For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಗೂ ಮುನ್ನ ಭಾರತಕ್ಕೆ ಪೆಟ್ಟು: ವೈಯಕ್ತಿಕ ಕಾರಣದಿಂದ ಎರಡು ಟೆಸ್ಟ್‌ಗಳಿಂದ ವಿರಾಟ್ ಕೊಹ್ಲಿ ಔಟ್

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಹೈದರಾಬಾದ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಟೆಸ್ಟ್‌ ಸರಣಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಭಾರತಕ್ಕೆ ಟೆಸ್ಟ್‌ ಸರಣಿ ಆರಂಭಕ್ಕೂ ಮುನ್ನವೆ ಭಾರಿ ಪೆಟ್ಟು ಬಿದ್ದಿದೆ. ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಂದ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ.

ವಿರಾಟ್ ಕೊಹ್ಲಿ ಹೆಸರನ್ನು ಹಿಂಪಡೆದಿರುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾಹಿತಿ ನೀಡಿದ್ದಾರೆ. ವಿರಾಟ್ ಕೊಹ್ಲಿ ಕುರಿತು ಬಿಸಿಸಿಐ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಇದರಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಟೆಸ್ಟ್‌ ಪಂದ್ಯದಿಂದ ಹಿಂದೆ ಸರಿದ ಬಗ್ಗೆ ಕಾರಣಗಳನ್ನು ತಿಳಿಸಿಲ್ಲ. ಅವರ ಸ್ಥಾನವನ್ನು ತುಂಬ ಆಟಗಾರನನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.

Team india star Virat Kohli withdraws from first two Tests against England citing personal reasons

ವೈಯಕ್ತಿಕ ಕಾರಣಗಳನ್ನು ಮುಂದಿಟ್ಟು ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಂದ ಹಿಂದೆ ಸರಿಯುವಂತೆ ವಿರಾಟ್ ಕೊಹ್ಲಿ ಬಿಸಿಸಿಐಗೆ ಮನವಿ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಯಕ ರೋಹಿತ್ ಶರ್ಮಾ, ತಂಡದ ಮ್ಯಾನೇಜ್ಮೆಂಟ್‌ ಮತ್ತು ಆಯ್ಕೆದಾರರೊಂದಿಗೆ ಮಾತನಾಡಿದ್ದಾರೆ ಮತ್ತು ದೇಶವನ್ನು ಪ್ರತಿನಿಧಿಸುವುದು ಅವರ ಪ್ರಮುಖ ಆದ್ಯತೆಯಾಗಿದೆ. ಕೆಲವು ವೈಯಕ್ತಿಕ ಸಂದರ್ಭಗಳಲ್ಲಿ ಕುಟುಂಬದಲ್ಲಿ ಅವರ ಉಪಸ್ಥಿತಿ ಮುಖ್ಯ. ಹೀಗಾಗಿ ತಾನು ಮೊದಲೆರೆಡು ಟೆಸ್ಟ್‌ ಪಂದ್ಯಗಳಿಂದ ದೂರು ಉಳಿಯುವುದಾಗಿ ವಿರಾಟ್‌ ತಿಳಿಸಿದ್ದಾರೆ.

"ಬಿಸಿಸಿಐ ಅವರ ನಿರ್ಧಾರವನ್ನು ಗೌರವಿಸುತ್ತದೆ ಮತ್ತು ತಂಡದ ನಿರ್ವಹಣೆಯು ಸ್ಟಾರ್ ಬ್ಯಾಟ್ಸ್‌ಮನ್‌ಗೆ ಬೆಂಬಲ ನೀಡುತ್ತದೆ. ಮತ್ತು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಉಳಿದ ಸದಸ್ಯರ ಸಾಮರ್ಥ್ಯದ ಬಗ್ಗೆ ವಿಶ್ವಾಸವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Team india star Virat Kohli withdraws from first two Tests against England citing personal reasons

ಈ ಸಮಯದಲ್ಲಿ ವಿರಾಟ್ ಕೊಹ್ಲಿ ಅವರ ಗೌಪ್ಯತೆಯನ್ನು ಗೌರವಿಸಲು ಮತ್ತು ವೈಯಕ್ತಿಕ ಕಾರಣಗಳಿಗಾಗಿ ಊಹಾಪೋಹಗಳನ್ನು ತಪ್ಪಿಸುವಂತೆ ಬಿಸಿಸಿಐ ಮಾಧ್ಯಮಗಳು ಮತ್ತು ಅಭಿಮಾನಿಗಳಿಗೆ ವಿನಂತಿಸಿದೆ. ಭಾರತ ತಂಡವನ್ನು ಬೆಂಬಲಿಸುವತ್ತ ಗಮನ ಹರಿಸಬೇಕು" ಎಂದು ಅದು ಹೇಳಿದೆ.

ಬಿಸಿಸಿಐ ಶೀಘ್ರದಲ್ಲೇ ಕೊಹ್ಲಿ ಬದಲಿ ಆಟಗಾರನನ್ನು ಘೋಷಿಸಲಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಟೀಂ ಇಂಡಿಯಾವನ್ನು ಘೋಷಿಸಲಾಗಿದೆ. ಇದರಲ್ಲಿ ವಿರಾಟ್ ಕೊಹ್ಲಿ ಅವರ ಹೆಸರೂ ಸೇರಿದೆ. ಆದರೆ ಈಗ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಅವರ ಹೆಸರನ್ನು ಹಿಂಪಡೆದಿದ್ದಾರೆ. ಇದರಿಂದಾಗಿ ಅವರ ಸ್ಥಾನ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ವಿರಾಟ್‌ ಸ್ಥಾನ ತುಂಬವವರು ಯಾರು?

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮೊದಲೆರಡು ಟೆಸ್ಟ್‌ಗೆ ಅಲಭ್ಯರಾಗುತ್ತಿದ್ದಂತೆ, ಈ ಸ್ಥಾನ ತುಂಬವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಅಂದಹಾಗೆ ರಣಜಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಚೇತೇಶ್ವರ್ ಪೂಜಾರ ಹಾಗೂ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸುತ್ತಿರುವ ಸರ್ಫರಾಜ್ ಖಾನ್‌ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Story first published: Monday, January 22, 2024, 16:13 [IST]
Other articles published on Jan 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+