For Quick Alerts
ALLOW NOTIFICATIONS  
For Daily Alerts
 

Virat Kohli: ಜನ್ಮದಿನಕ್ಕೆ ಶುಭಕೋರಿದ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಧನ್ಯವಾದ ತಿಳಿಸಿದ್ದೇಗೆ?; ಶತಕದ ಉಡುಗೊರೆ!

ಭಾನುವಾರ, ನವೆಂಬರ್ 5ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 49ನೇ ಏಕದಿನ ಶತಕ ಬಾರಿಸಿ ಸಂಭ್ರಮಿಸಿದರು.

ಅಲ್ಲದೆ, ತಮ್ಮ 35ನೇ ಜನ್ಮದಿನದಂದೇ ದಾಖಲೆ ಮುರಿಯುವ ಶತಕ ಗಳಿಸುವ ಮೂಲಕ ಸ್ಮರಣೀಯವಾಗಿಸಿಕೊಂಡರು ಮತ್ತು ಕೋಟ್ಯಂತರ ಶುಭಾಶಯಗಳಿಗಾಗಿ ಭಾರತದ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.

Team India Star Virat Kohli Thanked Fans For 35th Birthday Wishes With 49th ODI Century

ತಮ್ಮ ಹುಟ್ಟುಹಬ್ಬದಂದು ಶುಭಾಶಯ ಕೋರಿದ್ದಕ್ಕಾಗಿ ಮಾಜಿ ಸಹ ಆಟಗಾರರು, ಕ್ರಿಕೆಟ್ ಪಂಡಿತರು, ಸ್ನೇಹಿತರು ಮತ್ತು ನೆಚ್ಚಿನ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಲು ವಿರಾಟ್ ಕೊಹ್ಲಿ ಎಕ್ಸ್‌ (ಟ್ವಿಟ್ಟರ್) ಪೋಸ್ಟ್ ಮೊರೆಹೋದರು.

50 ಓವರ್‌ಗಳ ಮಾದರಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ವಿಷಯದಲ್ಲಿ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ದಾಖಲೆ ಸರಿಗಟ್ಟಲು ವಿರಾಟ್ ಕೊಹ್ಲಿ ತಮ್ಮ ದಾಖಲೆಯ 49ನೇ ಏಕದಿನ ಶತಕವನ್ನು ಪೂರ್ಣಗೊಳಿಸಿದರು.

"ಜನ್ಮದಿನದಂದು ನಿಮ್ಮ ಶುಭ ಹಾರೈಕೆಗಳಿಗಾಗಿ ಪ್ರತಿಯೊಬ್ಬರಿಗೂ ಧನ್ಯವಾದಗಳು. ಕೃತಜ್ಞತೆ ಮತ್ತು ಆಶೀರ್ವಾದ," ಎಂದು ವಿರಾಟ್ ಕೊಹ್ಲಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Team India Star Virat Kohli Thanked Fans For 35th Birthday Wishes With 49th ODI Century

ತಮ್ಮ 35ನೇ ಹುಟ್ಟುಹಬ್ಬದಂದು ವಿರಾಟ್ ಕೊಹ್ಲಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಸುದೀರ್ಘ ಏಕದಿನ ಶತಕಗಳ ದಾಖಲೆಯೊಂದಿಗೆ ಸಮಬಲ ಸಾಧಿಸಿದರು.

ವಾಸ್ತವವಾಗಿ, ವಿರಾಟ್ ಕೊಹ್ಲಿ ತಮ್ಮ ಜನ್ಮದಿನದಂದು ಏಕದಿನ ಶತಕ ಗಳಿಸಿದ ಮೂರನೇ ಭಾರತೀಯ ಬ್ಯಾಟರ್ ಎನಿಸಿಕೊಳ್ಳಲು "ಮಾಸ್ಟರ್ ಬ್ಲಾಸ್ಟರ್' ಸಚಿನ್ ತೆಂಡೂಲ್ಕರ್ ಅವರನ್ನು ಅನುಕರಿಸಿದರು.

ಸಚಿನ್ ತೆಂಡೂಲ್ಕರ್ ಸಹ 1998ರಲ್ಲಿ ತಮ್ಮ 25ನೇ ಹುಟ್ಟುಹಬ್ಬದಂದು ಈ ಸಾಧನೆ ಮಾಡಿದರು. ಅಲ್ಲದೆ, ಅವರ ಬಾಲ್ಯದ ಸ್ನೇಹಿತ ವಿನೋದ್ ಕಾಂಬ್ಳಿ ತಮ್ಮ 21ನೇ ಹುಟ್ಟುಹಬ್ಬದಂದು ಇಂಗ್ಲೆಂಡ್ ವಿರುದ್ಧ ಶತಕ ಗಳಿಸಿದ್ದರು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ 88 ರನ್ ಗಳಿಸಿ ಔಟಾಗುವ ಮುನ್ನ, ನ್ಯೂಜಿಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ 95 ರನ್ ಗಳಿಸಿ ಔಟಾಗಿದ್ದರು. ಈ ವಿಶ್ವಕಪ್‌ನಲ್ಲಿ ಎರಡ್ಮೂರು ಬಾರಿ ಶತಕದ ಮೈಲಿಗಲ್ಲು ಸಾಧಿಸುವಲ್ಲಿ ವಿರಾಟ್ ಕೊಹ್ಲಿ ತಪ್ಪಿಸಿಕೊಂಡಿದ್ದರು.

ಇದರೊಂದಿಗೆ, ವಿರಾಟ್ ಕೊಹ್ಲಿ ಸದ್ಯ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ 500 ರನ್‌ಗಳ ಗಡಿ ದಾಟಿದ್ದು ಇದೇ ಮೊದಲು. ಇದೇ ವೇಳೆ ಏಕದಿನ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಎರಡು ಶತಕಗಳನ್ನು ಗಳಿಸಿದ್ದು ಕೂಡ ಇದೇ ಮೊದಲ ನಿದರ್ಶನವಾಗಿದೆ.

ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಲು ಯಶಸ್ವಿಯಾದರೆ, ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಇದೇ ವೇಳೆ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಶತಕದ ನೆರವಿನಿಂದಾಗಿ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 326 ರನ್ ಕಲೆಹಾಕಿತು. ನಂತರ, ರವೀಂದ್ರ ಜಡೇಜಾ ಅವರ ಉತ್ತಮ ಬೌಲಿಂಗ್ ಪ್ರದರ್ಶನದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 83 ರನ್‌ಗಳಿಗೆ ಕಟ್ಟಿಹಾಕಿ 243 ರನ್‌ಗಳಿಂದ ಗೆದ್ದ ಬೀಗಿತು.

ಈ ಗೆಲುವಿನೊಂದಿಗೆ ಭಾರತ ತನ್ನ ಆರಂಭಿಕ ಎಂಟು ಪಂದ್ಯಗಳಿಂದ 16 ಅಂಕಗಳೊಂದಿಗೆ 2023ರ ವಿಶ್ವಕಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಭಾರತ ತಂಡ 2023ರ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿಯ ತನ್ನ ಮುಂದಿನ ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಭಾನುವಾರ, ನವೆಂಬರ್ 12ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಣಸಾಡಲಿದೆ.

Story first published: Monday, November 6, 2023, 17:40 [IST]
Other articles published on Nov 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+