದು ನೀವು ನಂಬಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ವಿರಾಟ್ ಏನನ್ನು ಚೆನ್ನಾಗಿ ಮಾಡುತ್ತಿದ್ದಾರೆ
ವಿರಾಟ್ ಅವರ ರಕ್ತನಾಳಗಳಲ್ಲಿ ಕ್ರಿಕೆಟ್ ಇದೆ. ಇದು ಅವರ ಸ್ಫೂರ್ತಿ. ಕ್ರಿಕೆಟ್‌ನ್ನು ಉತ್ಸಾಹದಿಂದ ನಾನು ಸಹ ಆಡುತ್ತಲೇ ಇದ್ದೆ. ಒಳಗಿನ ಬೆಂಕಿ ತಣ್ಣಗಾಗುತ್ತದೆ ಎಂದು ನಾನು ಭಾವಿಸಿದ ದಿನ, ನಾನು ಆಟದಿಂದ ನಿವೃತ್ತಿ ಹೊಂದಿದ್ದೇನೆ. ಅವರು ಜೀವನದಲ್ಲಿ ಪರಿಪೂರ್ಣ ಸಮತೋಲನವನ್ನು ಕಾಯ್ದುಕೊಂಡಿದ್ದಾರೆ. ಅವನು ತನ್ನ ಕುಟುಂಬದೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತಾರೆ. ವೃತ್ತಿ ಜೀವನ ಹಾಗೂ ಕುಟುಂಬವನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ.
ಯಾವುದೇ ಐಪಿಎಲ್ ತಂಡವು ನನ್ನನ್ನು ಸಲಹೆಗಾರನಾಗಲು ಸಂಪರ್ಕಿಸಿಲ್ಲ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ನಾನು ಯಾರೊಂದಿಗೂ ಮಾತನಾಡಿಲ್ಲ ಮತ್ತು ನನ್ನನ್ನು ಯಾರೂ ಸಂಪರ್ಕಿಸಿಲ್ಲ ಎಂದು ಅವರು ಹೇಳಿದರು. ಆರ್‌ಸಿಬಿಯಲ್ಲಿ ಯಾವುದೇ ಆಟಗಾರನಿಗೆ ಮಾರ್ಗದರ್ಶನ ನೀಡಲು ನನಗೆ ಸಂತೋಷವಾಗುತ್ತದೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications